ಸಾಮಾನ್ಯ ಮರಳಿನ ಬೇಡಿಕೆ ಕಡಿಮೆ ಮಾಡುತ್ತಾ ಎಂ-ಸ್ಯಾಂಡ್?

By: ಮೈಸೂರು ಪ್ರತನಿಧಿ
Subscribe to Oneindia Kannada

ಮೈಸೂರು,ಮಾರ್ಚ್,03: ಅಕ್ರಮ ಮರಳು ದಂಧೆಯಿಂದ ಮರಳಿನ ವಿತರಣೆಯಲ್ಲಿ ಸಮರ್ಪಕತೆ ಇಲ್ಲ. ಹಾಗಾಗಿ ಮರಳಿನ ಬದಲು ಕಲ್ಲಿನ ಪುಡಿಯಾದ ಎಂ-ಸ್ಯಾಂಡ್ (Manufactured Sand) ಬಳಸಿ ಕಟ್ಟಡಗಳ ಕಾಮಗಾರಿ ಕೈಗೊಳ್ಳಲಾಗಿದೆ. ಇದು ಎಷ್ಟರ ಮಟ್ಟಿಗೆ ಬಾಳಿಕೆ ಬರುತ್ತದೆ ಎಂಬುದು ಮಾತ್ರ ಯಕ್ಷ ಪ್ರಶ್ನೆ.

ಮರಳಿನ ಅಭಾವದಿಂದಾಗಿ ಖಾಸಗಿ ಹಾಗೂ ಸರ್ಕಾರಿ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಇದೀಗ ಸಿಮೆಂಟ್ ಜೊತೆಗೆ ಎಂ-ಸ್ಯಾಂಡ್ ಎಂಬ ಪುಡಿ ಬಳಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ. ಇದರಿಂದ ಅರ್ಧದಲ್ಲಿಯೇ ನಿಂತಿದ್ದ ಕೆಲಸಗಳು ಚುರುಕುಗೊಂಡಿವೆ.[ಮೂವರು ಕಾರ್ಮಿಕರ ಜೀವ ತೆಗೆದ ಮಂಡ್ಯದ ನೀರಿನ ಟ್ಯಾಂಕ್]

Manufactured sand is an alternative for river sand

ಎಂ-ಸ್ಯಾಂಡ್ ಮತ್ತು ಮರಳಿಗೆ ಇರುವ ವ್ಯತ್ಯಾಸ:

ಎಂ-ಸ್ಯಾಂಡ್ ಮರಳಿನಂತೆಯೇ ಬಾಳಿಕೆ ಬರುತ್ತದೆ. ಮರಳಿಗೆ ಹೋಲಿಸಿದರೆ ಇದರ ಬೆಲೆ ಕಡಿಮೆ. ಒಂದು ಟನ್‍ ಗೆ ಒಂಬೈನೂರರಿಂದ ಸಾವಿರ ರೂ.ಗೆ ಸಿಕ್ಕರೆ ಮರಳಿನ ಬೆಲೆ ಇದರ ಎರಡು ಪಟ್ಟು.[ಹುಬ್ಬಳ್ಳಿಯಲ್ಲಿ ಕಟ್ಟಡ ಕುಸಿತ, 7 ಸಾವು]

ಎಂ-ಸ್ಯಾಂಡ್ ಬಳಸಿ ಎಲ್ಲಿ ಕಾಮಗಾರಿ ನಡೆಯುತ್ತಿದೆ?

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊಸಕಡಜಟ್ಟಿ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ, ಮಡುವಿನಹಳ್ಳಿ ಗ್ರಾಮದ ಬಳಿ 80 ಲಕ್ಷ ರೂ. ವೆಚ್ಚದಲ್ಲಿ ಸೇತುವೆ, ಹಲವಾರು ಚರಂಡಿಗಳು ನಿರ್ಮಾಣವಾಗುತ್ತಿದೆ. ಇವುಗಳಿಗೆ ಎಂ-ಸ್ಯಾಂಡ್ ನ್ನು ಬಳಸಲಾಗುತ್ತಿದೆ.[ಅಕ್ರಮ ಮರಳು ದಂಧೆ, ಕಪಿಲೆ, ನುಗು ಜಲಾಶಯಕ್ಕೆ ಆತಂಕ]

ಎಂ-ಸ್ಯಾಂಡ್ ಬಗ್ಗೆ ಜನರ ಅಭಿಪ್ರಾಯವೇನು?

ಸಾರ್ವಜನಿಕ ಕಾಮಗಾರಿಗಳಾದ ಚರಂಡಿ, ಕಾಂಕ್ರಿಟ್ ರಸ್ತೆ, ಸೇತುವೆಯಂತಹ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ಹೆಚ್ಚು ದಿನಗಳ ಕಾಲ ಉಪಯೋಗಕ್ಕೆ ಬರಬೇಕು. ಹೀಗಾಗಿ ನಿರ್ಮಿಸುವಾಗಲೇ ಅವುಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯ. ಆದರೆ ಮರಳಿನಂತೆ ಎಂ-ಸ್ಯಾಂಡ್ ತನ್ನ ಗುಣಮಟ್ಟ ಕಾಪಾಡಿಕೊಳ್ಳುತ್ತದೆಯಾ ಎಂಬುದು ಜನರ ಅನುಮಾನವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Manufactured sand is an alternative for river sand. The cost of construction can be controlled by the use of manufactured sand as an alternative material for construction.
Please Wait while comments are loading...