ಅರಮನೆ ಫೋಟೋಶೂಟ್‌ಗೆ ಯಾರು ಕಾರಣ? ಡಿಸಿ ವರದಿ

Written By:
Subscribe to Oneindia Kannada

ಮೈಸೂರು, ಜೂನ್ 06: ವಿವಾದಕ್ಕೆ ಕಾರಣವಾಗಿರುವ ಮೈಸೂರು ಅರಮನೆಯ ಫೋಟೋಶೂಟ್ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಫೋಟೋ ಶೂಟ್ ನಿರ್ವಹಣೆ ಜವಾಬ್ದಾರಿ ಹೊತ್ತ ಅಧಿಕಾರಿಗಳು ಎಸಗಿರುವ ಕರ್ತವ್ಯ ಲೋಪ ಎಂದು ಜಿಲ್ಲಾಧಿಕಾರಿ ವರದಿ ಸಲ್ಲಿಕೆ ಮಾಡಿದ್ದಾರೆ.

ಅರಮನೆ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ ಮತ್ತು ಇತರ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ ಶಿಖಾ ವರದಿ ಸಲ್ಲಿಕೆ ಮಾಡಿದ್ದಾರೆ.[ಮೈಸೂರು ಅರಮನೆ ಫೋಟೋಶೂಟ್ ಸಾಧ್ಯವಾಗಿದ್ದು ಹೀಗೆ!]

mysuru

ಫೋಟೋ ಶೂಟ್ ಗೆ ಸಂಬಂಧಿಸಿದಂತೆ ಹಲವಾರು ಜನರನ್ನು ವಿಚಾರಣಗೆಗೆ ಒಳಪಡಿಸಿದ್ದೇವೆ. ಈ ವೇಳೆ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ ಎಂದು ಶಿಖಾ ವರದಿಯಲ್ಲಿ ಹೇಳಿದ್ದಾರೆ.

ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ನಂದಕುಮಾರ್ ಅವರ ಪುತ್ರ ಆದಿತ್ಯ ಬಿಎನ್ ಮತ್ತು ನವ್ಯತಾ ಜೋಡಿಯನ್ನು ನೋಡಿ ರಾಜ್ಯವೇ ಬೆಚ್ಚಿಬಿದ್ದಿತ್ತು.[ಪೋಟೋ ಶೂಟ್ ವಿವಾದದ ಪೂರ್ಣ ಚಿತ್ರಣ]

ಸರ್ಕಾರಕ್ಕೆ ಸಿಬ್ಬಂದಿ ಮಾಡಿರುವ ಕರ್ತವ್ಯ ಲೋಪದ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದೇನೆ. ಕ್ರಮ ಜರುಗಿಸುವಂತೆಯೂ ತಿಳಿಸಿದ್ದೇನೆ. ನಿರ್ಭಂಧಿತ ಪ್ರದೇಶದಲ್ಲಿ ಫೋಟೋ ಶೂಟ್ ಗೆ ಅವಕಾಶ ನೀಡಿದ ದಿನಾಂಕದ ವೇಳೆ ಅರಮನೆಯ ಆಡಳಿತದಲ್ಲಿದ್ದ ಎಲ್ಲರನ್ನು ವಿಚಾರಣೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Palace Photo shoot Controversy : The row surrounding a pre-wedding photo shoot at Amba Vilas Palace here has taken a new twist with Deputy Commissioner C Shikha charging Deputy Director of Palace Board T S Subramanya with dereliction of duty. In a report to the government, the DC, also the executive officer of Palace Board, is learnt to have brought the dereliction of duty on the part of the deputy director to the notice of the higher ups. The DC has also provided some incriminating evidences, substantiating the findings of the report.
Please Wait while comments are loading...