ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಅರಮನೆ ಚಿನ್ನದ ಲೇಪನದಲ್ಲಿ ಅಕ್ರಮ, ಉಪ ನಿರ್ದೇಶಕ ಅಮಾನತು

|
Google Oneindia Kannada News

ಮೈಸೂರು, ಮೇ 20 : ಅಂಬಾ ವಿಲಾಸ ಅರಮನೆಯ ಸ್ವರ್ಣ ಲೇಪನ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರನ್ನು ಅಮಾನತು ಮಾಡಲಾಗಿದೆ. ಅವ್ಯವಹಾರದ ಕುರಿತು ಲೋಕಾಯುಕ್ತ ತನಿಖೆ ನಡೆಯುತ್ತಿದೆ.

ಮೈಸೂರು ಅರಮನೆ ಮಂಡಳಿ ಅಧ್ಯಕ್ಷೆ ಮತ್ತು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಟಿ.ಎಸ್.ಸುಬ್ರಮಣ್ಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಸುಬ್ರಮಣ್ಯ ಅವರು ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನಲೆಯಲ್ಲಿ ಅಮಾತನು ಮಾಡಲಾಗಿದೆ. [ಅಂಬಾವಿಲಾಸ ಅರಮನೆ ಚಿನ್ನಲೇಪನದಲ್ಲಿ ಅಕ್ರಮ]

Mysore amba vilas palace

ಸ್ವರ್ಣ ಲೇಪನ ಕಾಮಗಾರಿಯಲ್ಲಿ ನಡೆದ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತರು ಟಿ.ಎಸ್. ಸುಬ್ರಮಣ್ಯ ಅವರು ಅದೇ ಹುದ್ದೆಯಲ್ಲಿ ಮುಂದುವರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿದ್ದರು. ಇಲಾಖೆಯ ಸೂಚನೆಯಂತೆ ಜಿಲ್ಲಾಧಿಕಾರಿಗಳು ಅಮಾನತು ಮಾಡಿದ್ದಾರೆ. [4 ಕೋಟಿ ವೆಚ್ಚದಲ್ಲಿ ಅಂಬಾ ವಿಲಾಸ ಅರಮನೆ ಅಭಿವೃದ್ಧಿ]

ಪ್ರಕರಣದ ವಿವರ : ಅಂಬಾವಿಲಾಸ ಅರಮನೆಯ ಒಳಭಾಗದಲ್ಲಿ 2011ರಲ್ಲಿ ಸ್ವರ್ಣ ಲೇಪನ ಕಾಮಗಾರಿಗೆ 55 ಲಕ್ಷ, 2012 ರಲ್ಲಿ 24 ಲಕ್ಷ ಮತ್ತು 2013ರಲ್ಲಿ 3.65 ಕೋಟಿ ಪಾವತಿ ಮಾಡಲಾಗಿದೆ. ಆದರೆ, ಕಾಮಗಾರಿ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಆದರೆ, ಅರಮನೆ ಮಂಡಳಿಯ ಅಧಿಕಾರಿಗಳು ಕಾಮಗಾರಿ ಸಮರ್ಪಕವಾಗಿ ನಡೆದಿದೆ ಎಂದು ಹಣ ಬಿಡುಗಡೆ ಮಾಡಿದ್ದರು. ಲಖನೌದಲ್ಲಿರುವ ರಾಷ್ಟ್ರೀಯ ಸಾಂಸ್ಕೃತಿಕ ಸಂಪತ್ತು ಸಂಶೋಧನೆ ಮತ್ತು ಸಂರಕ್ಷಣಾ ಪ್ರಯೋಗಾಲಯ ಸ್ವರ್ಣ ಲೇಪನ ಕಾಮಗಾರಿ ಕಳಪೆಯಾಗಿದೆ ಎಂದು ವರದಿ ನೀಡಿತ್ತು.

ಈ ಪ್ರಕರಣದ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಟಿ.ಎಸ್. ಸುಬ್ರಮಣ್ಯಂ, ನಿವೃತ್ತ ಉಪ ನಿರ್ದೇಶಕ ಪಿ.ವಿ. ಅವರಾದಿ, 2007 ರಿಂದ 2013 ರವರೆಗೆ ಎಂಜಿನಿಯರ್‌ ಗಳಾಗಿ ಕಾರ್ಯ ನಿರ್ವಹಿಸಿದ್ದ ಲಕ್ಷ್ಮೀಶ್, ಶ್ರೀನಿವಾಸ್, ರಾಜಶೇಖರ ಗೌಡ, ಮುರಳೀಧರ್, ಸೋಮಶೇಖರ್, ಪರಶಿವಮೂರ್ತಿ ಮುಂತಾದವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
Mysuru (Mysore) Deputy Commissioner C. Shikha suspended Deputy Director of the Mysore Palace Board T.S. Subramanya in connection with the 3.65 crore worth gold leafing work of Darbar Hall of Mysore Amba Vilas palace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X