ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಷಣಾರ್ಧದಲ್ಲಿ ಮೈಸೂರು ಪಾಕ್ ಗಬಗಬನೆ ತಿಂದ ಭೂಪ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 23 : ಬಾಯಿಯಲ್ಲಿ ನೀರೂರಿಸುವ ಮೈಸೂರು ಪಾಕ್ ತಿಂದ ಕಾಲೇಜು ಯುವಕರು ನಗದು ಬಹುಮಾನ ಸಹ ಪಡೆದರು. ದಸರಾ ನವರಾತ್ರಿಯ ಅಂಗವಾಗಿ ಜೆ.ಕೆ.ಮೈದಾನದ ಆಹಾರ ಮೇಳದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೈಸೂರು ಪಾಕ್ ತಿನ್ನುವ ಸ್ಪರ್ಧೆಗೆ ಆಭೂತಪೂರ್ವ ಸ್ಪಂದನೆ ದೊರೆಯಿತು.

6 ಮೈಸೂರು ಪಾಕ್ ತಿಂದು ನೀರು ಕುಡಿದ ಸ್ಪರ್ಧಾಳುಗಳು ಪ್ರೇಕ್ಷಕರಿಂದ ಚಪ್ಪಾಳೆಯ ಬಹುಮಾನ ಗಿಟ್ಟಿಸಿಕೊಂಡರು. ದಸರಾ ಮಹೋತ್ಸವದ ಆಹಾರ ಮೇಳದಲ್ಲಿ ಮೈಸೂರು ಪಾಕ್ ತಿನ್ನುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಗಬಗಬನೆ ತಿಂದು ಬಹುಮಾನಕ್ಕೆ ಪಾತ್ರರಾದರು.

Mysuru pak eating competition in food festival

ಶುಕ್ರವಾರ ನಡೆದ ಉಪ್ಪಿಟ್ಟು ತಿನ್ನುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ಪಾತ್ರರಾಗಿದ್ದ ಮಹಾರಾಜ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿ ಬಾಬುರಾಯನ ಕೊಪ್ಪಲಿನ ಕೌಶಿಕ್ ಮೈಸೂರು ಪಾಕ್ ತಿನ್ನುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು, ವಿಜಯ ಯಾತ್ರೆಯನ್ನು ಮುಂದುವರಿಸಿದರು. 5 ನಿಮಿಷಗಳಲ್ಲಿ 6 ಪೀಸ್ ಮೈಸೂರು ಪಾಕ್ ತಿನ್ನಬೇಕಿದ್ದ ಸ್ಪರ್ಧೆಯಲ್ಲಿ, ಕೇವಲ 1 ನಿಮಿಷ 38 ಸೆಕೆಂಡ್‌ಗಳಲ್ಲಿ ತಿನ್ನುವ ಮೂಲಕ ಗೆಲುವಿನ ಹಸಿವನ್ನು ನೀಗಿಸಿಕೊಂಡನು.

Mysuru pak eating competition in food festival

ಆದರ್ಶ ಅತ್ತೆ - ಸೊಸೆ ಸ್ಪರ್ಧೆ

ನಗರದ ಜೆ.ಕೆ ಮೈದಾನದಲ್ಲಿ 20 ಕ್ಕೂ ಹೆಚ್ಚು ಅತ್ತೆ-ಸೊಸೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಅತ್ತೆ-ಸೊಸೆಯರಿಗೆ ಸಂಗೀತ, ನೃತ್ಯ, ನಟನೆ ಮತ್ತು ಇನ್ನಿತರೆ ಸ್ಪರ್ಧೆಗಳನ್ನ ಸಹ ಏರ್ಪಡಿಸಲಾಗಿತ್ತು.

English summary
Mysuru pak eating competition in Mysuru dasara food festival attract the people and other competitions also interested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X