• search
For mysuru Updates
Allow Notification  

  ಮೈಸೂರು ನಗರ ಮತ್ತೆ ದೇಶದಲ್ಲೇ ಸುಂದರ!

  By Nayana
  |

  ನವದೆಹಲಿ, ಮೇ 17: ಒಳಚರಂಡಿ ವ್ಯವಸ್ಥೆ, ಸ್ವಚ್ಛತೆಯ ಅರಿವು, ತ್ಯಾಜ್ಯ ನಿರ್ವಹಣೆ , ನಾಗರಿಕರ ಸಹಭಾಗಿತ್ವ ಇತ್ಯಾದಿ ಮಾನದಂಡಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ನಡೆಸಿದ ಸ್ವಚ್ಛ ನಗರಿ 2018 ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂದೋರ್ ಮತ್ತೊಮ್ಮೆ ನಂಬರ್‌ 1 ಆಗಿದೆ.

  ಮೈಸೂರಿಗೂ ಸ್ಥಾನ: 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳ ಪೈಕಿ ವಿಜಯವಾಡ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ಇನ್ನು ಮೂರು ಲಕ್ಷದಿಂದ 10 ಲಕ್ಷದವರೆಗಿನ ಜನಸಂಖ್ಯೆಯುಳ್ಳ ನಗರಗಳ ಪೈಕಿ ಮೈಸೂರು ನಂಬರ್‌ 1 ಸ್ಥಾನದಲ್ಲಿದೆ. ರಾಜ್ಯ ರಾಜಧಾನಿಗಳ ಪೈಕಿ ಮುಂಬೈ ಟಾಪ್‌ನಲ್ಲಿದೆ.

  ಸ್ವಚ್ಛ ನಗರಗ ಪಟ್ಟಿಯಲ್ಲಿ ಅಗ್ರಸ್ಥಾನ ತಪ್ಪಿಸಿಕೊಂಡ ಮೈಸೂರು

  ಇನ್ನು ಈ ವರ್ಷದ ಸಮೀಕ್ಷೆಯಲ್ಲಿ ಭೋಪಾಲ್‌, ಚಂಡೀಗಢ ಕ್ರಮವಾಗಿ ಎರಡು ಮ್ತು ಮೂರನೇ ಸ್ಥಾನದಲ್ಲಿದೆ. ಸ್ವಚ್ಛತೆಯ ನಿರ್ವಹಣೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ರಾಜ್ಯಗಳ ಪೈಕಿ ಜಾರ್ಖಂಡ್ ಮೊದಲ ಸ್ಥಾನದಲ್ಲಿದೆ.

  ಎರಡು ಮತ್ತು ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಇವೆ ಎಂದು ಕೇಂದ್ರದ ವಸತಿ ಮತ್ತು ನಗರ ನಿರ್ವಹಣೆ ಖಾತೆ ಸಹಾಯಕ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಮಾಧ್ಯಮಗಳ ಮುಂದೆ ಪಟ್ಟಿ ಬಿಡುಗಡೆ ಮಾಡಿ ತಿಳಿಸಿದರು.

  ಕಳೆದ ವರ್ಷದ ಸಮೀಕ್ಷೆಯಲ್ಲಿ 430 ನಗರಗಳನ್ನಷ್ಟೆ ಆಯ್ದುಕೊಳ್ಳಲಾಗಿತ್ತು. ಆದರೆ ಈ ಬಾರಿ 4,203 ನಗರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಸದ್ಯದಲ್ಲೇ ಪ್ರಶಸ್ತಿ ಪ್ರಧಾನ ಸಮಾರಂಭದ ದಿನಾಂಕ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು. 37.66 ಲಕ್ಷ ಜನ ಭಾಗಿ: ದೇಶಾದ್ಯಂತ 4203 ನಗರಗಳಲ್ಲಿನ 37.66 ಲಕ್ಷ ಜನರು ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಮೈಸೂರು ಸುದ್ದಿಗಳುView All

  English summary
  Union urban development ministry has declared best clean cities in the country. City of palace, Mysuru has won the award in lesser population city category.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more