ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಬಂದ್: ಭದ್ರತೆಯಲ್ಲಿ ರಾಜು ಅಂತ್ಯಸಂಸ್ಕಾರ

|
Google Oneindia Kannada News

ಮೈಸೂರು, ಮಾರ್ಚ್, 14: ಬಿಜೆಪಿ ಕಾರ್ಯಕರ್ತನ ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಕರೆ ನೀಡಿರುವ ಮೈಸೂರು ಬಂದ್ ಹಿಂಸಾಚಾರಕ್ಕೆ ತಿರುಗಿತ್ತು. ಅಂತಿಮವಾಗಿ ಹತ್ಯೆಗೀಡಾದ ರಾಜು ಅವರ ಅಂತಿಮ ಸಂಸ್ಕಾರವನ್ನು ಬಿಗಿ ಭದ್ರತೆಯ ನಡುವೆ ಮಾಡಿ ಮುಗಿಸಲಾಗಿದೆ.

ವಿಶ್ವ ಹಿಂದೂಪರಿಷತ್ ಮತ್ತು ಬಿಜೆಪಿ ಕಾರ್ಯಕರ್ತ ರಾಜು ಎಂಬುವವರನ್ನು ಭಾನುವಾರ ರಾತ್ರಿ ಹತ್ಯೆಗೈಯಲಾಗಿತ್ತು. ಇದಾದ ಮೇಲೆ ಹಿಂದೂಪರ ಸಂಘಟನೆಗಳು ಸೋಮವಾರ ಮೈಸೂರು ಬಂದ್ ಗೆ ಕರೆ ನೀಡಿದ್ದು ಎಲ್ಲೆಡೆ ಬಿಗಿ ಭದ್ರತೆ ನಿಯೋಜನೆ ಮಾಡಿದ್ದರೂ ಘರ್ಷಣೆ ನಡೆದಿತ್ತು. [ಮೈಸೂರು : ಬಿಜೆಪಿ ಕಾರ್ಯಕರ್ತನ ಕೊಲೆ, ಕೋಮು ಗಲಭೆ ಎಚ್ಚರಿಕೆ]

mysuru

ಬಿಗುವಿನ ವಾತಾವರಣ: ಸೋಮವಾರ ಬೆಳಿಗ್ಗೆ 9 ಗಂಟೆತನಕ ಮೈಸೂರು ನಗರ ಸಹಜ ಸ್ಥಿತಿಯಲ್ಲಿತ್ತಾದರೂ ಬಳಿಕ ಬಿಜೆಪಿ ಕಾರ್ಯಕರ್ತರು ನಗರದೆಲ್ಲೆಡೆ ಪ್ರತಿಭಟನೆ ನಡೆಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. [ಮೈಸೂರಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ]

ಬೆಳಿಗ್ಗೆ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಬಸ್ ತಡೆದು ಪ್ರತಿಭಟನೆ ನಡೆಸಿದರು. ಇದೇ ಸಂದರ್ಭ ಕೆಲವು ಆಕ್ರೋಶಿತರು ಮೂರು ಖಾಸಗಿ ಹಾಗೂ ಸಾರಿಗೆ ಬಸ್ ಗಳಿಗೆ ಕಲ್ಲು ಹೊಡೆದು ಜಖಂಗೊಳಿಸಿದ ಘಟನೆಯೂ ನಡೆದಿದೆ. ಮತ್ತೊಂದು ಕಡೆ ಎನ್.ಆರ್.ಮೊಹಲ್ಲಾದಲ್ಲಿ ಬೈಕ್ ಗಳಿಗೆ ಬೆಂಕಿ ಹಚ್ಚಲಾಗಿತ್ತು.

mysuru


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ:
ಮೈಸೂರಿನ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ. ಜನರು ಶಾಂತಿ ಭಂಗವಾಗದಂತೆ ನೋಡಿಕೊಳ್ಳಬೇಕು. ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಪ್ರಕರಣವನ್ನು ಕೂಡಲೇ ಸಿಸಿಬಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ ಧರ್ಮಸ್ಥಳದಲ್ಲಿ ಹೇಳಿಕೆ ನೀಡಿದ್ದಾರೆ.

karntaka

* ಬಿಗಿ ಭದ್ರತೆಯ ನಡುವೆ ರಾಜು ಅಂತ್ಯಸಂಸ್ಕಾರ

* ಬಂದ್ ಗೆ ನಾವು ಕರೆ ನೀಡಿದ್ದನ್ನು ಬೇರೆ ಸಂಘಟನೆಗಳು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಬಿಜೆಪಿ ಆರೋಪ ಮಾಡಿದೆ.

* ರಾಜು ಅವರ ಪಾರ್ಥಿವ ಶರೀರದ ಮೇಲೂ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

*ರಾಜು ಪಾರ್ಥಿವ ಶರೀರನ್ನು ಮೆರವಣಿಗೆ ಮೂಲಕ ಕೊಂಡೊಯ್ಯುವಾಗ ಮತ್ತೆ ಕಲ್ಲು ತೂರಾಟ ನಡೆದಿದೆ.

*ಕ್ಯಾತಮಾರನಹಳ್ಳಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

* ಪೊಲೀಸ್ ಬಿಗಿ ಭದ್ರತೆ ನಡುವೆ ಆರಂಭಗೊಂಡ ಮೆರವಣಿಗೆ

* ವಿವಾದಿತ ಸ್ಥಳದಲ್ಲಿ 15 ನಿಮಿಷ ರಾಜು ಪಾರ್ಥಿವ ಶರೀರ ಇಡಲಾಗುವುದು.

*ಇರ್ವಿನ್ ರಸ್ತೆ ಮಾರ್ಗವಾಗಿ ಮೆರವಣಿಗೆ ಮಾಡಲು ಕಾರ್ಯಕರ್ತ ಚಿಂತನೆ

* ಕಾರ್ಯಕರ್ತರಿಗೆ ರಾಜು ಪಾರ್ಥಿವ ಶರೀರ ಹಸ್ತಾಂತರ

* 25 ಲಕ್ಷ ಪರಿಹಾರ ನೀಡುವಂತೆ ಬಿಜೆಪಿ ಆಗ್ರಹ

* ಶವಾಗಾರಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ ಜಿಲ್ಲಾಧಿಕಾರಿ ಶಿಖಾ

* ಆರೋಪಿಗಳ ಬಂಧನದ ಬಗ್ಗೆ ನಾಳೆ(ಮಂಗಳವಾರ) ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ ಶಿಖಾ

* ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಮೇಲೆ ಹಲ್ಲೆ

* ಮಾರುಕಟ್ಟೆ ಗೆ ನುಗ್ಗಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ.

musuru

* ಗಲಭೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ ಮಾಜಿ ಸಚಿವ, ಬಿಜೆಪಿ ಮುಖಂಡ ರಾಮದಾಸ್

* ಎನ್ ಆರ್ ಮೊಹಲ್ಲಾದಲ್ಲಿ ಬೈಕ್ ಗೆ ಬೆಂಕಿ

* ಒಂದು ಗಂಟೆಯೊಳಗೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಕಾರ್ಯಕರ್ತರ ಬೆದರಿಕೆ.

*ವಿವಾದಿತ ಸ್ಥಳದಲ್ಲಿ ಯಥಾ ಸ್ಥಿತಿ ಕಾಪಾಡಲು ಸೂಚನೆ

* ಹತ್ಯೆಗೀಡಾದ ರಾಜು ಅವರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲು ಜಿಲ್ಲಾಧಿಕಾರಿ ಶಿಖಾ ಶಿಫಾರಸು

* ಕೆ ಆರ್ ಆಸ್ಪತ್ರೆ ಆವರಣದಲ್ಲಿ ಆಟೋಕ್ಕೆ ಬೆಂಕಿ

* ಪೊಲೀಸ್ ವಾಹನದ ಮೇಲೆ ದಾಳಿ ಮಾಡಿದ ಕಾರ್ಯಕರ್ತರು

raju

* ಗ್ರಾಮಾಂತರ ಬಸ್ ನಿಲ್ದಾಣದಲ್ಲೂ ಕಲ್ಲು ತೂರಾಟ

* ಸ್ಥಳದಲ್ಲಿ ಬಿಗುವಿನ ವಾತಾವರಣ

* ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ

* ಮಂಡಿ ಮೊಹಲ್ಲಾದ ಕಡೆ ನುಗ್ಗಿದ ಬಿಜೆಪಿ ಕಾರ್ಯಕರ್ತರು

English summary
Mysuru: Tense after a Bharatiya Janata Party worker called K Raju was killed. Raju, also a Vishwa Hindu Parishad (VHP) activist, was killed on Sunday near the Netaji circle, following which a bandh has been called by the BJP on Monday to protest against the murder of their party worker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X