ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ: ಕುದುರೆ ಏರಿ ನಗರ ಪ್ರದಕ್ಷಿಣೆ ಹಾಕಿದ ಮೇಯರ್

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 18: ಸ್ವಚ್ಛತೆ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ಇಂದು ಮಹಾನಗರಪಾಲಿಕೆ ಕಾರ್ಯಾಚರಣೆ ಆರಂಭಿಸಿದ್ದು, ಸ್ವತಃ ಮೇಯರ್ ಎಂ.ಜೆ.ರವಿಕುಮಾರ್ ಕುದುರೆ ಸವಾರಿಯಲ್ಲಿ ಪ್ರದಕ್ಷಿಣೆ ನಡೆಸಿದರು.
ನಗರದಲ್ಲಿ ಸ್ವಚ್ಛತೆಗಾಗಿ ಈಗಾಗಲೇ ಹಲವು ಕಾರ್ಯಗಳನ್ನು ರೂಪಿಸಲಾಗಿದ್ದು, ನಗರದ ಸ್ವಚ್ಛವಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಕುದುರೆ ಸವಾರಿ ನಡೆಸಿದರು.

ದಸರಾ ಜಂಬೂ ಸವಾರಿಯ ವೇಳೆ ಅವರು ಕುದುರೆಯ ಮೇಲೆ ಕುಳಿತಕೊಂಡು ಸವಾರಿ ಮಾಡಬೇಕಾಗಿರುವುದರಿಂದ ಅದರ ತಾಲೀಮು ಕೂಡಾ ನಡೆಸಿದಂತಾಯಿತು ಎನ್ನುವ ಉದ್ದೇಶದಿಂದ ಮೇಯರ್ ಕುದುರೆ ಸವಾರಿ ನಡೆಸಿದರು.

Mysuru mayor Ravikumar rides horse

ಮೇಯರ್ ಚಿತ್ರದ ವಿವಾದ
ಏತನ್ಮಧ್ಯೆ ದಸರಾ ಪ್ರಯುಕ್ತ ನಗರದ ಸೌಂದರ್ಯ ಹೆಚ್ಚಿಸಲು ಪೇಂಟಿಂಗ್ಸ್ ಗಳನ್ನು ಮಾಡಲಾಗುತ್ತಿದೆ. ಆದರೆ ಮೇಯರ್ ಎಂ.ಜೆ.ರವಿಕುಮಾರ್ ಅವರು ಕುದುರೆಯ ಮೇಲೆ ಕುಳಿತ ಚಿತ್ರವನ್ನು ನಗರದಲ್ಲಿ ಒಂದು ಕಡೆ ಬರೆಯಲಾಗಿದ್ದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ರಾಜ ಮಹಾರಾಜರದ್ದನ್ನು ಮಾತ್ರ ಈ ರೀತಿ ಚಿತ್ರ ಬರೆಯಲಾಗುತ್ತಿತ್ತು.

Mysuru mayor Ravikumar rides horse

ಆದರೆ ಮೇಯರ್ ಅವರು ತಮ್ಮ ಚಿತ್ರವನ್ನು ಬರೆಸಿಕೊಂಡಿದ್ದಾರೆ. ಹಾಗೆ ಬರೆಯುವುದಿದ್ದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷರೂ, ಆಯುಕ್ತ ಚಿತ್ರಗಳನ್ನು ಕೂಡಾ ಬರೆಯಬೇಕಿತ್ತು. ಅವರೂ ಕೂಡ ದಸರಾ ಜಂಬೂ ಸವಾರಿಯಲ್ಲಿ ಕುದುರೆ ಮೇಲೆ ಕುಳಿತು ಹೊರಡುತ್ತಾರೆ. ಈ ಕುರಿತು ಜಿಲ್ಲಾಡಳಿತ ಹಾಗೂ ಪಾಲಿಕೆಯ ಆಯುಕ್ತರು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

English summary
Municipal Operations began Sep 18th to raise awareness about cleanliness in Mysuru, with Mayor MJ Ravikumar riding himself the horse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X