ಪತ್ನಿ, ಮಕ್ಕಳನ್ನು ನಾಲೆಗೆ ನೂಕಿ ಕೊಲೆಗೈದ ಪತಿ

Posted By:
Subscribe to Oneindia Kannada

ಮೈಸೂರು, ಸೆಪ್ಟೆಂಬರ್, 16: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನೊಬ್ಬ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ನಾಲೆಗೆ ತಳ್ಳಿದ ಘಟನೆ ಕೆ.ಆರ್.ನಗರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಹೊಳೆನರಸೀಪುರದ ಬಾಗೇವಾಳು ಗ್ರಾಮದ ನಿವಾಸಿ ಪರಮೇಶ್ ತನ್ನ ಪತ್ನಿ ಅನುಷಾ (28) ಪುತ್ರಿಯರಾದ ಪೂರ್ವಿಕಾ (6) ಲಿಖಿತಾ (2) ರನ್ನು ಚಾಮರಾಜ ಬಲದಂಡೆ ನಾಲೆಗೆ ತಳ್ಳಿ ಕೊಲೆ ಮಾಡಿದ್ದಾನೆ. ನಂತರ ಬಂದು ಕೆ.ಆರ್. ಪೋಲೀಸ್ ಠಾಣೆ ಪೊಲೀಸರೆದುರು ತಾನೇ ಹತ್ಯೆಗೈದಿದ್ದನ್ನು ಒಪ್ಪಿಕೊಂಡಿದ್ದಾನೆ.

Mysuru: Man pushes wife and children into canal

ಪೂರ್ವಿಕ ಶವ ಸೌತನಹಳ್ಳಿ ಗ್ರಾಮದ ಬಳಿ ನಾಲೆಯಲ್ಲಿ ಪತ್ತೆಯಾಗಿದೆ. ಇನ್ನು ಇಬ್ಬರ ಶವಕ್ಕಾಗಿ ಶೋಧ ಕಾರ್ಯ ಚುರುಕುಗೊಂಡಿದೆ.

ಸಾರ್ವಜನಿಕ ಸ್ಥಳದಲ್ಲೇ ಏಕಾಏಕಿ ಮನಬಂದಂತೆ ಗುಂಡು ಹಾರಿಸಿದ ಭೂಪ

ಮೈಸೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲೇ ವ್ಯಕ್ತಿಯೋರ್ವ ಗುಂಡು ಹಾರಿಸಿದ ಘಟನೆ ನಡೆದಿದ್ದು, ಜನತೆ ಇದರಿಂದ ಬೆಚ್ಚಿ ಬಿದ್ದಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂ ಬಡಾವಣೆಯ ನಿವಾಸಿ ಗಣೇಶ್ ಪ್ರಸಾದ್ ಎಂಬ ವ್ಯಕ್ತಿ ಅಭ್ಯಾಸಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗಣೇಶ್ ಪ್ರಸಾದ್ ಗುಂಡು ಹಾರಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

Mysuru: Man pushes wife and children into canal

ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಪಾಳು ಮನೆಯಲ್ಲಿ ಗುಂಡು ಹಾರಿಸಿರುವುದಾಗಿ ಆರೋಪ ಕೇಳಿ ಬಂದಿದ್ದು, ಗಣೇಶ್ ಪ್ರಸಾದ್ ಗುಂಡು ಹಾರಿಸುವ ವೇಳೆ ಅಲ್ಲಿ ಒಂದು ಕಾರು ನಿಂತಿತ್ತು ಎನ್ನಲಾಗಿದೆ. ಮತ್ತೊಂದು ಕಾರು ಅದೇ ಮಾರ್ಗದಲ್ಲಿ ಸಾಗಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಎಲ್ಲ ದೃಶ್ಯಗಳನ್ನು ಗಣೇಶ್ ಪ್ರಸಾದ್ ಸ್ನೇಹಿತರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Upset over family dispute, a man allegedly pushed his wife and two children into a canal on the outskirts of K R Nagar, Mysuru here on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ