ಮೈಸೂರು: ಕೆಲಸ ಕೊಡಿಸುವುದಾಗಿ ವಂಚನೆ,ಆರೋಪಿ ಬಂಧನ

Written By:
Subscribe to Oneindia Kannada

ಮೈಸೂರು, ಅಕ್ಟೋಬರ್ 13: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಲಕ್ಷಾನುಗಟ್ಟಲೇ ಹಣ ಪೀಕುತ್ತಿದ್ದ ವಂಚಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರೈಲ್ವೆ ಇಲಾಖೆ ಮಾಜಿ ಉದ್ಯೋಗಿ ಪಿ. ವಿಲ್ಸನ್ ಎಂದು ಹೇಳಲಾಗಿದೆ. ತಮಿಳುನಾಡಿನಲ್ಲಿ ಅಡಗಿ ಕುಳಿತಿದ್ದ ವಂಚಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಾಡಿ ವಾರೆಂಟ್ ಮೇರೆಗೆ ದಾವಣಗೆರೆ ಪೊಲೀಸರು ಮೈಸೂರಿನ ಲಕ್ಷ್ಮೀಪುರಂ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Mysuru: Man held for cheating people with government jobs offer

ವಿಲ್ಸನ್ ಬೆಂಗಳೂರು ರೈಲ್ವೆ ಡಿವಿಷನ್ ನಲ್ಲಿ ಕಚೇರಿ ಸೂಪರಿಡೆಂಟ್ ಆಗಿದ್ದರು. ಜನರಲ್ ಮ್ಯಾನೇಜರ್ ಕೋಟಾದಲ್ಲಿ ನೇರ ನೇಮಕಾತಿ ಮಾಡಿಸುತ್ತೇನೆಂದು ನಂಬಿಸಿ ಹಣ ಪೀಕುತ್ತಿದ್ದ.

ರಾಜ್ಯಾದ್ಯಂತ 25ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಈತ ರೈಲ್ವೆ ಅಧಿಕಾರಿಗಳ ನಕಲಿ ಸಹಿ, ಸೀಲು ಬಳಸಿ ನೇಮಕಾತಿ ಆದೇಶ ಪ್ರತಿ ನೀಡಿದ್ದಾನೆ. ಈ ಬಗ್ಗೆ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ವಿಲ್ಸನ್ ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Railway department employee arrested on Friday for cheating several people by promising them government jobs. The accused, identified as Wilson.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ