ಮೈಸೂರು ಮೃಗಾಲಯದ ನಿರ್ದೇಶಕಿ ಕಮಲಾ ವರ್ಗಾವಣೆಗೆ ಆಗ್ರಹ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ. 08 : ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ನಿರ್ದೇಶಕಿ ಕಮಲಾ ಕರಿಕಾಳನ್ ಅವರ ಅನುಭವದ ಕೊರತೆಯಿಂದಾಗಿ ಹಾಗೂ ಅಧಿಕಾರ ದರ್ಪ ಮೃಗಾಲಯವು ಮುಚ್ಚುವಂತಹ ಸ್ಥಿತಿಗೆ ಬಂದಿದೆ.

ಇದರಿಂದ ಅವರನ್ನು ತಕ್ಷಣವೇ ಹುದ್ದೆಯಿಂದ ಸ್ಥಳಾಂತರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಶಾಸಕ ಸಾ.ರಾ. ಮಹೇಶ್ ಅವರು ಒತ್ತಾಯಿಸಿದರು.

ಭಾನುವಾರ ಮೈಸೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃಗಾಲಯದ ಇತಿಹಾಸದಲ್ಲಿ ಎಂದೂ ಬಾಗಿಲು ಮುಚ್ಚಿದ ಪ್ರಕರಣ ಜರುಗಿರಲಿಲ್ಲ. ಚುನಾಯಿತ ಪ್ರತಿನಿಧಿಗಳಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಬೇಜವಾಬ್ದಾರಿತನ ಹಾಗೂ ಅಧಿಕಾರ ದರ್ಪದಿಂದ ಮೆರೆಯುತ್ತಿದ್ದಾರೆಂದು ನಿರ್ದೇಶಕಿ ವಿರುದ್ಧ ಆರೋಪಿಸಿದರು.[ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ]

Mysuru legislators demand removal of Chamarajendra Zoo executive director Kamala Karikalan

ವಿಧಾನ ಪರಿಷತ್ ಸದಸ್ಯ ಸಂದೇಶ ನಾಗರಾಜ್ ಮಾತನಾಡಿ, ಮೃಗಾಲಯದಲ್ಲಿ ಕಳೆದ 3-4 ನಾಲ್ಕು ತಿಂಗಳಿನಿಂದಲೂ ಅಧಿಕಾರಿ ಹಾಗೂ ಸಿಬ್ಬಂದಿಗಳ ನಡುವೆ ನಡೆಯುತ್ತಿರುವ ಘರ್ಷಣೆಯಿಂದಾಗಿ ಪ್ರಾಣಿ, ಪಕ್ಷಿಗಳು ಬಲಿಯಾಗುತ್ತಿವೆ.

ಬೇಸಿಗೆಯಲ್ಲಿ ಹಕ್ಕಿಗಳಿಗೆ ಸಾಂಕ್ರಾಮಿಕ ರೋಗ ಬರುವುದು ಸಹಜ. ಈ ಬಗ್ಗೆ ಮುಂಜಾಗೃತ ಕ್ರಮವಹಿಸಿಲ್ಲ. ವಲಸೆ ಹಕ್ಕಿಗಳ ನಿಯಂತ್ರಣಕ್ಕೂ ಸೂಕ್ತರೀತಿಯಲ್ಲಿ ತಯಾರಿಸಿ ನಡೆಸದೆ, ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವಿರೇಶ್ ಅವರ ಗಮನಕ್ಕೂ ತರದೆ ಏಕಾಏಕಿ ಮೃಗಾಲಯ ಮುಚ್ಚುವಂತಹ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನಿರ್ದೇಶಕಿ ಹಾಗೂ ಅಧ್ಯಕ್ಷೆ ನಡುವೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ಮೃಗಾಲಯ ಮುಚ್ಚಿರುವುದರಿಂದ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನೆಡೆಯಾಗಿದೆ. ಆದ್ದರಿಂದ ಸರ್ಕಾರವು ಮೃಗಾಲಯದ ಬಾಗಿಲು ಮುಚ್ಚುವ ತೀರ್ಮಾನವನ್ನು ಪುನರ್ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಹುದ್ದೆಯ ಘನತೆ ಕುಂದಿಸಿದ್ದಾರೆ: ಮೃಗಾಲಯದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುವಂತಹ ಅನುಭವ ಹಾಗೂ ಪ್ರೌಢಿಯಮೆಯನ್ನು ಕಮಲಾ ಕರಿಕಾಳನ್ ಅವರು ಪ್ರದರ್ಶಿಸುತ್ತಿಲ್ಲ ಎಂದು ಶಾಸಕ ಸಾರಾ ಮಹೇಶ್ ಅವರು ಟೀಕಿಸಿದರು.

ಅಲ್ಲದೆ, ಪ್ರತಿ ವರ್ಷವೂ ವಲಸೆ ಹಕ್ಕಿಗಳಿಂದ ಸಾಂಕ್ರಾಮಿಕ ರೋಗಗಳು ಬರುವ ಬಗ್ಗೆ ತಿಳಿದಿರುವುದರಿಂದ ಅದಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಮೃಗಾಲಯವನ್ನೇ ಮುಚ್ಚಿರುವುದು ಅನುಭವದ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಉನ್ನತ ಸ್ಥಾನವನ್ನು ನಿರ್ವಹಿಸುವ ಅರ್ಹತೆಯೂ ಇಲ್ಲವೆಂದ ಈಚೆಗೆ ಜರುಗಿದ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ತಿಳಿದಿದೆ ಎಂದರು.

ಈಗಾಗಲೇ ಪಕ್ಷಿಗಳ ಮರಣೋತ್ತರ ಪರೀಕ್ಷಾ ವರದಿದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಕಂಡು ಬಂದಿವೆ. ಒಂದು ತಿಂಗಳ ಕಾಲ ಮೃಗಾಲಯವನ್ನು ಬಂದ್ ಮಾಡುವುದು ಅಗತ್ಯವಿರಲಿಲ್ಲ. ಆಕೆಯ ಅನನುಭವದಿಂದ ಪಕ್ಷಿಗಳ ಆರೋಗ್ಯ ಕಾಪಾಡಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದಾರೆ.

ಅಲ್ಲದೆ ಸಿಬ್ಬಂದಿಗಳನ್ನು ಪ್ರಾಣಿಗಳಂತೆ ನೋಡುತ್ತಿದ್ದಾರೆ. ನೌಕರರ ಅಮಾನತ್ತನ್ನು ಹಿಂಪಡೆಯದೆ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಅವರ ಶಿಫಾರಸನ್ನು ಧಿಕ್ಕರಿಸಿದ್ದಾರೆ. ವಿನಾಕಾರಣ ಮೂವರು ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದಾರೆ.

ಅಧಿಕಾರಿ ಮತ್ತು ಸಿಬ್ಬಂದಿಗಳ ನಡುವಿನ ಮುಸುಕಿನ ಗುದ್ದಾಟದಿಂದ ಮೃಗಾಲಯದ ಪ್ರಾಣಿಗಳು ಬಲಿಯಾಗುತ್ತಿದ್ದು, ತಕ್ಷಣವೇ ಈಕೆಯನ್ನು ತೆರವುಗೊಳಿಸಿ ಆ ಸ್ಥಾನಕ್ಕೆ ಅನುಭವಿ ಹಿರಿಯ ಅಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The MLAs, MLCs and Mayor of Mysuru on Sunday expressed The legislators and the mayor also demanded the removal of Kamala Karikalan from the executive director post of Mysore zoo.
Please Wait while comments are loading...