ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ವಾಸ್ತವ್ಯಕ್ಕೆ ಲಲಿತ ಮಹಲ್ ಲಭ್ಯವಿಲ್ಲ, ಎಲ್ಲಿ ಉಳೀತಾರೆ?

By Yashaswini
|
Google Oneindia Kannada News

Recommended Video

ಮೋದಿ ಉಳಿಯಲು ಮೈಸೂರಿನ ಲಲಿತ ಮಹಲ್ ಸಿಕ್ಕಿಲ್ಲ | ಮತ್ತೆ ಎಲ್ಲಿ ಉಳೀತಾರೆ? | Oneindia Kannada

ಮೈಸೂರು, ಫೆಬ್ರವರಿ 16 : ಇಲ್ಲಿನ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿನ ಎಲ್ಲ ಕೊಠಡಿ ಕಾರ್ಯಕ್ರಮವೊಂದಕ್ಕೆ ಮುಂಗಡ ಬುಕ್ ಆಗಿರುವುದರಿಂದ ಫೆಬ್ರವರಿ 18ರಂದು ಮೈಸೂರಿಗೆ ಬರುವ ಪ್ರಧಾನಿ ನರೇಂದ್ರ ಮೋದಿ ಎಲ್ಲಿ ವಾಸ್ತವ್ಯ ಹೂಡುವರು ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ಎಸ್ ಪಿಜಿ ತಂಡದ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ನರೇಂದ್ರ ಮೋದಿ ಅವರ ವಾಸ್ತವ್ಯ ವ್ಯವಸ್ಥೆ ಮಾಡಲು ಮೈಸೂರಿನಲ್ಲಿ ಸೂಕ್ತ ಹಾಗೂ ಸುರಕ್ಷಿತ ಸ್ಥಳಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಫೆಬ್ರವರಿ 18ರಂದು ರಾತ್ರಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿ, ಅಂದು ರಾತ್ರಿ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಸಂವಾದ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು.

ಫೆ.18ರಂದು ಮೈಸೂರಿಗೆ ಬರುತ್ತಾರೆ ಪ್ರಧಾನಿ ಮೋದಿಫೆ.18ರಂದು ಮೈಸೂರಿಗೆ ಬರುತ್ತಾರೆ ಪ್ರಧಾನಿ ಮೋದಿ

ಅಂದು ಮಧ್ಯಾಹ್ನ ಹೆಲಿಕಾಪ್ಟರ್ ನಲ್ಲಿ ಶ್ರವಣಬೆಳಗೊಳಕ್ಕೆ ತೆರಳಿ, ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ಮೈಸೂರಿಗೆ ವಾಪಸಾಗಿ, ರೈಲು ನಿಲ್ದಾಣದಲ್ಲಿ ಜೋಡಿ ಹಳಿ ಮಾರ್ಗ, ಮೈಸೂರು - ಬೆಂಗಳೂರು ನಡುವಿನ ಹಮ್ ಸಫರ್ ಎಕ್ಸ್ ಪ್ರೆಸ್ ಮತ್ತು ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರುವ ಕಾರ್ಯಕ್ರಮ ನಿಗದಿ ಆಗಿದೆ.

ಗಣ್ಯರೊಬ್ಬರ ಮಗನ ಮದುವೆ

ಗಣ್ಯರೊಬ್ಬರ ಮಗನ ಮದುವೆ

ಆ ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಅಂದೇ ದೆಹಲಿಗೆ ಹಿಂತಿರುಗುವರು. ಆದರೆ ಫೆಬ್ರವರಿ 17 ರಿಂದ 19ರ ವರೆಗೆ ಗಣ್ಯರೊಬ್ಬರ ಮಗನ ಮದುವೆಗಾಗಿ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನ ಎಲ್ಲಾ ಕೊಠಡಿ (ಅತೀ ಗಣ್ಯರ ಕೊಠಡಿಯೂ ಸೇರಿ)ಗಳು ಮುಂಗಡ ಬುಕ್ ಆಗಿವೆ ಎಂದು ಮೂಲಗಳು ತಿಳಿಸಿದೆ.

ವಾಸ್ತವ್ಯಕ್ಕೆ ಸ್ಥಳ ಹುಡುಕುವುದೇ ತಲೆನೋವು

ವಾಸ್ತವ್ಯಕ್ಕೆ ಸ್ಥಳ ಹುಡುಕುವುದೇ ತಲೆನೋವು

ಅಂದಹಾಗೆ ತಮ್ಮ ಮಗನ ಸಲುವಾಗಿ ಗಣ್ಯರೊಬ್ಬರು ತಿಂಗಳ ಹಿಂದೆಯೇ ಬುಕ್ ಮಾಡಿರುವುದರಿಂದ ಈಗ ಹಠಾತ್ತನೆ ಹೋಟೆಲ್ ಬುಕಿಂಗ್ ರದ್ದುಪಡಿಸಲಾಗದು ಎಂದು ತಿಳಿಯುತ್ತಿದ್ದಂತೆಯೇ ಎಸ್ ಪಿಜಿ ಮತ್ತು ಜಿಲ್ಲಾಡಳಿತಕ್ಕೆ ಪ್ರಧಾನಿ ವಾಸ್ತವ್ಯಕ್ಕೆ ಸೂಕ್ತ ಸ್ಥಳ ಹುಡುಕುವುದು ತಲೆನೋವಾಗಿ ಪರಿಣಮಿಸಿದೆ.

ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಉಳಿದುಕೊಳ್ಳುತ್ತಾರಾ?

ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಉಳಿದುಕೊಳ್ಳುತ್ತಾರಾ?

ಯಾವಾಗ ಪ್ರಧಾನಿ ಮೋದಿ ಅವರ ವಾಸ್ತವ್ಯಕ್ಕೆ ಲಲಿತ ಮಹಲ್ ಸಿಗುವುದಿಲ್ಲ ಎಂಬುದು ಖಚಿತವಾಯಿತೋ, ಎಂ. ಜಿ ರಸ್ತೆಯಲ್ಲಿರುವ ಹೋಟೆಲ್ ಅಥವಾ ಹೆಬ್ಬಾಳದಲ್ಲಿ ಇರುವ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಪ್ರಧಾನಿ ವಾಸ್ತವ್ಯಕ್ಕೆ ಎಸ್ ಪಿಜಿ ಹಾಗೂ ಜಿಲ್ಲಾಡಳಿತ ಚಿಂತಿಸುತ್ತಿದೆ.

ಪ್ರಧಾನಿ ಕಚೇರಿಗೆ ಮಾಹಿತಿ ರವಾನೆ

ಪ್ರಧಾನಿ ಕಚೇರಿಗೆ ಮಾಹಿತಿ ರವಾನೆ

ಈ ಎರಡೂ ಸ್ಥಳಗಳಲ್ಲೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವರದಿಯನ್ನು ಎಸ್ ಪಿಜಿ ಅಧಿಕಾರಿಗಳು ನವದೆಹಲಿಯ ಪ್ರಧಾನಿಮಂತ್ರಿಗಳ ಕಚೇರಿಗೆ ರವಾನಿಸಿದ್ದು, ಫೆಬ್ರವರಿ 17ರಂದು ಬಂದು ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಅಂತಿಮವಾಗಿ ನಿರ್ಧರಿಸುವರು ಎಂದು ಮೂಲಗಳು ತಿಳಿಸಿದೆ.

English summary
On February 18th PM Narendra Modi visiting Mysuru. But Lalit Mahal palace hotel not available for PM Modi. Hotel completely booked by an individual month before. Now the question is Where Modi will stay in Mysuru?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X