ಅಜ್ಜಿ, ರಾಜಮಾತೆ ಮಡಿಲಲ್ಲಿ ಪವಡಿಸುತ್ತಿರುವ ಮುದ್ದು ರಾಜಕುಮಾರ

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 08: ಮೈಸೂರಿಗೆ ಯುವರಾಜನ ಆಗಮನವಾದ ಸಂತಸ ದಿನದಿನವೂ ದುಪ್ಪಟ್ಟಾಗುತ್ತಲೇ ಇದೆ. ನಿನ್ನೆ ತಾನೇ ಆಸ್ಪತ್ರೆಯಲ್ಲಿ ಮಗುವನ್ನು ಮುದ್ದಿಸುತ್ತಿದ್ದ ತ್ರಿಷಿಕಾ ಚಿತ್ರ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದೀಗ ಅಜ್ಜಿ, ರಾಜಮಾತೆ ಪ್ರಮೋದಾ ದೇವಿ ಅವರ ಮಡಿಲಲ್ಲಿ ಪವಡಿಸಿರುವ ಮುದ್ದು ರಾಜಕುಮಾರನ ಚಿತ್ರವನ್ನು ಮೈಸೂರು ಮಹಾರಾಜ ಯದುವೀರ, ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದಾರೆ.

ಮೈಸೂರಿಗೆ ಬಂದ ಮುದ್ದು ರಾಜಕುಮಾರ: ಒಂದಷ್ಟು ಚಿತ್ರಗಳು

ಜೊತೆಗೆ, "ರಾಜಮಾತೆ ಪ್ರಮೋದಾದೇವಿಯವರು ತಮ್ಮ ಮೊಮ್ಮಗ ಯುವರಾಜರ ಜೊತೆ ಇರುವ ಚಿತ್ರವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಸಂತಸವಾಗುತ್ತಿದೆ" ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ, "ಕುಲದೇವತೆ ಚಾಮುಂಡೇಶ್ವರಿ ಅಮ್ಮನವರ ಕೃಪಾಕಟಾಕ್ಷದಿಂದ ನಮಗೆ ಗಂಡುಮಗು ಜನಿಸಿದೆ. ಶುಭ ಹಾರೈಸಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳನ್ನು ತಿಳಿಸುತ್ತೇನೆ" ಎಂದು ಸಹ ಹೇಳಿದ್ದಾರೆ. ಡಿ.6 ರ ರಾತ್ರಿ ಬೆಂಗಳೂರಿನ ಇಂದಿರಾ ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮವಿತ್ತಿದ್ದರು. ಮೈಸೂರು ರಾಜವಂಶಸ್ಥ ಮಗುವಿನ ಜನನ ಇಡೀ ರಾಜ್ಯದ ಜನರಲ್ಲಿ ಸಂತಸ ಮೂಡಿಸಿತ್ತು. ಮೈಸೂರಿನ ಅಂಬಾವಿಲಾಸ ಅರಮನೆಯ ತುಂಬಾ ಸಂಭ್ರಮ ಮನೆಮಾಡಿತ್ತು.

ಗಂಡು ಮಗುವಿಗೆ ಜನ್ಮವಿತ್ತ ಮೈಸೂರು ಯುವರಾಣಿ ತ್ರಿಷಿಕಾ ಕುಮಾರಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru king Yaduveer Urs posted his new born baby and his mother Rajmatha Pramoda Devi's photo in instagram. And he also conveys his thanks to all the people, who wished the best to new born baby.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ