ಮಕ್ಕಳ ದಿನಾಚರಣೆ : ಮಕ್ಕಳೊಂದಿಗೆ ಮಗುವಾದ ಯದುವೀರ್ ಒಡೆಯರ್

Posted By:
Subscribe to Oneindia Kannada

ಮೈಸೂರು, ನವೆಂಬರ್ 14:- ಪ್ರತಿ ಬಾರಿಯೂ ಮಕ್ಕಳ ಕಾರ್ಯಕ್ರಮದಲ್ಲಿಯೇ ಹೆಚ್ಚು ತೊಡಗಿಸಿಕೊಳ್ಳುವ ಮೈಸೂರು ರಾಜ ವಂಶಸ್ಥ ಯದುವೀರ ಒಡೆಯರ್ ಇಂದು ಸಹ ನಗುಮೊಗದಿಂದಲೇ ಇದ್ದರು. ಕಾರಣ ಮಕ್ಕಳ ದಿನಾಚರಣೆ ಹಿನ್ನಲೆಯಲ್ಲಿ ಮಕ್ಕಳ ಜೊತೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂವಾದ ನಡೆಸಿದರು.

ಉಪೇಂದ್ರ ಪ್ರಜಾಕೀಯ ಪಕ್ಷದ ಬಗ್ಗೆ ಯದುವೀರ್ ಒಡೆಯರ್ ಹೇಳಿದ್ದೇನು?

ಈಗಾಗಲೇ ಕಲಿಸು ಫೌಂಡೇಷನ್ನ ರಾಯಭಾರಿಯಾಗಿರುವ ಇವರು ಮಕ್ಕಳ ದಿನಾಚರಣೆಯ ಅಂಗವಾಗಿ ಅರಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಯದುವೀರ್ ಮಕ್ಕಳೊಡನೆ ಮಾತುಕತೆ ನಡೆಸಿದರು. ಸರ್ಕಾರಿ ಶಾಲೆಯ ಒಟ್ಟು 34 ಮಕ್ಕಳ ಜೊತೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Mysuru King Yaduveer interacted with children’s

ಮೈಸೂರು ರಾಜವಂಶಸ್ಥರ ಇತಿಹಾಸ, ಅರಮನೆಯ ಇತಿಹಾಸ,ವಿಸ್ತೀರ್ಣ, ವಿಶೇಷತೆಗಳ ಬಗೆ ಹಲವು ಪ್ರಶ್ನೆಗಳನ್ನು ಪುಟಾಣಿಗಳು ಕೇಳಿದರು. ಯದುವೀರ್ ಮಕ್ಕಳಿಗೆ ವಿಸ್ತಾರವಾಗಿ ಉತ್ತರ ನೀಡಿದರು. ಬಳಿಕ ಮಾತನಾಡಿದ ಅವರು ಮಕ್ಕಳ ಜೊತೆ ಸಂವಾದ ಮಾಡಿದ್ದು ತುಂಬಾ ಖುಷಿ ತಂದಿದೆ. ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ನನ್ನ ಶಾಲಾ ದಿನಗಳು ನೆನಪಿಗೆ ಬರುತ್ತಿದೆ. ನಾನು ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ತುಂಬಾ ಎಂಜಾಯ್ ಮಾಡುತ್ತಿದ್ದೆ. ಮಕ್ಕಳ ಜೊತೆ ಸಂವಾದ ನಡೆಸಿದ್ದು ಖುಷಿ ನೀಡಿದೆ ಎಂದರು.

ಉಪ್ಪಿಯ ಪ್ರಜಾಕೀಯ ಪಕ್ಷಕ್ಕಿದೆ ನನ್ನ ಬೆಂಬಲ :
ಇತ್ತೀಚೆಗಷ್ಟೆ ನಟ ರಿಯಲ್ ಸ್ಟಾರ್ ಉಪೇಂದ್ರ ಸ್ಥಾಪಿಸಿದ ಪ್ರಜಾಕೀಯ ಪಕ್ಷಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಬೆಂಬಲ ಸೂಚಿಸಿದ್ದಾರೆ. ನಟ ಉಪೇಂದ್ರ ಅವರು ಹೊಸ ಆಲೋಚನೆ ಇಟ್ಟುಕೊಂಡು ಪಕ್ಷ ಕಟ್ಟಿದ್ದಾರೆ. ಅವರು ಸ್ವತಂತ್ರವಾಗಿ ಮಾಡುತ್ತಿರುವುದು ಒಳ್ಳೆಯದು ಎಂದು ರಾಜವಂಶಸ್ಥ ಯದುವೀರ್ ತಿಳಿಸಿದ್ದಾರೆ.

ಕರ್ನಾಟಕಕ್ಕೆ ಹೊಸ ಆಲೋಚನೆ ಬೇಕಿತ್ತು. ಈ ಹೊಸ ಆಲೋಚನೆ ನಟ ಉಪೇಂದ್ರ ಅವರು ಮಾಡಿದ್ದಾರೆ. ಪ್ರಜಾಕೀಯ ಪಕ್ಷ ಕಟ್ಟಿರುವುದರ ಈ ಮೂಲಕ ಒಳ್ಳೆಯದನ್ನು ಮಾಡಲಿ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A King of royal family Yaduveer krishnadutt odeyar interacted with children’s on behalf of children’s day celebration organised by Kalisu foundation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ