ಯೋಗ ದಿನಾಚರಣೆ: ಗಿನ್ನಿಸ್ ದಾಖಲೆಯತ್ತ ಮೈಸೂರು ದಾಪುಗಾಲು

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಜೂನ್ 19: ಈ ಬಾರಿ, ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳಿಸುವ ಆಶಯದಲ್ಲಿರುವ ಮೈಸೂರು ಜಿಲ್ಲಾಡಳಿತದ ಪ್ರಯತ್ನಗಳು ಯಶಸ್ಸು ಕಾಣುವ ಸೂಚನೆ ನೀಡಿವೆ.

ಜಿಲ್ಲಾಡಳಿತ ಕೈಗೊಂಡಿರುವ ಈ ಬೃಹತ್ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಹಾಗಾಗಿ, ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದು, ಮೈಸೂರಿನಲ್ಲಿ ನಡೆಯಲಿರುವ ಯೋಗ ದಿನಾಚರಣೆ ಗಿನ್ನಿಸ್ ದಾಖಲೆಗೆ ಭಾಜನವಾಗುವ ಆಶಯವನ್ನು ಎಲ್ಲರಲ್ಲೂ ಮೂಡಿಸಿದೆ.

ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ

ಈಗಾಗಲೇ ಬೂತ್ ಮಟ್ಟದಲ್ಲೂ ಯೋಗ ದಿನಾಚರಣೆಯ ಅಭ್ಯಾಸ ಶಿಬಿರಗಳನ್ನು ನಡೆಸಲಾಗಿದ್ದು ದೊಡ್ಡಮಟ್ಟದ ನಾಗರಿಕರ ಪಡೆಯೊಂದು ಹೊಸ ದಾಖಲೆಗಾಗಿ ಸಜ್ಜಾಗಿದೆ.

ಭಾನುವಾರ(ಜೂನ್ 18) ನಡೆದ ರಿಹರ್ಸಲ್ ವೇಳೆಯಲ್ಲಿ ಡ್ರೋನ್ ಮೂಲಕ ಛಾಯಾಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಆ ಎಲ್ಲಾ ಮನಮೋಹಕ ಛಾಯಾ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ರಾಜಪಥ್ ದಾಖಲೆ ಮುರಿಯಲು ಸಜ್ಜು

ರಾಜಪಥ್ ದಾಖಲೆ ಮುರಿಯಲು ಸಜ್ಜು

ಈ ಬಾರಿಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು 51,463 (ಭಾನುವಾರ ದಿನಾಂತ್ಯಕ್ಕೆ) ಜನರು ಹೆಸರು ನೊಂದಾಯಿಸಿಕೊಂಡಿದ್ದಾರೆ. 2015ರಲ್ಲಿ ದೆಹಲಿಯ ರಾಜ್ ಪಥ್ ನಲ್ಲಿ ನಡೆದಿದ್ದ ಯೋಗ ದಿನಾಚರಣೆಯಲ್ಲಿ 35,985 ಜನರು ಭಾಗವಹಿಸಿದ್ದು ಈವರೆಗಿನ ದಾಖಲೆಯಾಗಿದೆ. ಈಗಾಗಲೇ ಮೈಸೂರಿನಲ್ಲಿ ಆಗಿರುವ ನೊಂದಾವಣಿಯು ರಾಜಪಥ್ ನ ದಾಖಲೆಯನ್ನು ಮುರಿದಿದೆ.

ಮೈಸೂರಿನಲ್ಲಿ ಗಿನ್ನಿಸ್ ದಾಖಲೆಗಾಗಿ ಯೋಗ: ಕುಸಿದು ಬಿದ್ದ 10 ಮಕ್ಕಳು

ಮಕ್ಕಳಿಂದ ಮಾನವ ಸರಪಳಿ

ಮಕ್ಕಳಿಂದ ಮಾನವ ಸರಪಳಿ

ಈ ಬಾರಿಯ ಯೋಗ ದಿನಾಚರಣೆಯಲ್ಲಿ ಸುಮಾರು 6 ಸಾವಿರ ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವುದು ಖುಷಿಯ ವಿಚಾರ. ಸೋಮವಾರ (ಜೂನ್ 19) ಬೆಳಗ್ಗೆ ಶಾಲಾ ಮಕ್ಕಳು ಯೋಗ ದಿನಾಚರಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಮಾನವ ಸರಪಳಿ ರಚಿಸಿದ್ದರು.

ಹೆಸರನ್ನು ಈಗಲೂ ನೊಂದಾಯಿಸಬಹುದು

ಹೆಸರನ್ನು ಈಗಲೂ ನೊಂದಾಯಿಸಬಹುದು

ಅಂದಹಾಗೆ, ಈ ಬಾರಿಯ ಯೋಗ ದಿನಾಚರಣೆಗೆ 51,463 ಜನರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರಾದರೂ, ನೊಂದಾವಣಿಯು ಇನ್ನೂ ಚಾಲ್ತಿಯಲ್ಲಿದೆ. ಬುಧವಾರ ಯೋಗ ದಿನಾಚರಣೆ ನಡೆಯಲಿರುವುದರಿಂದ ಪ್ರವಾಸೋದ್ಯಮ ಇಲಾಖೆ ಕಚೇರಿ, ಆಯುಷ್, ನೆಹರೂ ಯುವ ಕೇಂದ್ರ, ಮೈಸೂರು ನೆಟ್ ವರ್ಕಿಂಗ್ ಸಂಸ್ಥೆ, ಎನ್ ಎಸ್ಎಸ್, ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿಒ), ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘಗಳಲ್ಲಿನ ನೊಂದಾವಣಿಯು ಇನ್ನೂ ಚಾಲ್ತಿಯಲ್ಲಿದೆ.

ಮಹಿಳೆಯರಿಗೂ ವಿಶೇಷ ತರಗತಿ

ಮಹಿಳೆಯರಿಗೂ ವಿಶೇಷ ತರಗತಿ

ಜನರನ್ನು ಯೋಗ ದಿನಾಚರಣೆಗಾಗಿ ತಯಾರಿಗೊಳಿಸಲು ಅಲ್ಲಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದೆ. ಚಾಮರಾಜ, ನರಸಿಂಹ ರಾಜ, ಕೃಷ್ಣರಾಜ ಹಾಗೂ ಜಯಚಾಮರಾಜ ಪ್ರಾಂತ್ಯಗಳಲ್ಲಿ ಈ ಶಿಬಿರಗಳು ನಡೆದಿವೆ. ಮಹಿಳೆಯರಿಗಾಗಿ ವಿಶೇಷ ಶಿಬಿರಗಳನ್ನು ನಡೆಸಲಾಗುತ್ತಿದ್ದು ಪ್ರತಿ ದಿನ 5:30ರಿಂದ 7 ಗಂಟೆವರೆಗಿನ ಕಾಲಾವಧಿಯನ್ನು ಮಹಿಳೆಯರ ತರಬೇತಿಗೆ ಮೀಸಲಿರಿಸಲಾಗಿದೆ.

ಮೈಸೂರಿನಲ್ಲಿ 20 ಸಾವಿರ ಜನರಿಂದ ಯೋಗಾಭ್ಯಾಸ

ಲಕ್ನೋದ ಸವಾಲು ಹಿಮ್ಮೆಟ್ಟಿಸುವ ನಿರೀಕ್ಷೆ

ಲಕ್ನೋದ ಸವಾಲು ಹಿಮ್ಮೆಟ್ಟಿಸುವ ನಿರೀಕ್ಷೆ

ಅಂದಹಾಗೆ, ಉತ್ತರ ಪ್ರದೇಶದಲ್ಲಿ ನಡೆಯಲಿರುವ ಈ ಬಾರಿಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಹಾಗಾಗಿ, ಅಲ್ಲಿ ಸುಮಾರು 60 ಜನರು ಸೇರುವ ನಿರೀಕ್ಷೆಯಿದೆ. ಇದು ಮೈಸೂರಿನ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಆದರೂ, ಈಗಾಗಲೇ 51 ಸಾವಿರಕ್ಕೂ ಹೆಚ್ಚು ಜನರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿರುವುದರಿಂದ ಅಲ್ಲದೆ ಇನ್ನೂ ಹೆಸರುಗಳು ದಾಖಲಾಗುತ್ತಿರುವುದರಿಂದ ಇನ್ನೆರಡು ದಿನಗಳಲ್ಲಿ ಉತ್ತರ ಪ್ರದೇಶವನ್ನು ಹಿಂದಿಕ್ಕುವ ನಿರೀಕ್ಷೆಯಲ್ಲಿದೆ ಮೈಸೂರು ಜಿಲ್ಲಾಡಳಿತ.

ಅಂತಾರಾಷ್ಟ್ರೀಯ ಯೋಗದಿನದಂದು ಗಿನ್ನಿಸ್ ಪಟ್ಟಿ ಸೇರಲಿದೆಯೇ ಮೈಸೂರು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In Mysuru, 51,463 people have already registered to take part in a mass Yoga demonstration on June 21. The rehearsals on Sunday were glimpses of what is to come on Wednesday.
Please Wait while comments are loading...