ಸಿಂಗಪುರದಲ್ಲಿ ಚಿನ್ನ ಗೆದ್ದು ಯೋಗ ಚಾಂಪಿಯನ್ ಆದ ಮೈಸೂರಿನ ಖುಷಿ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಆಗಸ್ಟ್ 1: ಇತ್ತೀಚೆಗೆ ಯೋಗದಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಮೈಸೂರಿನ ಹೆಚ್.ಖುಷಿ 7ನೇ ಏಷಿಯನ್ ಮಟ್ಟದ ಯೋಗ ಸ್ಪರ್ಧೆಯಲ್ಲಿ 4 ಚಿನ್ನ ಮತ್ತು 1 ಬೆಳ್ಳಿ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾಳೆ.

ಸಿಂಗಪುರದಲ್ಲಿ ಹುರುಪು ತುಂಬಿದ ಯೋಗದ ಉಪಾಸನೆ

ಸಿಂಗಾಪುರದಲ್ಲಿ ಜು.28ರಿಂದ 30ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕ್ಲಿಷ್ಟಕರವಾದ ವಿವಿಧ ಆಸನಗಳನ್ನು ಪ್ರದರ್ಶಿಸಿ ಯೋಗದಲ್ಲಿನ ತನ್ನ ದಾಖಲೆಯ ಓಟವನ್ನು ಮುಂದುವರಿಸಿದ್ದಾಳೆ. ಐದು ವಿಭಾಗಗಳಲ್ಲಿ ಸ್ಪರ್ಧಿಸಿ ನಾಲ್ಕರಲ್ಲಿ ಚಿನ್ನ ಮತ್ತು ಬೆಳ್ಳಿ ಪದಕದ ಸಾಧನೆ ಮಾಡಿದ್ದಾಳೆ. 11ರಿಂದ 14 ವರ್ಷ ದೊಳಗಿನವರ ವಿಭಾಗದ ಅಥ್ಲೆಟಿಕ್ ಯೋಗಾಸನದಲ್ಲಿ ಚಿನ್ನ, 8ರಿಂದ 17 ವರ್ಷ ದೊಳಗಿನ ಆರ್ಟಿಸ್ಟಿಕ್ ಯೋಗದಲ್ಲಿ ಚಿನ್ನ, ರಿಥಮಿಕ್ ಯೋಗದಲ್ಲಿ ಚಿನ್ನ, ಮುಕ್ತ ವಿಭಾಗದ ಫ್ರೀ ಫ್ಲೊ ಯೋಗದಲ್ಲಿ ಚಿನ್ನ ಮತ್ತು 8ಚರಿಂದ 17 ವರ್ಷ ದೊಳಗಿನ ಆರ್ಟಿಸ್ಟಿಕ್ ಯೋಗ ಸೋಲೊದಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾಳೆ.

Mysuru girl wins Singapore Yoga Championship

ವಿವಿಧ ವಯೋಮಾನದವರ ವಿಭಾಗಗಳಲ್ಲಿ ಖುಷಿ ಪದಕಗಳನ್ನು ಗೆದ್ದಿರುವುದು ವಿಶೇಷವಾಗಿದೆ. ಆರ್ ಬಿಐ ಉದ್ಯೋಗಿ ಹೇಮಚಂದ ಮತ್ತು ಕುಮುದ ದಂಪತಿಯ ಪುತ್ರಿಯಾದ ಖುಷಿ ಮೈಸೂರಿನ ವಿಜಯನಗರದ ಸಂತ ಜೋಸೆಫ್ ಸೆಂಟ್ರಲ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು, ಮೈಸೂರು ವಿವೇಕಾನಂದ ಯೋಗ ಅಂಡ್ ರಿಸರ್ಚ್ ಸೆಂಟರ್‍ ನ ಡಾ.ಪಿ.ಎನ್.ಗಣೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಯೋಗ ತರಬೇತು ಪಡೆಯುತ್ತಿದ್ದಾಳೆ.

ಯೋಗ ಪ್ರದರ್ಶನ: ಮೈಸೂರು ಕೈತಪ್ಪಿದ ಗಿನ್ನಿಸ್ ದಾಖಲೆ ಗರಿ

Mysuru girl wins Singapore Yoga Championship
Mysuru is all set for International Yoga Day | Oneindia Kannada

ತನ್ನ ಕಿರಿಯ ವಯಸ್ಸಿಗೇ ಖುಷಿ ವಿಶ್ವಮಟ್ಟದಲ್ಲಿ ಯೋಗದ ಮೂಲಕ ಹಲವು ಸಾಧನೆಗಳನ್ನು ಮಾಡಿದ್ದಾಳೆ. 80 ಲಕ್ಷ ಆಸನಗಳಲ್ಲಿ ಸಾವಿರಾರು ಆಸನಗಳನ್ನು ಕರಗತ ಮಾಡಿಕೊಂಡು ಪ್ರದರ್ಶನ ಮಾಡುವ ಶಕ್ತಿಯುಳ್ಳವಳಾಗಿದ್ದು, ಯೋಗ ಸಾಧಕಿಯಾಗಿ ಬೆಳೆಯುತ್ತ ಕೀರ್ತಿ ತರುತ್ತಿದ್ದಾಳೆ ಎಂಬುದು ನಾಡಿಗೆ ಹೆಮ್ಮೆಯ ವಿಚಾರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Khushi, a yoga practitioner from Mysuru, has emerged as the champion at 7th Yoga Championship held in Singapore. She won four gold medals and a silver medal in various events of the championship.
Please Wait while comments are loading...