ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಹರಿಸಲಾಗಿದ್ದ ಕಾಡಾನೆ ದಂತ ಪತ್ತೆ!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 04 : ಮೃತಪಟ್ಟಿದ್ದ ಕಾಡಾನೆಯಿಂದ ಅಪಹರಿಸಲಾಗಿದ್ದ ದಂತವನ್ನು ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. 'ನೆಲದಲ್ಲಿ ಹೂತು ಹಾಕಿದ್ದ 45 ವರ್ಷದ ಗಂಡಾನೆಯ ದಂತ ಪತ್ತೆಯಾಗಿದೆ' ಎಂದು ಹುಲಿ ಯೋಜನೆ ನಿರ್ದೇಶಕ ಎಚ್.ಸಿ.ಕಾಂತರಾಜು ಹೇಳಿದ್ದಾರೆ.

ಜೂನ್ 20ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಲ್ಲಾಳ ವಲಯ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದ ಸುಮಾರು 45 ವರ್ಷದ ಗಂಡಾನೆಯ ದಂತಗಳನ್ನು ಯಾರೋ ಅಪರಿಸಿದ್ದರು. ಆನೆಯ ಮೃತದೇಹದ ಬಳಿಗೆ ತೆರಳಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದಂತಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದು ತಿಳಿದುಬಂದಿತ್ತು. [ಮೈಸೂರು : ಸತ್ತ ಕಾಡಾನೆಯ ದಂತ ಅಪಹರಣ]

elephant

ಪ್ರಕರಣ ದಾಖಲಿಸಿಕೊಂಡು ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿತ್ತು. ದಂತ ಪತ್ತೆ ಕಾರ್ಯವನ್ನು ಇಲಾಖೆಯವರು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಆನೆ ಸತ್ತ ಜಾಗದಿಂದ ಸುಮಾರು 500 ಮೀಟರ್ ದೂರದಲ್ಲಿ ದಂತಗಳನ್ನು ನೆಲದಲ್ಲಿ ಹೂತುಹಾಕಿರುವುದು ಪತ್ತೆಯಾಯಿತು. [ಮೈಸೂರು ದಸರಾ ಮಾವುತರ ಕರಾಳ ಬದುಕಾ ಕಂಡೀರಾ?]

ಸ್ಥಳೀಯ ಗಿರಿಜನರೇ ಈ ಕೃತ್ಯವೆಸಗಿರುವ ಅನುಮಾವನ್ನು ಅರಣ್ಯ ಇಲಾಖೆ ವ್ಯಕ್ತಪಡಿಸಿದೆ. ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ಹೂತು ಹಾಕಿದ್ದ ದಂತಗಳನ್ನು ಹೊರತೆಗೆಯಲಾಗಿದೆ. ದಂತಗಳು ಮೃತಪಟ್ಟ ಆನೆಯದ್ದೇ ಎಂದು ಖಚಿತಪಡಿಸಿಕೊಳ್ಳಲು ತಲೆಬುರುಡೆಯನ್ನು ಬಳಸಿಕೊಳ್ಳಲಾಗಿದೆ. ಶೀಘ್ರ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. [ಮೈಸೂರು ಮೃಗಾಲಯದ 'ಟಿಂಬೋ' ಇನ್ನಿಲ್ಲ]

English summary
Ivory worth crores in the market has been recovered in Nagarahole forest, Mysuru. Dead elephant's ivory stolen on June 20, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X