ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿಗೆ ನೀರು ಬಿಡದಂತೆ ರೈತರ ಅರೆಬೆತ್ತಲೆ ಪ್ರತಿಭಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 30: ತಮಿಳುನಾಡು ರೈತರು ಕೆಆರ್‍ಎಸ್ ನಿಂದ ನೀರು ಬಿಡುವಂತೆ ಆಗ್ರಹಿಸಿ ತಮಿಳುನಾಡು ಬಂದ್ ನಡೆಸುತ್ತಿದ್ದರೆ, ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ, ಮೈಸೂರಿನಲ್ಲಿ ರೈತರು ಕಾಡಾ ಕಚೇರಿಗೆ ಮುತ್ತಿಗೆ ಹಾಕಿದರು.

ಸರ್ಕಾರವು ಒತ್ತಡಕ್ಕ್ ಮಣಿದು ತಮಿಳುನಾಡಿಗೆ ನೀರು ಬಿಡುತ್ತಿದೆ. ಇಲ್ಲಿನ ರೈತರು ನೀರಿಲ್ಲದೆ, ವ್ಯವಸಾಯ ಮಾಡಲಾಗದೆ ಪ್ರಾಣ ಬಿಡುವಂತಹ ಸ್ಥಿತಿಗೆ ತಲುಪಿದ್ದಾರೆ. ಇಂತಹ ಸ್ಥಿತಿಯಲ್ಲಿ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಜಲಾಶಯದಿಂದ ನದಿಗೆ ನೀರು ಹರಿಯುತ್ತಿರುವುದನ್ನು ಖಂಡಿಸಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು.[ಸರ್ವ ಪಕ್ಷ ಸಭೆಗೆ ಬಾರದ ಬಿಎಸ್ ವೈ, ಹೋಗಿದ್ದೆಲ್ಲಿಗೆ?]

Mysuru farmers protest against tamilanadu demand

ನೂರಾರು ರೈತರು ನಗರದಲ್ಲಿರುವ ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಕಾಡಾ) ಕಚೇರಿ ಆಮರಣದಲ್ಲಿ ಜಮಾಯಿಸಿ, ಕೆಲ ಕಾಲ ಧರಣಿ ನಡೆಸಿ, ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು 'ಪ್ರಾಣ ಕೊಟ್ಟರೂ ನೀರು ಕೊಡೆವು' ಎಂದು ಘೋಷಣೆ ಕೂಗಿ, ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.['ಪತ್ರ ಬರೆದು ಕಾವೇರಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ']

Mysuru farmers protest against tamilanadu demand

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

English summary
Mysuru farmers protest in kada office, Demanding state government not to bend for Tamilnadu pressure. Kurubooru Shanthakumar led protesters express their angry against state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X