ಮೈಸೂರಿನ ಫಾಲ್ಕನ್ ಟೈರ್ಸ್ ಕಾರ್ಖಾನೆ ಮಾಲೀಕನ ಬಂಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 11 : ಮೈಸೂರಿನ ಫಾಲ್ಕನ್ ಟೈರ್ಸ್ ಕಾರ್ಖಾನೆಯ ಕಾರ್ಮಿಕರಿಗೆ ಎರಡು ವರ್ಷಗಳಿಂದ ವೇತನ ನೀಡದೇ ಸತಾಯಿಸುತ್ತಿದ್ದು ಫಾಲ್ಕನ್ ಟೈರ್ಸ್ ಕಾರ್ಖಾನೆ ಮಾಲೀಕನನ್ನು ಭಾನುವಾರ ನವದೆಹಲಿಯಲ್ಲಿ ಪಶ್ಚಿಮ ಬಂಗಾಳದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಫಾಲ್ಕನ್ ಟೈರ್ಸ್ ಕಾರ್ಖಾನೆ ಮಾಲೀಕ ಪವನ್ ಎಂಬಾತ ರೈಲ್ವೆ ಇಲಾಖೆಯ 50 ಕೋಟಿ ರೂ. ಮೌಲ್ಯದ ವಸ್ತುಗಳ ಕಳವು ಪ್ರಕರಣದ ಆರೋಪ ಎದುರಿಸುತ್ತಿದ್ದ. ಭಾರತೀಯ ರೈಲ್ವೆ ನವೆಂಬರ್ ನಲ್ಲಿ ಪ್ರಕರಣ ದಾಖಲಿಸಿತ್ತು.

ಸ್ವಾತಂತ್ರ್ಯ ಪೂರ್ವದಿಂದಲೂ ಈ ಫಾಲ್ಕನ್ ಟೈರ್ಸ್ ಕಂಪನಿ ರೈಲ್ವೇ ಬೋಗಿ ತಯಾರಿಸುತ್ತಿತ್ತು. ಹಾಗೂ ಪವನ್ ಅಂಬೋತಿ ಮತ್ತು ಮೈಸೂರಿನಲ್ಲಿ ಟೈರ್ ಉತ್ಪಾದನಾ ಕಾರ್ಖಾನೆಗಳ ಮಾಲೀಕನಾಗಿದ್ದ ಎನ್ನಲಾಗುತ್ತಿದೆ.

Mysuru Falcon Tyres factory Owner Arrested

ಮೈಸೂರಿನ ಫಾಲ್ಕನ್ ಟೈರ್ಸ್ ಕಾರ್ಖಾನೆಯ ಕಾರ್ಮಿಕರಿಗೆ ಎರಡು ವರ್ಷಗಳಿಂದ ವೇತನ ನೀಡದೇ ಸತಾಯಿಸುತ್ತಿದ್ದು, ವೇತನ ಸಿಗದ ಕೆಲವು ಕಾರ್ಮಿಕರು ಪ್ರತಿಭಟನೆ ನಡೆಸಿ ಆತ್ಮಹತ್ಯೆಗೂ ಯತ್ನ ನಡೆಸಿದ್ದರು.

ಭಾನುವಾರ ಪಶ್ಚಿಮ ಬಂಗಾಳದ ಸಿಐಡಿ ಪೊಲೀಸರು ನವದೆಹಲಿಯಲ್ಲಿನ ಆತನ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲ್ಕತ್ತದ ಜೋಸೆಫ್ ಆಯಂಡ್ ಜೋಸೆಫ್ ಕಂಪನಿಗೂ ಈತನೇ ಮಾಲಿಕನಾಗಿದ್ದ ಎಂದು ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengal Police arrest falcon Tyres factory owner Pawan at his residence in New Delhi' on Sunday. him on a complaint filed by the Indian Railways.
Please Wait while comments are loading...