83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತದ ವತಿಯಿಂದ ಮುಕ್ತ ಆಹ್ವಾನ

Posted By:
Subscribe to Oneindia Kannada

ಮೈಸೂರು, ನವೆಂಬರ್ 2 : ಮೈಸೂರಿನಲ್ಲಿ ನವೆಂಬರ್ 24 ರಿಂದ ಮೂರು ದಿನಗಳ ಕಾಲ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವರೂ ಭಾಗವಹಿಸುವಂತೆ ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹೇವಪ್ಪ ಅವರು ಮನವಿ ಮಾಡಿದರು.

ಸಾಹಿತ್ಯ ಸಮ್ಮೇಳನದಲ್ಲಿ ನೀವೂ ಭಾಗವಹಿಸಬೇಕೇ? ಇಲ್ಲಿದೆ ಮಾಹಿತಿ

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಅವರು ಗುರುವಾರ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ನಡೆಸಿದರು. ಈ ಸಂದರ್ಭ ಸಾಹಿತ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ನವೆಂಬರ್ 24,25,26 ರಂದು ಸಮ್ಮೇಳನ ನಡೆಯಲಿದ್ದು, ಇದಕ್ಕಾಗಿ ಮೂರ್ನಾಲ್ಕು ಸಭೆ ನಡೆದಿದೆ. 15 ಉಪ ಸಮಿತಿ ರಚನೆ ಯಾಗಿದೆ. ನವೆಂಬರ್ 4ನೇ ತಾರೀಖಿನೊಳಗೆ ಕ್ರಿಯಾಯೋಜನೆ ಸಲ್ಲಿಸಲು ಗಡುವು ನೀಡಲಾಗಿದೆ ಎಂದರು.

Mysuru: District incharge HC Mahadevappa invites all people to 83rd Kannada Sahitya Sammelana

ಸಮ್ಮೇಳನಕ್ಕಾಗಿ ಸಂಘಟಕರು 10ಕೋಟಿ ರೂ. ಅನುದಾನ ಕೇಳಿದ್ದಾರೆ. ಸರ್ಕಾರ ಈಗ 6 ಕೋಟಿ ರೂ. ಒದಗಿಸಿದೆ. ಹೆಚ್ಚುವರಿ ಅನುದಾನ ಕೊಡಿಸಲಿ ಕ್ರಮ ವಹಿಸುತ್ತೇನೆ ಎಂದರು. ಹಿಂದಿನ ಎಲ್ಲಾ ಸಮ್ಮೇಳನಕ್ಕಿಂತ ಹೆಚ್ಚು ವಿಜೃಂಭಣೆಯಿಂದ ಮೈಸೂರಿನ ಸಮ್ಮೇಳನ ನಡೆಯಬೇಕು.ಲಕ್ಷಾಂತರ ಕನ್ನಡಿಗರು ಭಾಗವಹಿಸುತ್ತಾರೆ. ಚಂಪಾ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅವರು ಎಡಪಂಥೀಯವಾದಿ ಮತ್ತು ಬಂಡಾಯ ಸಾಹಿತಿಗಳಾಗಿದ್ದು, ಸಮನ್ವಯತೆ ಕಾಪಾಡಿಕೊಳ್ಳುವ ಬದ್ಧತೆ ಅವರಿಗೆ ಇದೆ ಎಂದರು. ಲಕ್ಷಾಂತರ ಜನರು ಕನ್ನಡದ ತೇರು ಎಳೆಯಲು ಬರುತ್ತಾರೆ. ಅವರನ್ನು ಮುಕ್ತವಾಗಿ, ಹೃದಯಪೂರ್ವಕವಾಗಿ ಅಹ್ವಾನಿಸುತ್ತೇನೆ ಎಂದರು.

ಹಿಂದಿನ ಎಲ್ಲಾ ಸಮ್ಮೇಳನಕ್ಕಿಂತ ಹೆಚ್ಚು ವಿಜೃಂಭಣೆಯಿಂದ ಮೈಸೂರಿನ ಸಮ್ಮೇಳನ ನಡೆಯಬೇಕು.ಲಕ್ಷಾಂತರ ಕನ್ನಡಿಗರು ಭಾಗವಹಿಸುತ್ತಾರೆ. ಚಂಪಾ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅವರು ಎಡಪಂಥೀಯವಾದಿ ಮತ್ತು ಬಂಡಾಯ ಸಾಹಿತಿಗಳಾಗಿದ್ದು, ಸಮನ್ವಯತೆ ಕಾಪಾಡಿಕೊಳ್ಳುವ ಬದ್ಧತೆ ಅವರಿಗೆ ಇದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysore District incharge H.C. Mahavappa invited all people for 83rd Kannada Sahitya Sammelana which will be held on November 24 to 26th in Mysuru

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ