ಮೈಸೂರು ದಸರಾ:ಕಾವಾಡಿ-ಮಾವುತರಿಗೆ ಭೂರಿ ಬೋಜನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆ. 28 ;: ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕಾವಾಡಿಗರು ಹಾಗೂ ಮಾವುತರ ಕುಟುಂಬಕ್ಕೆ ನಗರದ ಅರಮನೆಯ ಆವರಣದಲ್ಲಿ ಜಿಲ್ಲಾಡಳಿತದಿಂದ ಭೋಜನ ಕೂಟ ಏರ್ಪಡಿಸಲಾಗಿತ್ತು.

ಮಂಗಳವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಭೋಜನಕೂಟದಲ್ಲಿ ಮಾವುತರು, ಕಾವಾಡಿಗರು ಮತ್ತು ಕುಟುಂಬದವರು ಭೋಜನ ಸವಿದರು. ಮಾವುತರಿಗಾಗಿ ತಟ್ಟೆ ಇಡ್ಲಿ, ಕೆಂಪು ಚಟ್ನಿ, ಸಿಹಿ ಪೊಂಗಲ್, ಅಲಸಂದೆ ವಡೆ, ಪಾಲಕ್ ಅವರೇಬೇಳೆ ಕರಿ, ನವಣೆ ಖಾರ ಪೊಂಗಲ್, ನವಣೆ ಪಾಯಸ, ಕೊತ್ತಂಬರಿ ಕಷಾಯ, ಚಪಾತಿಯನ್ನು ತಯಾರಿಸಲಾಗಿತ್ತು. [ಮೈಸೂರು ದಸರಾ: ಅ.1ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ]

mahoutas

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಮಾವುತ, ಕಾವಾಡಿಗರಿಗೆ ಊಟ ಬಡಿಸಿ ಅವರು ಸಹ ಅವರೊಂದಿಗೆ ಕುಳಿತು ಊಟ ಮಾಡಿದರು.

ಇದೇ ವೇಳೆ ಸಹಕಾರ ಸಚಿವ ಎಚ್.ಎಸ್.ಮಹದೇವ್ ಪ್ರಸಾದ್ ಮಾತನಾಡಿ, ಕಾವೇರಿ ವಿಷಯದ ಬಗ್ಗೆ ವಿಧಾನ ಮಂಡಲದಲ್ಲಿ ಕೈಗೊಂಡಿರುವ ನಿರ್ಣಯಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇವೆ. ಕಾವೇರಿ ಸಮಸ್ಯೆ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಟಸ್ಥ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಅವರಿಂದ ವಸ್ತು ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದು ಎಂದರು.[ಮೈಸೂರು ದಸರಾ ಪೂಜಾ ವಿಧಿವಿಧಾನಗಳ ಸಂಪೂರ್ಣ ವಿವರಣೆ ಇಲ್ಲಿದೆ!]

Mahoutas

ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಮೇಯರ್ ಭೈರಪ್ಪ, ಜಿಲ್ಲಾಧಿಕಾರಿ ರಂದೀಪ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As a goodwill gesture, the Mysuru district administration hosted a lunch for mahoutas and kavadis looking after the Dasara elephants and kavadis apart from mahout families sept 27.
Please Wait while comments are loading...