ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜಂಬೂ ಸವಾರಿಗೆ' ಅಂತಿಮ ಸಿದ್ಧತೆ : ಬಿಗಿ ಭದ್ರತೆ

|
Google Oneindia Kannada News

ಮೈಸೂರು, ಅಕ್ಟೋಬರ್ 10: ಮಂಗಳವಾರ (ಅ.11)ದಂದು ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾಗೆ ಅಂತಿಮ ಕ್ಷಣದ ಸಿದ್ಧತೆ ನಡೆಯುತ್ತಿದ್ದು, ಜಂಬೂಸವಾರಿಯಲ್ಲಿ ಮಾತೆ ಚಾಮುಂಡೇಶ್ವರಿಯ ದರ್ಶನ ಪಡೆದುಕೊಳ್ಳಲು ಭಕ್ತಸಾಗರವೇ ಮೈಸೂರಿನತ್ತ ಹರಿದು ಬರಲಿದೆ.

ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಮೈಸೂರಿಗೆ ಬಂದಿದ್ದಾರೆ. ಇದು ಅರಮನೆ ನಗರಿ ಮೈಸೂರಿನ ಜನರ ಸಂಭ್ರಮವನ್ನು ದ್ವಿಗುಣಗೊಳಿಸಿದ್ದು, ಜಂಬೂಸವಾರಿಗೆ ವಿಶೇಷ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.(ಮೈಸೂರು ದಸರಾ : ಚಿನ್ನದ ಅಂಬಾರಿಗೆ ವಿಮೆ ಎಷ್ಟು ಗೊತ್ತೆ?)

Mysuru decked up for World Famous Jamboo Savari

ಮೈಸೂರಿನ ಪ್ರಮುಖ ರಸ್ತೆಗಳು, ಸ್ವಚ್ಛ ಮತ್ತು ಸುಂದರವಾಗಿ ಕಂಗೊಳಿಸುತ್ತಿವೆ. ನಗರದ ಪ್ರಮುಖ ಬೀದಿಗಳೆಲ್ಲಾ ವಿದ್ಯುದ್ವೀಪಗಳಿಂದ ಸಿಂಗಿರಿಸಿಕೊಂಡು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಮೂಲ ಸೌಕರ್ಯಗಳಿಗೆ ಯಾವುದೇ ಕೊರತೆ ಉಂಟಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಮಂಗಳವಾರ ಮಧ್ಯಾಹ್ನ 2:45ಕ್ಕೆ ಅರಮನೆಯಿಂದ ಆರಂಭವಾಗುವ ಜಂಬೂ ಸವಾರಿ ಬನ್ನಿಮಂಟಪದಲ್ಲಿ ಸಂಜೆ 4:30ಕ್ಕೆ ಕೊನೆಗೊಳಲ್ಲಿದೆ. ಒಟ್ಟು ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಏರ್ಪಡಿಸಲಾಗಿದೆ.(ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!)

Mysuru decked up for World Famous Jamboo Savari

ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ವಸತಿ ಗೃಹಗಳಲ್ಲಿ ವಿಶೇಷ ಭದ್ರತೆ ಒದಗಿಸಲು ಮತ್ತು ಸ್ವಚ್ಛತೆ ಕಾಪಾಡಲು ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸುತ್ತಿದೆ. ಮೈಸೂರು ಸುತ್ತಮುತ್ತಲಿನ ಪ್ರದೇಶಗಳಿಗೂ ವಿಶೇಷ ಭದ್ರತೆ ಒದಗಿಸಲಾಗಿದೆ.

ಈಗಾಗಲೇ ಗಜಪಡೆಗಳ ಅಭ್ಯಾಸ ತಾಲೀಮು ನಡೆದಿದ್ದು, ಬನ್ನಿಪ ಮಂಟಪ ಮೈದಾನದಲ್ಲಿ ಕುದುರೆ ಕವಾಯತು. ಪಂಜಿನ ಕವಾಯತು ಮತ್ತಿತರ ಪ್ರಮುಖ ಆಕರ್ಷಣಾ ಕಾರ್ಯಕ್ರಮಗಳು ನಡೆಯಲಿವೆ. ಗೌರವಾನ್ವಿತ ರಾಜ್ಯಪಾಲರಾದ ಶ್ರೀ ವಜುಭಾಯಿ ವಾಲಾ ಅವರು ಗೌರವ ವಂದನೆ ಸ್ವೀಕರಿಸಲಿದ್ದಾರೆ.

English summary
City of palace Mysuru is all decked up for Jamboo savari on Tuesday(Oct 11). The grand procession of Goddess Chamundeshwari idol placed on Golden Howdah will start from Mysore palce around 2.45 PM. The police have deployed additional 4,000 personnel and installed more than 50 CCTV cameras on the procession route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X