ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ದಿನಾಂಕ ಘೋಷಣೆಯಾದರೂ ಅತಂತ್ರ ಸ್ಥಿತಿಯಲ್ಲಿ ರಂದೀಪ್

By Yashaswini
|
Google Oneindia Kannada News

ಮೈಸೂರು, ಮಾರ್ಚ್ 28 : ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಡಿ.ರಂದೀಪ್ ಅವರಿಗೆ ಸಂಕಷ್ಟ ಎದುರಾಗಿದೆ. ಮೈಸೂರು ನಿರ್ಗಮಿತ ಜಿಲ್ಲಾಧಿಕಾರಿ ರಂದೀಪ್ ಮಾತ್ರ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಂದೀಪ್​ಗೆ ಹಾಸನಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಇತ್ತ ವರ್ಗಾವಣೆ ಆದೇಶದ ವಿರುದ್ಧ ರೋಹಿಣಿ ಸಿಂಧೂರಿ ಸಿಎಟಿ ಮೊರೆ ಹೋದ ಹಿನ್ನೆಲೆಯಲ್ಲಿ ಮೈಸೂರಿನಿಂದ ನಿರ್ಗಮಿತಗೊಂಡಿದ್ದ ರಂದೀಪ್ ಅಧಿಕಾರ ವಹಿಸಿಕೊಳ್ಳಲಾಗಲಿಲ್ಲ. ಇತ್ತ ಮೈಸೂರಿನ ಡಿಸಿಯಾಗಿ ಶಿವಕುಮಾರ್ ಅಧಿಕಾರ ವಹಿಸಿಕೊಂಡರು.

Mysuru Dc Randeep still in Confusion

ಅತಂತ್ರರಾಗಿದ್ದಾರೆ ಐಎಎಸ್ ಅಧಿಕಾರಿ ರಂದೀಪ್!ಅತಂತ್ರರಾಗಿದ್ದಾರೆ ಐಎಎಸ್ ಅಧಿಕಾರಿ ರಂದೀಪ್!

ಕಳೆದ 20 ದಿನಗಳಿಂದ ಮೈಸೂರು, ಹಾಸನದಲ್ಲಿ ಪೋಸ್ಟಿಂಗ್ ಇಲ್ಲದೆ ರಂದೀಪ್ ಮೈಸೂರಿನ ಜಿಲ್ಲಾಧಿಕಾರಿ ನಿವಾಸದಲ್ಲಿಯೇ ಉಳಿದು ಕೊಂಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹೊಸ ವರ್ಗಾವಣೆಗೂ ಸರ್ಕಾರ ಆದೇಶ ಮಾಡುವ ಆಗಿಲ್ಲ. ಸಿಎಟಿ ಆದೇಶಕ್ಕಾಗಿ ರಂದೀಪ್ ಕೂಡ ಕಾಯುತ್ತಿದ್ದಾರೆ. ಸಿಎಟಿ ಆದೇಶ ಹೊರಡಿಸದಿದ್ದರೆ ಚುನಾವಣೆ ಮುಗಿಯುವವರೆಗೂ ರಂದೀಪ್ ಸುಮ್ಮನೇ ಕೂರಬೇಕಾದ ಸ್ಥಿತಿ ಎದುರಾಗುತ್ತದೆಯಷ್ಟೇ.

English summary
Mysuru Deputy commissioner D.Randeep who has an order of transfer to Hassan district is still in confusion. Even though, the Karnataka assembly elections 2018 dates are announced Government is not taking proper decision in transfers of IAS officers in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X