ಮೈಸೂರು ದಸರಾ ವೆಬ್ ಸೈಟ್ ಇನ್ನೂ Comming Soon

Posted By:
Subscribe to Oneindia Kannada

ಮೈಸೂರು, ಆ, 11 : ನಾಡಹಬ್ಬ ಮೈಸೂರು ದಸರಾ ಆರಂಭವಾಗಲು ದಿನಗಣನೆ ಆರಂಭವಾಗಿದೆ. ಆದರೆ, ಪ್ರವಾಸಿಗರಿಗೆ ದಸರಾ ಕುರಿತು ಮಾಹಿತಿ ನೀಡುವ ವೆಬ್ ಸೈಟ್ ಇನ್ನು ಸಿದ್ಧವಾಗಿಲ್ಲ.

ದಸರೆಗೆ ಸಜ್ಜಾಗುತ್ತಿರುವ ಅರಮನೆ ನಗರಿಯಲ್ಲಿ ದೇಗುಲಗಳಿಗೆ ಸುಣ್ಣ-ಬಣ್ಣ

ಮೈಸೂರು ದಸರಾ ಬಗ್ಗೆ ಮಾಹಿತಿ ನೀಡುವ ವೆಬ್ ಸೈಟ್ ರೂಪಿಸುವ ಕೆಲಸವನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ. ಸದ್ಯ, ವೆಬ್ ಸೈಟ್ ನಲ್ಲಿ ದಸರಾ ನಡೆಯುವ ದಿನಾಂಕ ಮಾತ್ರವಿದ್ದು, COMING SOON ಎಂಬ ಫಲಕ ಮಾತ್ರ ಕಾಣಿಸುತ್ತಿದೆ.

ದಸರೆಯ ಆನೆಗಳಿಗೆ ಶಿಬಿರಗಳಲ್ಲಿ ನಡೆಯುತ್ತಿದೆ ವಿಶೇಷ ತಯಾರಿ..!

ದಸರಾಗೆ ಕೆಲವು ದಿನಗಳು ಬಾಕಿ ಇರುವಾಗ ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಆದರೆ, ವಿದೇಶ, ಹೊರ ರಾಜ್ಯದಿಂದ ಬರುವ ಪ್ರವಾಸಿಗರಿಗೆ ದಸರಾಕ್ಕೆ ಕಡಿಮೆ ದಿನಗಳಿರುವಾಗ ಮಾಹಿತಿ ಸಿಕ್ಕರೆ ಏನು ಉಪಯೋಗವಾಗುತ್ತದೆ?.

Mysuru Dasara website under construction

ದಸರಾಗೆ ಐದಾರು ತಿಂಗಳು ಇರುವಾಗ ವೆಬ್ ಸೈಟ್ ಕಾರ್ಯ ನಿರ್ವಹಿಸಲು ಆರಂಭವಾದರೆ ಜನರಿಗೆ ಮಾಹಿತಿ ಸಿಕ್ಕಿ ದಸರಾಕ್ಕೆ ಆಗಮಿಸಲು ಅನುಕೂಲವಾಗುತ್ತದೆ. ಕೆಲವೇ ದಿನಗಳು ಇರುವಾಗ ಮಾಹಿತಿ ಸಿಕ್ಕರೆ ಬರುವುದಕ್ಕೆ ಕಷ್ಟವಾಗುತ್ತದೆ ಎಂಬುದು ಜನರ ಅಭಿಪ್ರಾಯ.

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ 12 ಆನೆಗಳಿವು

ಕೋಟಿ-ಕೋಟಿ ಹಣ : ಮೈಸೂರು ದಸರಾಗೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣ ವಿನಿಯೋಗಿಸಿದರೂ ಶಾಶ್ವತ ವೆಬ್‌ಸೈಟ್ ರೂಪುಗೊಂಡಿಲ್ಲ. ದಸರಾ ಆರಂಭಕ್ಕೂ ಕೆಲವು ದಿನಗಳ ಮುಂಚೆ ಪ್ರಾರಂಭವಾಗುವ ವೆಬ್‌ಸೈಟ್‌ ದಸರೆಯ ನಂತರ ಮಲಗುತ್ತದೆ.

'ದಸರಾ ಕುರಿತು ಮಾಹಿತಿ ನೀಡುವ ಶಾಶ್ವತ ವೆಬ್‌ಸೈಟ್‌ ರೂಪಿಸುವ ಪ್ರಸ್ತಾಪವನ್ನು ದಸರಾ ಕಾರ್ಯಕಾರಿ ಸಮಿತಿ ಮುಂದಿಡಲಾಗುವುದು. ದಸರಾ ಪೂರ್ವ, ದಸರೆಯ ಸಮಯ ಹಾಗೂ ದಸರೆಯ ನಂತರ ಎಂಬ ಮೂರು ವಿಭಾಗಗಳಲ್ಲಿ ಯಾವ-ಯಾವ ವಿಷಯಗಳು ಇರಬೇಕು ಎನ್ನುವುದು ಅಂತಿಮವಾಗಬೇಕು. ಈ ಕುರಿತ ಪ್ರಯತ್ನ ಸಾಗಿದೆ' ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ದನ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Few days left for word famous Mysuru Dasara 2017. But, dasara website under construction. This year Dasara will begin on September 21 and ends on 30th September, 2017.
Please Wait while comments are loading...