ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ: ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಅಭಿಷೇಕ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 20: ಮೈಸೂರು ದಸರಾ ಉತ್ಸವದಲ್ಲಿನ ಅಂಬಾರಿಯಲ್ಲಿ ಕುಳಿತು ವಿಜೃಂಭಿಸಲಿರುವ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ವಿವಿಧ ಅಭಿಷೇಕ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವೈಭವದ ದಸರಾ ವಿಶೇಷ ಪುಟ

ಚಾಮುಂಡಿ ದೇವಾಲಯದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಅಭಿಷೇಕ ನೆರವೇರಿಸಿ, ಸೀರೆ ಉಡಿಸಿ ಅಲಂಕರಿಸಿದರು. ಗುರುವಾರ ಬೆಳಿಗ್ಗೆ ತಾಯಿಗೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ದಸರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ವಿಜಯದಶಮಿಯ ದಿನ ಚಾಮುಂಡಿ ಬೆಟ್ಟದಿಂದ ಅರಮನೆಗೆ ತಂದು ಅಂಬಾರಿಯಲ್ಲಿ ಕುಳ್ಳಿರಿಸಲಾಗುವುದು.

Mysuru Dasara: Special pooja to Goddess Chamundi in Chamundi hills

ಮೈಸೂರು ಅರಮನೆ ಪ್ರವೇಶಕ್ಕೆ ಆಯ್ದ ದಿನಗಳಲ್ಲಿ ನಿರ್ಬಂಧ
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Photos : 407ನೇ ಮೈಸೂರು ದಸರಾಗೆ ವೈಭವದ ಚಾಲನೆ

ಅರಮನೆಯಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯುವ ಹಿನ್ನೆಲೆಯಲ್ಲಿ ಅರಮನೆಗೆ ಆಯ್ದ ದಿನಗಳಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧ ವಿಧಿಸಿ, ಮೈಸೂರು ಅರಮನೆ ಆಡಳಿತ ಮಂಡಳಿ ತೀರ್ಮಾನಿಸಿದೆ. ಸೆ.21 ರಂದು ಬೆಳಗ್ಗೆ 10 ರಿಂದ 1.30 ರವರೆಗೆ, ಸೆ.29 ರಂದು ಮಧ್ಯಾಹ್ನದವರೆಗೆ ನಿರ್ಬಂಧ ವಿಧಿಸಲಾಗಿದೆ. ಆಯುಧಪೂಜೆ ಹಿನ್ನೆಲೆ ಅರ್ಧ ದಿನ ನಿಷಿದ್ಧ. ಸೆ.30ರಂದು ವಿಜಯ ದಶಮಿ ಹಿನ್ನೆಲೆ ಸಂಪೂರ್ಣ ನಿಷೇಧಿಸಲಾಗಿದೆ.

English summary
On occasion of Dasara festival a specail pooja has offered to Goddess Chamundi in Chamundi hills Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X