ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ: ಪ್ರವಾಸಿಗರಿಗಾಗಿ ಸಿಂಗಲ್ ಟಿಕೇಟ್ ಸೌಲಭ್ಯ

|
Google Oneindia Kannada News

ಮೈಸೂರು ಸೆಪ್ಟೆಂಬರ್ 22: ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಮೊದಲಿಗೆ ಸಿಂಗಲ್ ಟಿಕೇಟ್ ವ್ಯವಸ್ಥೆ ಅನುಷ್ಠಾನ ಮಾಡಲಾಗುತ್ತಿದ್ದು ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 30 ರವರೆಗೆ ಪ್ರವಾಸಿಗರು ಅವಕಾಶ ಬಳಸಿಕೊಳ್ಳಬಹುದಾಗಿದೆ.

ಚಾಮುಂಡಿಬೆಟ್ಟದಲ್ಲಿನ ಬೈನಾಕೂಲರ್ ಗೆ ವ್ಯೂ ಪಾಯಿಂಟ್‍ ಗೆ ಚಾಲನೆಚಾಮುಂಡಿಬೆಟ್ಟದಲ್ಲಿನ ಬೈನಾಕೂಲರ್ ಗೆ ವ್ಯೂ ಪಾಯಿಂಟ್‍ ಗೆ ಚಾಲನೆ

ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿಗಳು ಮಾತನಾಡಿ ಈ ವ್ಯವಸ್ಥೆ ಆಧುನಿಕ ಕ್ಯೂ ಅರ್ ಕೋಡ್ ಇರುತ್ತದೆ. ಈ ಬಗ್ಗೆ ದಸರಾ ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚೆ ಆಗಿತ್ತು ಅದರಂತೆ ಸಿಂಗಲ್ ಟಿಕೇಟ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಪ್ರವಾಸಿಗರಿಗೆ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ಇರುವುದಿಲ್ಲ ಎಂದು ತಿಳಿಸಿದರು.

Mysuru Dasara: Single ticket facility to Mysuru tourists

ಶುಕ್ರವಾರದಿಂದಲೇ ಜಿಲ್ಲಾಧಿಕಾರಿಗಳ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಆನ್ ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದರು. ಮೈಸೂರು ಅರಮನೆ, ಮೃಗಾಲಯ, ಕಾರಂಜಿಕೆರೆ, ಚಾಮುಂಡೇಶ್ವರಿ ದೇವಾಲಯ, ಕೆ.ಆರ್.ಎಸ್. ಹಾಗೂ ರಂಗನತಿಟ್ಟು ಪ್ರವಾಸಿ ತಾಣಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪ್ರವಾಸಿಗರು ಬುಕ್ ಮೈ ಶೋ ವೆಬ್‍ನ ಮೂಲಕ ಆನ್‍ಲೈನ್‍ನಲ್ಲಿ ಪಡೆಯಬಹುದಾಗಿದೆ.

ಮೈಸೂರಿನಲ್ಲಿದೆ ಭಾರತದ ಮೊದಲ ಮರಳು ಶಿಲ್ಪ ಮ್ಯೂಸಿಯಂ!ಮೈಸೂರಿನಲ್ಲಿದೆ ಭಾರತದ ಮೊದಲ ಮರಳು ಶಿಲ್ಪ ಮ್ಯೂಸಿಯಂ!

ಪ್ರವಾಸಿಗರು ಟಿಕೇಟ್ ಖರೀದಿ ಮಾಡಿದ 15 ದಿನಗಳವರೆಗೆ ಯಾವಾಗಬೇಕಾದರು ಭೇಟಿ ನೀಡಬಹುದಾಗಿದೆ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಹೆಚ್.ಪಿ. ಜನಾರ್ಧನೆ ಅವರು ಟಿಕೇಟ್ ಖರೀದಿಗಾಗಿ www.bookmyshow.com (ಕೃಪೆ: ಕರ್ನಾಟಕ ವಾರ್ತೆ)

English summary
To make 2017 Mysuru Dasara a good memory for all people, Mysuru district administration has decided to give single ticket facility for the tourists of Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X