ಮೈಸೂರು ಅರಮನೆಗೆ ಈ ಕೆಳಕಂಡ ದಿನಗಳಲ್ಲಿ ಪ್ರವೇಶ ನಿರ್ಬಂಧ

By: ಮೈಸೂರು ಪ್ರತಿನಿಧಿ
Subscribe to Oneindia Kannada
Mysuru Dasara : These particular days public will not allowed inside Mysuru Palace

ಮೈಸೂರು, ಸೆಪ್ಟೆಬರ್ 16: ಮೈಸೂರು ದಸರಾ-2017 ರ ಪ್ರಯುಕ್ತ, ಪ್ರತಿ ವರ್ಷದಂತೆ ಮೈಸೂರು ರಾಜಮನೆತನದವರು ಮೈಸೂರು ಅರಮನೆಯಲ್ಲಿ "ಧಾರ್ಮಿಕ ಪೂಜಾ ಕೈಂಕರ್ಯ"ಗಳನ್ನು ಕೈಗೊಳ್ಳಲಿದ್ದಾರೆ. ತನ್ನಿಮಿತ್ತ ಕೆಲವು ದಿನ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಮೈಸೂರು ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಕೆಳಕಂಡ ದಿನಾಂಕಗಳಂದು ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ

ಈ ಕೆಳಕಂಡ ದಿನಾಂಕಗಳಂದು ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಗಮನಿಸುವಂತೆ ಕೋರಲಾಗಿದೆ.

Mysuru Dasara: No entry for publics for palace on some particular days.

21-09-2017 - ಗುರುವಾರ ಮಧ್ಯಾಹ್ನ 1:30 ರವರೆಗೆ ಮೈಸೂರು ಅರಮನೆಯ ಒಳಾವರಣ ಪ್ರವೇಶವನ್ನು ನಿರ್ಬಂಧಿಸಲಾಗದೆ ಹಾಗೂ ಹೊರಾವರಣಕ್ಕೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ

29-09-2017 - ಶುಕ್ರವಾರ ಮಧ್ಯಾಹ್ನ 1:30 ರವರೆಗೆ ಮೈಸೂರು ಅರಮನೆಯ ಒಳಾವರಣ ಹಾಗೂ ಹೊರಾವರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ

30-09-2017 - ಶನಿವಾರ ಸಂಪೂರ್ಣ ದಿನ ಮೈಸೂರು ಅರಮನೆಯ ಒಳಾವರಣ ಹಾಗೂ ಹೊರಾವರಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಮತ್ತು ಪಾಸ್ ಹೋಲ್ಡರ್ಸ್ ಹಾಗೂ ಟಿಕೇಟ್ (ದಸರಾ ಟಿಕೇಟ್) ಹೊಂದಿರುವವರಿಗೆ ಮಾತ್ರ ಪ್ರವೇಶವನ್ನು ಕಲ್ಪಿಸಲಾಗಿದೆ.

14-10-2017 - ಶನಿವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1:00 ರವರೆಗೆ ಮೈಸೂರು ಅರಮನೆಯ ಒಳಾವರಣದ ನೆಲ ಅಂತಸ್ತಿಗೆ ಹಾಗೂ ಅರಮನೆಯ ಹೊರಾವರಣಕ್ಕೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Since Mysuru royal family will be offering some worships in Mysuru palace, entry to palace for public will be banned on those days. Here is the details.
Please Wait while comments are loading...