ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಮಹೋತ್ಸವ : ಸೆ.23 ರ ಕಾರ್ಯಕ್ರಮಗಳ ಪಟ್ಟಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 22: ಮೈಸೂರಿನ ಸಾಂಸ್ಕೃತಿಕ ವೈಭವವನ್ನು ಸಾರುವ ದಸರಾ ಮಹೋತ್ಸವ ಸೆ.21 ರಂದು ಆರಂಭವಾಗಿದೆ. ನಾಡಿನ ಸಂಸ್ಕೃತಿ, ಪರಂಪರೆಯ ಸಿರಿವಂತಿಕೆಯನ್ನು ಬಿಂಬಿಸುವ ಹತ್ತು ಹಲವು ಕಾರ್ಯಕ್ರಮಗಳು ದಿನೇ ದಿನೇ ನಡೆಯುತ್ತಿವೆ. ಸೆಪ್ಟೆಂಬರ್ 23 ರಂದು ಸಹ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ಪಟ್ಟಿ ಇಂತಿದೆ.

In Pics : ದಸರಾ ವೈಭವ 2017 : ಸರಳ ಮತ್ತು ಸುಂದರ

ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 7 ಗಂಟೆಗೆ ರಂಗಚಾರ್ಲು ಪುರಭವನದಲ್ಲಿ ಸಹಕಾರ ಸಚಿವ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ಚಾಲನೆ ನೀಡುವರು. ಆದರ್ಶ ಅತ್ತೆ ಸೊಸೆ ಕಾರ್ಯಕ್ರಮಕ್ಕೆ ಬೆಳಿಗ್ಗೆ 11 ಗಂಟೆಗೆ ಜೆ.ಕೆ. ಮೈದಾನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರು ಉದ್ಘಾಟಿಸುವರು.

Mysuru Dasara: List of events of 23rd Sep

ಸಂಸ್ಕೃತಿಕ ಕಾರ್ಯಕ್ರಮಗಳು
ಅಂಬಾವಿಲಾಸ ಅರಮನೆ ವೇದಿಕೆ: ಸಿದ್ದಿ, ಯೋಗ ನೃತ್ಯ, ವಿದುಷಿ ಯಾಮಿನಿ ಮತ್ತಣ್ಣ, ಬೆಂಗಳೂರು (ಸಂಜೆ 6:00-6:45); ಕುಚುಪುಡಿ ನೃತ್ಯ, ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದ ಆಂಧ್ರ ಪ್ರದೇಶ ಕಲಾವಿದರಿಂದ (6:45-7:15); ಬುದ್ದಂ ಶರಣಂ ನೃತ್ಯ ರೂಪಕ, ಗಾನಭಾರತಿ ಸಂಗಿತ ನೃತ್ಯ ಶಾಲಾ ಕಲಾವಿದರು, ಮೈಸೂರು (7:15-8:00); ಹಿಂದೂಸ್ಥಾನಿ ಗಾಯನ, ವಿದ್ವಾನ್ ಶುಭ ಮುದ್ಗಲ್,ನವದೆಹಲಿ (8:00-10:00).

ಮೈಸೂರು ದಸರಾ: ಪ್ರವಾಸಿಗರಿಗಾಗಿ ಸಿಂಗಲ್ ಟಿಕೇಟ್ ಸೌಲಭ್ಯಮೈಸೂರು ದಸರಾ: ಪ್ರವಾಸಿಗರಿಗಾಗಿ ಸಿಂಗಲ್ ಟಿಕೇಟ್ ಸೌಲಭ್ಯ

ಕಲಾಮಂದಿರ ವೇದಿಕೆ: ಮಾರ್ಷಲ್ ಆಟ್ರ್ಸ, ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದ ವತಿಯಿಂದ ಪುದುಚೆರಿ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಕರ್ನಾಟಕ ಶಾಸ್ತ್ರೀಯ ಸಂಗೀತ, ಕಾಂಚನ ಮತ್ತು ರಂಜನಿ, ಮಂಗಳೂರು (ಸಂಜೆ 6:00- 7:00); ಭಾವ ಗೀತೆ ಗಾಯನ, ರಾಜ ಪ್ರಭು ದೋತ್ರೆ, ಬೆಳಗಾವಿ (ಸಂಜೆ 7:00- 8:00); ನೃತ್ಯ ರೂಪಕ, ಕಾವೇರಿ ನೃತ್ಯ ಶಾಲೆ, ಮಡಿಕೇರಿ (ರಾತ್ರಿ 8:00- 9:00).

ಜಗನ್ಮೋಹನ ಅರಮನೆ ವೇದಿಕೆ: ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಮಿಜೋರಾಂ ಕಲಾವಿದರಿಂದ ಚಿರಾವ್ ನೃತ್ಯ, (ಸಂಜೆ 5:30-6:00 ಗಂಟೆ); ವಾದ್ಯ ಸಂಗೀತ, ಪ್ರಮೋದ್ ಶರ್ಮ ಮತ್ತು ತಂಡ, ಮೈಸೂರು (ಸಂಜೆ 5:30-6:00 ಗಂಟೆ); ಗೊಂಬೆಯಾಟ, ಹೊಂಗಿರಣ ಹಳಿಯಾಳ ತಂಡ, ಉತ್ತರ ಕನ್ನಡ (ಸಂಜೆ 6:00- 7:00); ಶಾಸ್ತ್ರೀಯ ನೃತ್ಯ, ಜಯಾನಾಟ್ಯ ಕಲಾ ಅಕಾಡೆಮಿ, ಕೋಲಾರ (ರಾತ್ರಿ 8:00- 9:00).

ವಿಡಿಯೋಗಳಲ್ಲಿ ಮೈಸೂರು ದಸರೆಯ ಸಂಭ್ರಮಕ್ಕೆ ಶುಭಹಾರೈಕೆವಿಡಿಯೋಗಳಲ್ಲಿ ಮೈಸೂರು ದಸರೆಯ ಸಂಭ್ರಮಕ್ಕೆ ಶುಭಹಾರೈಕೆ

ಗಾನಭಾರತಿ ವೇದಿಕೆ: ಸುಗ್ಗಿ ನೃತ್ಯ, ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರ ತೆಲಂಗಾಣ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಸುಗಮ ಸಂಗೀತ, ಹೃತ್ವಿಕ್ ಮತ್ತು ತಂಡ, ಮೈಸೂರು (ಸಂಜೆ 6:00- 7:00); ನೃತ್ಯ ರೂಪಕ, ಶಾರದ ಕಲಾ ಶಾಖೆ, ದಾವಣಗೆರೆ (ಸಂಜೆ 7:00- 8:00); ಶಾಸ್ತ್ರೀಯ ಸಂಗೀತ, ಮಹಾಲಕ್ಷ್ಮಿ ಶೆಣೈ, ಕಾರ್ಕಳ (ರಾತ್ರಿ 8:00- 9:00).

ಚಿಕ್ಕಗಡಿಯಾರ ವೇದಿಕೆ: ಡಾಂಗಿ ನೃತ್ಯ, ದಕ್ಷಿಣವಲಯ ಸಾಂಸ್ಕ್ರತಿಕ ಕೇಂದ್ರ ಗುಜರಾತ್ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಭಾವಗೀತೆ, ಬಸವಯ್ಯ ಮತ್ತು ತಂಡ, ಮೈಸೂರು, (ಸಂಜೆ 6:00- 7:00); ಗೊಂದಲಿಗರ ಹಾಡುಗಳು, ಅಂಬಾಜಿ ಸುಗತೇಕರ ತಂಡ, ಬಾಗಲಕೋಟೆ (ಸಂಜೆ 7:00- 8:00); ನೀಲಗಾರರ ಪದಗಳು, ಅಲ್ಕೆರೆ ಶಿವಕುಮಾರ್ ಮತ್ತು ತಂಡ, ಚಾಮರಾಜನಗರ (ರಾತ್ರಿ 8:00- 9:00).

ಪುರಭವನ ವೇದಿಕೆ: ರತ್ನಮಾಂಗಲ್ಯ, ಶಾಂತಾದೇವಿ ಮತ್ತು ತಂಡ, ಮೈಸೂರು (ಬೆಳಗ್ಗೆ 10:00); ಚಾಮುಂಡೇಶ್ವರಿ ಮಹಿಮೆ ಯಕ್ಷಗಾನ, ಕಾರ್ಕಳ (ಮಧ್ಯಾಹ್ನ 3:00); ಅಣ್ಣ ತಂಗಿ, ನಾಟಕ, ರಾಧರಾಜೇಶ್ವರಿ ಕಲಾ ಸಂಘ, ಮೈಸೂರು (ರಾತ್ರಿ 7:00-9:00).

ಮಹಿಳಾ ಮತ್ತು ಮಕ್ಕಳ ದಸರಾ
ಜಗನ್ಮೋಹನ ಅರಮನೆ: ಮಕ್ಕಳ ದಸರಾ, ಭರತ ನಾಟ್ಯ, ಮನು ವಿದ್ಯಾ ಕಲ್ಚರಲ್ ಫೌಂಡೇಶನ್ (ಬೆಳಗ್ಗೆ 9:30-10:30); ಪ್ರೌಢ ಶಾಲಾ ವಿಭಾಗದ ಮಕ್ಕಳಿಂದ ನಾಟಕ ಸ್ಪರ್ಧೆ (ಬೆಳಗ್ಗೆ 10:30-12:30); ಅಶೋಕ ಸಾಮ್ರಾಟ ದೊಡ್ಡಾಟ, ಅಳಿಲು ಸೇವಾ ಸಂಸ್ಥೆ, ಹಾವೇರಿ (ಮಧ್ಯಾಹ್ನ 12:30-1-30); ನೃತ್ಯ ಕಾರ್ಯಕ್ರಮ ಅನುಷ ಮತ್ತು ತಂಡ (ಮಧ್ಯಾಹ್ನ 1:30-2:30).

ಚಲನಚಿತ್ರೋತ್ಸವ
ಐನಾಕ್ಸ್ ಚಿತ್ರಮಂದಿರ ಸ್ಕ್ರೀನ್ 1: ಬ್ಯಾಟಲ್ ಶಿಪ್ ಪೊಟೆಮ್ಕಿನ್ (10:00); ಕಮ್ಮಿಸ್ಸಾರ್ (12:00); ಟೂ ಕಾಮ್ರೆಡ್ಸ ವೆರ್ ಸರ್ವಿಂಗ್ (3:00); ಎ ಸ್ಲೇವ್ ಆಪ್ ಲವ್ (5:30).
ಐನಾಕ್ಸ್ ಚಿತ್ರಮಂದಿರ ಸ್ಕ್ರೀನ್ 2: ಅರ್ಥ ಕ್ರೂಸೇಡರ್ (10:30); ಯು ಟರ್ನ್(11:00); ಕೆ ಸೆರಾ ಸೆರಾ (1.30); ಬಸ್ಟೂ ಷ್ಯಾಪ್ (4:30).
ಡಿ. ಆರ್. ಸಿ. ಚಿತ್ರಮಂದಿರ: ಕಿರಿಕ್ ಪಾರ್ಟಿ (10:00); ಅಮರಾವತಿ (1:00); ಸಿಲಿಕಾನ್ ಸಿಟಿ (4:00) ಕಾಫಿ ತೋಟ (7:00).

ಆಹಾರಮೇಳ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ: 'ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣ ಕಾರ್ಯಕ್ರಮಗಳು" ವಿಚಾರ ಮಂಡನೆ ದಿನಮಣಿ, ಉಪನ್ಯಾಸಕರು, ಮಹಾರಾಜಾ ಕಾಲೇಜು (ಬೆಳಗ್ಗೆ 10:00 ರಿಂದ); ನಳಪಾಕ ಸ್ಪರ್ಧೆ, ಗಂಡ-ಹೆಂಡತಿ ವಿಭಾಗದಲ್ಲಿ ರಾಗಿಮುದ್ದೆ ಮತ್ತು ಉಪ್ಸಾರು (ಮಧ್ಯಹ್ನಾ 12:00-2:00); ಸವಿಭೋಜನ ಮೈಸೂರುಪಾಕ್ ತಿನ್ನುವ ಸ್ಪರ್ಧೆ (3:00-4:00); ಮಹಿಳಾ ಡೊಳ್ಳು ಕುಣಿತ, ದೇಸಿರಂಗ, ಮೈಸೂರು (5:00-6:00); ಜಾದೂ ಪ್ರದರ್ಶನ, ಜಗ್ಗು ಜಾದೂಗಾರ್ (6:00-7:30); ಸ್ವರಸಿಂಚನ

ಸಾಂಸ್ಕ್ರತಿಕ ಟ್ರಸ್ಟ್ ಅವರಿಂದ ಚಲನಚಿತ್ರ ಗಾಯನ (7:30-10:00).
ಲಲಿತಮಹಲ್ ಪಕ್ಕದ ಮುಡಾ ಮೈದಾನ: 'ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣ ಕಾರ್ಯಕ್ರಮಗಳು" ವಿಚಾರ ಮಂಡನೆ ಮೈಸೂರು ವಿವಿ ಸಹಾಯಕ ಪ್ರಾಧ್ಯಾಪಕರು ಎಂ.ಮೀರಾ (ಬೆಳಗ್ಗೆ 10:00 ರಿಂದ); ನಳಪಾಕ ಸ್ಪರ್ಧೆ, ಗಂಡ-ಹೆಂಡತಿ ವಿಭಾಗದಲ್ಲಿ ರಾಗಿಮುದ್ದೆ ಮತ್ತು ಉಪ್ಸಾರು (ಮಧ್ಯಹ್ನಾ 12:00-2:00); ಸವಿಭೋಜನ ಮೈಸೂರುಪಾಕ್ ತಿನ್ನುವ ಸ್ಪರ್ಧೆ (3:00-4:00); ಸುಗಮ ಸಂಗೀತ, ಪಿ.ಎಂ. ನಂಜುಂಡಸ್ವಾಮಿ ಮತ್ತು ತಂಡ (5:00-6:00); ಸಮಕಾಲೀನ ನೃತ್ಯ, ರಿವೈಭ್ ಡ್ಯಾನ್ಸ್ ಗ್ರೂಪ್ಸ್ (6:00-7:30); ಹಾಸ್ಯ- ಲಾಸ್ಯ ಮಿಮಿಕ್ರಿ ದಯಾನಂದ್ ಮತ್ತು ತಂಡ (7:30-10:00). (ಕೃಪೆ: ಕರ್ನಾಟಕ ವಾರ್ತೆ)

English summary
World famous Mysuru Dasara has started from 21st September and will conclude on 30th Sep. Many cultural activities are taking place in Mysuru during 10 days Dasara event. Here is list of various events of 23rd september in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X