ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ: ಸೆ.21ರ ಕಾರ್ಯಕ್ರಮದ ಸಂಪೂರ್ಣ ವಿವರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 20 : ನಾಡ ಹಬ್ಬ ವಿಶ್ವವಿಖ್ಯಾತ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿದಿನದ ಕಾರ್ಯಕ್ರಮಗಳ ವಿವರವನ್ನು ಓದುಗರಿಗಾಗಿ 'ಒನ್ ಇಂಡಿಯಾ' ನೀಡುತ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಈ ಮಾಹಿತಿ ನೀಡಲಾಗಿದ್ದು, ಸೆ.21ರ ಕಾರ್ಯಕ್ರಮಗಳ ಪಟ್ಟಿ ಇಂತಿದೆ.

ವೈಭವದ ದಸರಾ ವಿಶೇಷ ಪುಟ

ಚಾಮುಂಡಿ ಬೆಟ್ಟ (ಬೆಳಗ್ಗೆ 10.30) : ಸಿಎಂ ಸಿದ್ದರಾಮಯ್ಯನವರು ಪೊಲೀಸ್ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸುವರು.

ದಸರಾಗೆ ರಾಜಮನೆತನಕ್ಕೆ ಆಹ್ವಾನ, 36 ಲಕ್ಷ ಗೌರವಧನದಸರಾಗೆ ರಾಜಮನೆತನಕ್ಕೆ ಆಹ್ವಾನ, 36 ಲಕ್ಷ ಗೌರವಧನ

ಕಲಾಮಂದಿರದಲ್ಲಿ (ಬೆಳಗ್ಗೆ 11) : ಗಂಟೆಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಶಿಲ್ಪ ರು ಕಾಳಾಚಾರ್ ಅವರಿಂದ ಕಲಾ ಪ್ರದರ್ಶನ ಮತ್ತು ಶಿಬಿರಗಳನ್ನು ಉದ್ಘಾಟಿಸುವರು.

Mysuru Dasara: Here is list of programmes of 21st Sep

ಚಾಮುಂಡಿ ಬೆಟ್ಟ : ದಸರಾ ಕ್ರೀಡಾಜ್ಯೋತಿಗೆ ಚಾಮುಂಡೇಶ್ವರಿ ದೇವಾಲಯದ ಎದುರಿನಲ್ಲಿ ಸಚಿವ ಪ್ರಮೋದ್ ಮದ್ವರಾಜ್ ಚಾಲನೆ ನೀಡುವರು.

Photos : 407ನೇ ಮೈಸೂರು ದಸರಾಗೆ ವೈಭವದ ಚಾಲನೆ

ಜೆ.ಕೆ.ಮೈದಾನ : ಮಹಿಳಾ ಉದ್ಯಮಿಗಳು ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಗಳ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸುವರು.

ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ

ಕಲಾಮಂದಿರ (11.30) : ಕಲಾಮಂದಿರದಲ್ಲಿ ಸಿಎಂ ಸಿದ್ದರಾಮಯ್ಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡುವರು.

ಜೆ.ಕೆ.ಮೈದಾನ : ಮಹಿಳಾ ದಸರಾಗೆ ಸಚಿವೆ ಉಮಾಶ್ರೀ ಚಾಲನೆ ನೀಡುವರು.

ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ (ಮಧ್ಯಾಹ್ನ 1) : ಆಹಾರ ಮೇಳಕ್ಕೆ ಸಚಿವ ಯು.ಟಿ.ಖಾದರ್ ಚಾಲನೆ ನೀಡುವರು.

ದೇವರಾಜ ಅರಸು ವಿವಿದ್ದೊದ್ದೇಶ ಕ್ರೀಡಾಂಗಣ (3 ಗಂಟೆ) : ದಸರಾ ಕುಸ್ತಿ ಪಂದ್ಯಾವಳಿಯನ್ನು ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವರು.

ಕುಪ್ಪಣ ಪಾರ್ಕ್ (4 ಗಂಟೆ) : ಫಲಪುಸ್ಪ ಪ್ರದರ್ಶನವನ್ನು ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಉದ್ಘಾಟಿಸುವರು.

ಚಾಮುಂಡಿ ವಿಹಾರ ಕ್ರೀಡಾಂಗಣ : ರಾಜ್ಯ ದಸರಾ ಕ್ರೀಡಾಕೂಟಕ್ಕೆ ಸಚಿವ ಪ್ರಮೋದ್ ಮದ್ವರಾಜ್ ಚಾಲನೆ ನೀಡುವರು,
ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ, ವೇದಾ ಕೃಷ್ಣಮೂರ್ತಿ ಉಪಸ್ಥಿತರಿರುವರು.

ಕಾಡಾ ಕಚೇರಿ ಆವರಣ : ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಸಚಿವೆ ಉಮಾಶ್ರೀ ಚಾಲನೆ ನೀಡುವರು.

ದಸರಾ ವಸ್ತು ಪ್ರದರ್ಶನ ಆವರಣ (ಸಂಜೆ 5): ದಸರಾ ವಸ್ತು ಪ್ರದರ್ಶನಕ್ಕೆ ಸಚಿವ ಪ್ರಿಯಾಂಕ ಖರ್ಗೆ ಚಾಲನೆ ನೀಡುವರು.

ಸಯ್ಯಾಜಿರಾವ್ ರಸ್ತೆಯ ಹಸಿರು ಮಂಟಪ (6.30): ದಸರಾ ದೀಪಾಲಂಕಾರವನ್ನು ಸಚಿವ ಡಿ.ಕೆ. ಶಿವಕುಮಾರ್ ಉದ್ಘಾಟಿಸುವರು,

ಮಹಾರಾಜ ಒವೆಲ್ ಗ್ರೌಂಡ್ (7) - ದಸರಾ ಯೋಗ ಜ್ಯೋತಿ ನಡಿಗೆಗೆ ಸಚಿವ ಕೆ.ಆರ್.ರಮೇಶ್ ಕುಮಾರ್ ಚಾಲನೆ ನೀಡುವರು.

English summary
Oneindia is giving details of each day programmes of Mysuru Dasara. Here is a list of programmes of Sep 21st, which is the first day of 10 days Dasara festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X