ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ. 21 ರಿಂದ ಮೈಸೂರಿನಲ್ಲಿ ದಸರಾ ಫಿಲಂ ಫೆಸ್ಟಿವಲ್

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 6: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ 'ಮೈಸೂರು ದಸರಾ ಫಿಲ್ಮ್ ಫೆಸ್ಟಿವಲ್ (ಎಂಡಿಎಫ್ ಎಫ್)' ಆಯೋಜಿಸಿದ್ದು, ಸೆ.21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು ಎಂದು ದಸರಾ ಮಹೋತ್ಸವದ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಸೆಪ್ಟಂಬರ್ 22 ರಿಂದ 'ಮೈಸೂರು ದಸರಾ ಚಲನಚಿತ್ರೋತ್ಸವ' ಆರಂಭ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ 'ಮೈಸೂರು ದಸರಾ ಫಿಲ್ಮ್ ಫೆಸ್ಟಿವಲ್' ಏರ್ಪಡಿಸಿದ್ದು, ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಆದ್ಯತೆ ನೀಡಿ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಆಲೋಚನೆ ಇದೆ ಎಂದರು.

Mysuru Dasara Film festival starts from Sep 21st

ಐನಾಕ್ಸ್, ಡಿಆರ್ ಸಿಯಲ್ಲಿ ಚಿತ್ರೋತ್ಸವ:
ಇದುವರೆಗೂ ದಸರಾ ಚಿತ್ರೋತ್ಸವ ನಗರದ ಬೇರೆ ಬೇರೆ ಚಿತ್ರಮಂದಿರಗಳಲ್ಲಿ ನಡೆಯುತ್ತಿತ್ತು. ಈ ಬಾರಿ ಸೆ.22ರಿಂದ ಆರಂಭವಾಗುವ ಎಂಡಿಎಫ್ ಎಫ್‍ಅನ್ನು ಐನಾಕ್ಸ್ ಹಾಗೂ ಡಿಆರ್ ಸಿಯಲ್ಲಿ ಆಯೋಜಿಸಲಾಗಿದೆ. ತಲಾ ಒಂದೊಂದು ಪರದೆಯಲ್ಲಿ ಎಲ್ಲಾ ನಾಲ್ಕು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ .

ಸೆ.21 ರಿಂದ ಮೈಸೂರು ದಸರಾ ಕುಸ್ತಿ ಪಂದ್ಯ ಆರಂಭಸೆ.21 ರಿಂದ ಮೈಸೂರು ದಸರಾ ಕುಸ್ತಿ ಪಂದ್ಯ ಆರಂಭ

ಜನಪ್ರಿಯ, ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ:
'ಮನ ಮಂಥನಾ', 'ಮಾರಿಕೊಂಡವರು' ಸೇರಿದಂತೆ ಪ್ರಾದೇಶಿಕ ಹಾಗೂ ಸ್ವದೇಶಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ದೇಶೀಯ ಚಿತ್ರಗಳಾದ ಅಸ್ಸಾಂ, ಮಣಿಪುರಿ ಜೊತೆಗೆ ಸ್ವೀಡನ್, ಇಟಲಿ, ಜಪಾನ್, ಯುಎಸ್‍ಎ, ರಷ್ಟಾಯ, ಇರಾಜ್, ಜರ್ಮನಿ, ಸೌಥ್ ಕೊರಿಯಾ ಹಾಗೂ ವೆನಿಜುವೆಲಾ ದೇಶಗಳ ಚಿತ್ರಗಳೂ ಪ್ರದರ್ಶನವಾಗಲಿವೆ.

Mysuru Dasara Film festival starts from Sep 21st

ಮೈಸೂರು ದಸರಾ ಫಿಲ್ಮಂ ಫೆಸ್ಟಿ ವಲ್ ನಲ್ಲಿ ನಗರದ ಐನಾಕ್ಸ್ ಚಿತ್ರಮಂದಿಗಳಲ್ಲಿ ಗಳಲ್ಲಿ ಸಿನಿಮಾ ವೀಕ್ಷಿಸಲು 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಐನಾಕ್ಸ್ ನಲ್ಲಿ 214 ಆಸನಗಳಿದ್ದು, ಚಿತ್ರೋತ್ಸವಕ್ಕೆ ಆಯ್ಕೆ ಮಾಡಲಾಗಿದೆ.

ಡಿಆರ್ ಸಿಯಲ್ಲಿ 'ಮುಕುಂದ ಮುರಾರಿ', 'ಇದೊಳ್ಳೆ ರಾಮಾಯಣ', 'ಲಿಫ್ಟ್ ಮ್ಯಾನ್', 'ಕಿರಿಕ್ ಪಾರ್ಟಿ', 'ಅಮರಾವತಿ', 'ಸಿಲಿಕಾನ್ ಸಿಟಿ', 'ಒಂದು ಮೊಟ್ಟೆಯ ಕಥೆ', 'ರಾಜ ಕುಮಾರ', 'ರಾಮ ರಾಮಾ ರೇ', 'ಆಪರೇಷನ್ ಅಲಮೇಲಮ್ಮ', 'ಶುದ್ಧಿ', 'ಹೆಬ್ಬುಲಿ', 'ಗೋಲಿ ಸೋಡ', 'ಪುಷ್ಪಕ ವಿಮಾನ-2', 'ಅಲ್ಲಮ', 'ಬಂಗಾರ s/o ಬಂಗಾರದ ಮನುಷ್ಯ', 'ನೀರ್ ದೋಸೆ', 'ಕಹಿ', 'ಚಕ್ರವರ್ತಿ', 'ಎರಡನೇ ಸಲ', 'ಬ್ಯೂಟಿಫುಲ್ ಮನಸ್ಸುಗಳು', 'ಸಂತು ಸ್ಟ್ರೈಟ್ ಫಾರ್ವರ್ಡ್', 'ದನ ಕಾಯೋನು' ಹಾಗೂ 'ಚೌಕ' ಸೇರಿದಂತೆ 28 ಕನ್ನಡ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಈ ಚಿತ್ರಮಂದಿರದ ಪ್ರವೇಶ ನೋಂದಣಿ 300 ರೂ. ಹಾಗೂ ಪ್ರದರ್ಶನವಾರು ಪಾಸ್ ಗೆ 30 ರೂ. ನಿಗದಿಪಡಿಸಲಾಗಿದೆ ಎಂದರು.

English summary
For the first time in Mysuru, Dasara Film Festival (MDFF) will screen films in Multiplexes in the city. Karnataka CM Siddaramaiah will inaugurate the Film festival on Sep 21st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X