ಮೈಸೂರು ದಸರಾ ಸಮಿತಿಗಳಿಗೆ ಅಧಿಕಾರಿಗಳ ನೇಮಕ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 1: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಕಾರ್ಯಚಟುವಟಿಕೆಗಳು ಆರಂಭಗೊಂಡಿವೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸಲು ಸಾಧ್ಯವಾಗುವಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಲಾಗುತ್ತದೆ.

ಅದರಂತೆ ಈ ಬಾರಿಯೂ ವಿವಿಧ ಉಪಸಮಿತಿಗಳಿಗೆ ಅಧಿಕಾರಿಗಳನ್ನು ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನಾಗಿ ನೇಮಿಸಿ, ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಂದೀಪ್ ಆದೇಶ ಹೊರಡಿಸಿದ್ದು, ವಿವರಗಳು ಈ ಕೆಳಗಿನಂತಿವೆ.[ದಸರಾ : ಕಾವಡಿ, ಮಾವುತರ ಮಕ್ಕಳ ಟೆಂಟ್ ಶಾಲೆ ನೋಡಿ]

ಸ್ವಾಗತ ಮತ್ತು ಆಮಂತ್ರಣ ಉಪ ಸಮಿತಿ
ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ (ಮೊ.ಸಂಖ್ಯೆ: 9980821911) ಅವರು ಉಪ ವಿಶೇಷಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಎನ್. ರಾಜು (9449841233) ಕಾರ್ಯಾಧ್ಯಕ್ಷ, ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-9ರ ಸಹಾಯಕ ಆಯುಕ್ತ ಪುಟ್ಟಶೇಷಗಿರಿ (9019481148) ಕಾರ್ಯದರ್ಶಿ.

ಮೆರವಣಿಗೆ, ಪಂಜಿನ ಕವಾಯತು ಉಪಸಮಿತಿ
ಮೈಸೂರು ನಗರ ಪೊಲೀಸ್ ಆಯುಕ್ತ (9480802201) ಅವರು ಉಪ ವಿಶೇಷಾಧಿಕಾರಿ, ಪೊಲೀಸ್ ನಗರ ಪೊಲೀಸ್ ಆಯುಕ್ತರ ಕಚೇರಿಯ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಎನ್.ರುದ್ರಮುನಿ (9480802203) ಕಾರ್ಯಾಧ್ಯಕ್ಷ ಹಾಗೂ ಕೃಷ್ಣರಾಜ ವಿಭಾಗದ ಸಹಾಯಕ ಆಯುಕ್ತ ಮಲ್ಲಿಕ್ (9480802213) ಕಾರ್ಯದರ್ಶಿ.

ಸ್ತಬ್ದ ಚಿತ್ರ ಉಪ ಸಮಿತಿ
ಮೈಸೂರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ (9480873000) ಉಪ ವಿಶೇಷಾಧಿಕಾರಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಕೆ.ವಿ.ಪ್ರಭುಸ್ವಾಮಿ (9480873004) ಕಾರ್ಯಾಧ್ಯಕ್ಷ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಜನಾರ್ದನ್ (9483970272) ಕಾರ್ಯದರ್ಶಿ.[ದಸರಾ ಆನೆಗಳ ಪೈಕಿ ಅರ್ಜುನನೇ ಬಲಶಾಲಿ!]

Mysuru Dasara committee formed

ರೈತ ದಸರಾ ಉಪ ಸಮಿತಿ
ಮೈಸೂರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ (9480873000) ಉಪ ವಿಶೇಷಾಧಿಕಾರಿ, ಜಂಟಿ ಕೃಷಿ ನಿರ್ದೇಶಕರು (7259005761) ಕಾರ್ಯಾಧ್ಯಕ್ಷ ಹಾಗೂ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಪಿ.ಎಂ.ಪ್ರಸಾದ್ ಮೂರ್ತಿ (9538200035) ಕಾರ್ಯದರ್ಶಿ.

ಕ್ರೀಡೆ ಉಪ ಸಮಿತಿ
ಮೈಸೂರು ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ (9480805001) ಉಪ ವಿಶೇಷಾಧಿಕಾರಿ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಎಂ.ಎಸ್. ಮರಿಸ್ವಾಮಿಗೌಡ (9449492684) ಕಾರ್ಯಾಧ್ಯಕ್ಷ ಹಾಗೂ ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ (9480886478) ಕಾರ್ಯದರ್ಶಿ.[ಜಂಬೂಸವಾರಿಯಲ್ಲಿ ಕೊಡಗಿನ ಆನೆಗಳದ್ದೇ ಕಾರುಬಾರು!]

ಸಾಂಸ್ಕೃತಿಕ ದಸರಾ ಉಪ ಸಮಿತಿ
ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ದಯಾನಂದ (9449842130) ಉಪ ವಿಶೇಷಾಧಿಕಾರಿ, ರಂಗಾಯಣ ಉಪನಿರ್ದೇಶಕಿ ನಿರ್ಮಲ ಮಠಪತಿ (9449842187) ಕಾರ್ಯಾಧ್ಯಕ್ಷೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ (9741513007) ಕಾರ್ಯದರ್ಶಿ.

ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ.ಎಂ,ಮಹೇಶ್ (9449842187) ಉಪ ವಿಶೇಷಾಧಿಕಾರಿ, ಮೈಸೂರಿನ ಕಾವ ಡೀನ್ ಬಸವರಾಜ್ ಮತುವಾಳಗಿ (9480197027) ಕಾರ್ಯಾಧ್ಯಕ್ಷ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ (9741513007) ಕಾರ್ಯದರ್ಶಿ.[ಮೈಸೂರು ದಸರಾ ಗಜಪಡೆಗಳಿಗೆ 32 ಲಕ್ಷ ರುಪಾಯಿ ವಿಮೆ]

ದೀಪಾಲಂಕಾರ ಉಪ ಸಮಿತಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ.ಎಂ,ಮಹೇಶ್ (9449842187) ಉಪ ವಿಶೇಷಾಧಿಕಾರಿ, ಚೆಸ್ಕಾಂ ಅಧೀಕ್ಷಕ ಎಂಜಿನಿಯರ್ ಎನ್.ನರಸಿಂಹೇಗೌಡ (9448994733) ಕಾರ್ಯಾಧ್ಯಕ್ಷ ಹಾಗೂ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ. ಸೋಮಶೇಖರ್ (9448994740) ಕಾರ್ಯದರ್ಶಿ.

ಕವಿಗೋಷ್ಠಿ ಉಪ ಸಮಿತಿ
ಪ್ರಾದೇಶಿಕ ಆಯುಕ್ತರ ಕಚೇರಿಯ ಆಡಳಿತ ಮತ್ತು ಅಭಿವೃದ್ಧಿಯ ಹೆಚ್ಚುವರಿ ಆಯುಕ್ತ ಸೋಮಶೇಖರ್ (9449529434) ಉಪ ವಿಶೇಷಾಧಿಕಾರಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ನೀಲಗಿರಿ ತಳವಾರ್ (9480392655) ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್ (8277058489) ಕಾರ್ಯದರ್ಶಿ.

ಯೋಗ ದಸರಾ ಉಪಸಮಿತಿ
ಮೈಸೂರು ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಕಲಾಕೃಷ್ಣಸ್ವಾಮಿ (9480805002) ಉಪ ವಿಶೇಷಾಧಿಕಾರಿ, ನೆಹರೂ ಯುವಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ನಟರಾಜ್ (9480392655) ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಸೀತಾಲಕ್ಷ್ಮಿ (9448566705) ಕಾರ್ಯದರ್ಶಿ.[ದಸರಾ ವಿಶೇಷ: ಮಾವುತರೆಂಬ ಗಜಪಡೆಯ ರಿಂಗ್ ಮಾಸ್ಟರ್!]

ಯುವ ದಸರಾ ಉಪಸಮಿತಿ
ಮೈಸೂರು ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ (9480805001) ಉಪ ವಿಶೇಷಾಧಿಕಾರಿ, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ರಾಜೇಶ್ (9986502491) ಕಾರ್ಯಾಧ್ಯಕ್ಷ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್ ಕಾರ್ಯದರ್ಶಿ.

ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ
ಮೈಸೂರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ (9480873000) ಉಪ ವಿಶೇಷಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ. ರಾಧಾ (9902270154) ಕಾರ್ಯಾಧ್ಯಕ್ಷೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಎಂ.ಆರ್.ಶಿವರಾಮು (8884078965) ಕಾರ್ಯದರ್ಶಿ.

ಆಹಾರ ಮೇಳ ಉಪ ಸಮಿತಿ
ಮೈಸೂರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ (9480873000) ಉಪ ವಿಶೇಷಾಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಾಮೇಶ್ವರಪ್ಪ (9611165367) ಕಾರ್ಯಾಧ್ಯಕ್ಷ ಹಾಗೂ ಮೈಸೂರು ನಗರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಯತಿರಾಜ್ ಸಂಪತ್ ಕುಮಾರನ್ (9342003824) ಕಾರ್ಯದರ್ಶಿ.

ಸ್ವಚ್ಫತೆ ಮತ್ತು ವ್ಯವಸ್ಥೆ ಉಪ ಸಮಿತಿ
ಮೈಸೂರು ಮಹಾನಗರಪಾಲಿಕೆ ಆಯುಕ್ತರು ಉಪ ವಿಶೇಷಾಧಿಕಾರಿ, ಮೈಸೂರು ಮಹಾನಗರಪಾಲಿಕೆ ಆಡಳಿತ ಉಪ ಆಯುಕ್ತ ರಾಜು (9449841199) ಕಾರ್ಯಾಧ್ಯಕ್ಷ ಹಾಗೂ ಮೈಸೂರು ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ರಾಮಚಂದ್ರ (9449841070) ಕಾರ್ಯದರ್ಶಿ.[ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗಳ ಬಗ್ಗೆ ಗೊತ್ತಾ?]

ಚಲನಚಿತ್ರ ಉಪ ಸಮಿತಿ
ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಸೋಮಶೇಖರ್ (9449529434) ಉಪ ವಿಶೇಷಾಧಿಕಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಹಾಯಕ ನಿರ್ದೇಶಕ ರಾಜು ಆರ್. (9480841229) ಕಾರ್ಯಾಧ್ಯಕ್ಷ ಹಾಗೂ ಮೈಸೂರು ಡಿ.ಯು.ಡಿ.ಸಿ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ನಾಗರಾಜು (9448087742) ಕಾರ್ಯದರ್ಶಿ.

ದಸರಾ ದರ್ಶನ ಉಪ ಸಮಿತಿ
ಮೈಸೂರು ನಗರ ಕೆಎಸ್ಆರ್ ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಡಾ.ಕೆ.ರಾಮಮೂರ್ತಿ (7760990750) ಉಪ ವಿಶೇಷಾಧಿಕಾರಿ, ಜಿ.ಪಂ. ಉಪ ಕಾರ್ಯದರ್ಶಿ ಶಿವರಾಮೇಗೌಡ (9480873002) ಕಾರ್ಯಾಧ್ಯಕ್ಷ ಹಾಗೂ ಮೈಸೂರು ಗ್ರಾಮಾಂತರ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಮಹೇಶ್ (7760990800) ಕಾರ್ಯದರ್ಶಿ.

ಕುಸ್ತಿ ಉಪಸಮಿತಿ
ಮೈಸೂರು ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ (9480805001) ಉಪ ವಿಶೇಷಾಧಿಕಾರಿ, ನಂಜನಗೂಡು ಸಹಾಯಕ ಪೊಲೀಸ್ ಅಧೀಕ್ಷಕಿ ದಿವ್ಯಾ ಸಾರಾ ಥಾಮಸ್ (9480805021) ಕಾರ್ಯಾಧ್ಯಕ್ಷೆ ಹಾಗೂ ಕಾವೇರಿ ನೀರಾವರಿ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕುಮಾರ್ (7829999267) ಕಾರ್ಯದರ್ಶಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru dasara committee formed. Officers appointed for different committees for sucessful dasara celebration.
Please Wait while comments are loading...