ಮೈಸೂರು ದಸರಾ: ಗಜಪಯಣ ಆಗಸ್ಟ್ 14ರಿಂದ ಆರಂಭ

Posted By:
Subscribe to Oneindia Kannada

ಮೈಸೂರು , ಜುಲೈ 31:ಮೈಸೂರು , ಜುಲೈ 31: ಈ ಬಾರಿಯ ನಾಡಹಬ್ಬಕ್ಕಾಗಿ ನಡೆಯಲಿರುವ ಗಜಪಯಣದ ದಿನಾಂಕವು ಅಧಿಕೃತವಾಗಿ ತಾನೇ ಘೋಷಣೆ ಮಾಡಿದ ನಂತರ, ಕೇವಲ ಎರಡೇ ಗಂಟೆಗಳಲ್ಲಿ ಜಿಲ್ಲಾಡಳಿತ ಹೊಸ ದಿನಾಂಕ ಪ್ರಕಟಿಸಿದೆ.

ಮೊದಲಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ಇದೇ ಆಗಸ್ಟ್ 10 ರಂದು ಗಜಪಯಣ ಆರಂಭವಾಗಲಿದೆ ಎಂದು ಮಾಹಿತಿ ನೀಡಲಾಯಿತು. ಆದರೆ, ಗಂಟೆಗಳಲ್ಲೇ ಹೊಸ ದಿನಾಂಕ ಪ್ರಕಟಿಸಿದ ಜಿಲ್ಲಾಡಳಿತ ಆಗಸ್ಟ್ 14ರಂದು ಗಜಪಯಣ ನಡೆಸುವುದಾಗಿ ಅದು ತಿಳಿಸಿತು.

Mysuru Dasara Celebration: Gajapayana begins on August 14th
Mysuru is all set to welcome Dasara | 4 more Elephants added for Jamboosavari

ಆಗಸ್ಟ್ 14 ರಂದು ಬೆಳಿಗ್ಗೆ 11 ಗಂಟೆಗೆ ಗಜಪಯಣದ ಸಮಯ ನಿಗದಿಯಾಗಿದ್ದು, ಆಗಸ್ಟ್ 17 ರಂದು ಮಧ್ಯಾಹ್ನ 12: 05ಕ್ಕೆ ಗಜಪಡೆಯನ್ನು ಅರಮನೆಯಲ್ಲಿ ಸ್ವಾಗತಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ತಿಳಿಸಿದ್ದಾರೆ. ಹುಣಸೂರಿನ ವೀರನ ಹೊಸಹಳ್ಳಿಯಲ್ಲಿ ಗಜಪಯಣ ಪ್ರಾರಂಭವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gajpayana will begin on August 14th, with the world famous being prepared for Mysuru Dasara Celebrations, announces Mysuru District administration
Please Wait while comments are loading...