ದಸರಾ ಪುಸ್ತಕ ಮಾರಾಟ ಮೇಳ, ಮಳಿಗೆ ಬುಕ್ ಮಾಡ್ಕೊಳ್ಳಿ

Posted By:
Subscribe to Oneindia Kannada

ಮೈಸೂರು, ಸೆ. 12: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 21 ರಿಂದ 29 ರವರೆಗೆ "ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2017" ನ್ನು ಮೈಸೂರಿನಲ್ಲಿ ಏರ್ಪಡಿಸಲಾಗುವುದು.

ಮೈಸೂರು ಯುವ ಸಂಭ್ರಮಕ್ಕೆ ನಿರೂಪಕರು ಬೇಕಾಗಿದ್ದಾರೆ!

ಈ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು/ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ 2,000/- ಭದ್ರತಾ ಠೇವಣಿ ಡಿ.ಡಿ. ಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು - ಅವರ ಹೆಸರಿನಲ್ಲಿ ಡಿ.ಡಿ. ಯನ್ನು ಸಲ್ಲಿಸಲು ಸೂಚಿಸಲಾಗಿದೆ.

Mysuru Dasara 2017 : Kannada Book exhibition and Sale- Book your stall

ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರಿನ ಕಚೇರಿ ಅಥವಾ ಆಯಾ ಜಿಲ್ಲೆಯಲ್ಲಿರುವ ಸಹಾಯಕ ನಿದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗಳಲ್ಲಿ ಅಥವಾ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಈ ಬಾರಿಯ ದಸರೆಯಲ್ಲಿ ಭಾಗವಹಿಸಲಿದೆ 42 ಸ್ತಬ್ದ ಚಿತ್ರಗಳು

ಭರ್ತಿಮಾಡಿದ ಅರ್ಜಿಯನ್ನು ಡಿ.ಡಿ. ಯೊಂದಿಗೆ ಸೆಪ್ಟೆಂಬರ್ 18 ರಂದು ಸಂಜೆ 5.00 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು - ಅವರ ಹೆಸರಿಗೆ ಅಂಚೆಯ ಮೂಲಕ ಹಾಗೂ ಇ-ಮೇಲ್ ಮೂಲಕ ಸಲ್ಲಿಸಲು ಕೋರಿದೆ.

ದಸರೆಯ ಕವಿಗೋಷ್ಠಿಯಲ್ಲಿ ಕಿವುಡರಿಗೂ, ಮಾತು ಬಾರದವರಿಗೂ ಅವಕಾಶ

ಸುಮಾರು 50 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು - 560 002 ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Dasara 2017 : Kannada Book exhibition and Sale will be organised between September 21 to 29, 2017. Kannada publisher can book their stall by filling the application available at Kannada Bhavana, JC road, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ