ಎಸಿಬಿ ರಚನೆಗೆ ಕಾಂಗ್ರೆಸ್‌ನಲ್ಲೇ ಸಹಮತವಿಲ್ಲವೇ?

Subscribe to Oneindia Kannada

ಮೈಸೂರು, ಮಾರ್ಚ್, 19: ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಮಾಡಲು ಹೊರಟಿರುವುದಕ್ಕೆ ಸ್ವತಃ ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಸಹಮತವಿಲ್ಲ ಎಂಬುದು ಸಂಸತ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತುಗಳಿಂದ ವ್ಯಕ್ತವಾಗಿದೆ.

ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಖರ್ಗೆ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದಾಗ, 'ಕುರಿತು ಹೆಚ್ಚಿಗೆ ಮಾತನಾಡಲು ಇಷ್ಟಪಡಲಿಲ್ಲ. ಎಸಿಬಿ ರಚನೆ ಬಳಿಕ ಪ್ರತಿಕ್ರಿಯಿಸುತ್ತೇನೆ' ಎಂದು ಹೇಳದರು.[ಎಸಿಬಿ ರಚನೆ : ಕೃಷ್ಣ ಕೊಟ್ಟ ಸಲಹೆ ಕೇಳ್ತಾರಾ ಸಿದ್ದು?]

congress

ಭ್ರಷ್ಟಾಚಾರ ನಿಗ್ರಹ ದಳ ರಚನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹೈಕಮಾಂಡ್ ವರದಿ ಕೇಳಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಎಸಿಬಿ ರಚನೆಯ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಕುರಿತು ವಿಧಾನ ಸಭೆಯಲ್ಲಿ ಮೊದಲು ಚರ್ಚೆಯಾಗಬೇಕು ಆ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು.[ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿದ ಸರ್ಕಾರ]

ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ: ಕಾಂಗ್ರೆಸ್ ಆಡಳಿತದ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರದಿಂದ ಆಗುತ್ತಿದೆ. ಇದೇ ಕಾರಣಕ್ಕೆ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಬೆಂಬಲಿತ ಸರ್ಕಾರ ಅಧಿಕಾರಕ್ಕೆ ಬಂದಿದೆ. ಉತ್ತರಖಂಡದಲ್ಲೂ ಬಿಜೆಪಿ ತನ್ನ ಚಾಳಿ ಮುಂದುವರೆಸಿದ್ದು ಅಲ್ಲಿ ಕಾಂಗ್ರೆಸ್ ಬಹುಮತವಿದ್ದರೂ ಜನಪ್ರತಿನಿಧಿಗಳಲ್ಲಿ ಒಡಕು ಮೂಡಿಸಿ ಅಧಿಕಾರ ಹಿಡಿಯುವ ಹುನ್ನಾರ ನಡೆಸುತ್ತಿದೆ ಎಂದು ಟೀಕಿಸಿದರು.[ಬತ್ತಿದ ಶಿಂಷಾ ನದಿ ಒಡಲು, ಕುಡಿವ ನೀರಿಗೆ ಹಾಹಾಕಾರ]

ಪಂಚರಾಜ್ಯಗಳ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಬುದ್ಧಿ ಕಲಿಸಲಿದ್ದಾರೆ. ಬಿಜೆಪಿಹೆ ಏರಿರುವ ಅಧಿಕಾರದ ಮದವನ್ನು ಪಂಚರಾಜ್ಯಳ ಚುನಾವಣೆಯಲ್ಲಿ ಇಳಿಸುತ್ತೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru: Senior Congress MP and Leader of Opposition in Lok Sabha Mallikarjun Kharge took a charge on Narendra Modio Government. He claimed that BJP trying to catch power in wrong way.
Please Wait while comments are loading...