ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಕು ತಯಾರಿಸಲು ಆರ್ ಬಿಐ ನೀಡಿದ ಹಣವೆಷ್ಟು?

By Ananthanag
|
Google Oneindia Kannada News

ಮೈಸೂರು, ನವೆಂಬರ್ 17: ಇನ್ನು ಆರು ದಿನಗಳಲ್ಲಿ 2.96 ಲಕ್ಷ ಇಂಕಿನ ಬಾಟಲಿಗಳು ದೇಶಾದ್ಯಂತ 28 ಬ್ಯಾಂಕುಗಳ ಮೂಲಕ ರವಾನೆಯಾಗಲಿದೆ. ಇದು ಎಲ್ಲ ಬ್ಯಾಂಕುಗಳಲ್ಲಿ ಬಳಕೆಯಾಗಲಿದೆ.

ಸರ್ಕಾರವು ನೀಡಿದ ನಿರ್ದೇಶನದ ಪ್ರಕಾರ ಇದೇ ಮಂಗಳವಾರ ಎಲ್ಲ ಬ್ಯಾಂಕ್ ಗಳಲ್ಲಿ ಹಣ ಬದಲಿಸುವವರು ಕೈಗೆ ಇಂಕನ್ನು ಹಾಕಲಾಗುತ್ತಿದ್ದು, ನೋಟು ಬದಲಾಯಿಸುವಾಗ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ನೋಡಿಕೊಳ್ಳಲಾಗಿದೆ.[ಶಾಹಿ ತಯಾರಿಸಲು ಮೈಸೂರು ಪೈಂಟ್ಸ್ ಗೆ ಸೂಚನೆ]

Mysuru company is authorised manufacturer ink since 1962

ದ ಮೈಸೂರ್ ಪ್ರಿಂಟ್ ಅಂಡ್ ವರ್ನಿಶ್ ಲಿಮಿಟೆಡ್( ಎಂವೈಪಿವಿಎಲ್) ಎಂಬ ಒಂದೇ ಒಂದು ಕಂಪನಿಯು ಈ ಇಂಕನ್ನು ತಯಾರಿಸಲು ಸರ್ಕಾರದಿಂದ ಅನುಮತಿಯನ್ನು ಪಡೆದಿದ್ದು ಬುಧವಾರದ ವರೆಗೆ 30,000 ಬಾಟೆಲ್ ಗಳನ್ನು ಆರ್ ಬಿಐ ಮುಖಾಂತರ ಬ್ಯಾಂಕುಗಳಿಗೆ ರವಾನಿಸಲಾಗಿದೆ.[ಹಣ ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಶಾಹಿ]

ಮಾಹಿತಿಯ ಪ್ರಕಾರ ಮೈಸೂರಿನ ಈ ಕಂಪನಿಯೇ 1962ರಿಂದ ಇಂಕನ್ನು ಒದಗಿಸುತ್ತಾ ಬಂದಿದೆ. ಇಂಕಿನ 5 ಸಿಸಿ ಬಾಟಲ್ ನ ಬೆಲೆ ರು 116 ಆಗಿದೆ. ಆರ್ ಬಿಐ ಇಂಕನ್ನು ಕೊಳ್ಳಲು ಕೊಟ್ಟಿರುವ ಮೌಲ್ಯ 3.5 ಕೋಟಿ ರುಗಳು. ಒಂದು ಬಾಟಲಿಯಿಂದ ಸುಮಾರು ಐನೂರು ಬೆರಳುಗಳಿಗೆ ಇಂಕನ್ನು ಹಾಕಬಹುದಾಗಿದೆ.

ಕಂಪನಿಯ ಮುಖ್ಯಸ್ಥರಾದ ಎಚ್.ಎ. ವೆಂಕಟೇಶ್ ಹೇಳುವ ಪ್ರಕಾರ ಆರ್ಡರ್ ಗಳನ್ನು ಒಪ್ಪಿಕೊಂಡು ಇಂಕು ಒದಗಿಸಲು ರಾತ್ರಿಹಗಲು ಕಷ್ಟಪಡಬೇಕಿದೆ. ಹಾಗೆಯೇ ಚುನಾವಣೆ ಸಂದರ್ಭದಲ್ಲಿ ಒಟ್ಟು ಐದು ಲಕ್ಷ ಬಾಟಲ್ ಗಳು ಐದು ರಾಜ್ಯಕ್ಕೆ ರವಾನಿಸಲಾಗುತ್ತಿದೆ.

English summary
The Mysore Paints and Varnish Ltd (MYPVL), which is the only company authorised to manufacture the substance, shipped 30,000 bottles of ink on Wednesday. The inks will be distributed to various banks through RBI branches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X