ಜಾತ್ರೆಗಳ ಸಂಭ್ರಮದಲ್ಲಿ ಮೈಸೂರು, ಅಬ್ಬಬ್ಬಾ ಜನವೋ ಜನ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,11: ಇತಿಹಾಸ ಪ್ರಸಿದ್ದ ಪಿರಿಯಾಪಟ್ಟಣದ ಕುಲದೇವತೆ ಆದಿಶಕ್ತಿ ಮಸಣೀಕಮ್ಮನವರ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು, ಶುಕ್ರವಾರ ಕೈತಟ್ಟೆ ಉತ್ಸವ ನಡೆದರೆ, ಶನಿವಾರ ತೆಪ್ಪೋತ್ಸವ ನಡೆಯಲಿದೆ.

ಈ ಬಾರಿ ನಡೆಯುತ್ತಿರುವ ಮಸಣೀಕಮ್ಮನವರ ಜಾತ್ರಾ ಮಹೋತ್ಸವದಲ್ಲಿ ಹಿಂದೆದೂ ಕಾಣದಂತಾಹ ಭಾರಿ ಜನಸ್ತೋಮ ನೆರೆದಿತ್ತು. ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತಾಧಿಗಳು ಉರಿ ಬಿಸಿಲಿನ ನಡುವೆಯೂ ಸೇರಿ ಈ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.[ಜನಪದ ಸೊಗಡಿನಿಂದ ಮಿಂಚಿದ ಸುತ್ತೂರು ರಥೋತ್ಸವ]

Mysuru comes alive with some Jatre's

ಮಸಣೀಕಮ್ಮ ರಥೋತ್ಸವ ಹಾಗೂ ಜಾತ್ರಾಮಹೋತ್ಸವ ಇದ್ದುದ್ದರಿಂದ ರಾಜ್ಯಾದಂತ ಲಕ್ಷಾಂತರ ಭಕ್ತಾಧಿಗಳು ಪಟ್ಟಣಕ್ಕೆ ಆಗಮಿಸಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಪೊಲೀಸ್ ವೃತ್ತ ನಿರೀಕ್ಷಕ ಪ್ರಸನ್ನಕುಮಾರ್, ಎಸೈ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿಗಳು ವಾಹನ ಸಂಚಾರ ಮತ್ತು ಭಕ್ತಾಧಿಗಳನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಡಬೇಕಾಯಿತು.

ಸಿಂಗಾನಲ್ಲೂರಲ್ಲಿ ಜನಮನ ಸೆಳೆಯುವ ದನಜಾತ್ರೆ

ಮೈಸೂರು, ಮಾರ್ಚ್,11: ಮನರಂಜನೆಗೆ ಅವಕಾಶವೇ ಇಲ್ಲದ ಕಾಲದಲ್ಲಿ ರೈತರು ದನಗಳ ಜಾತ್ರೆ ಮಾಡಿ ತಮ್ಮ ಜಾನುವಾರುಗಳ ಪ್ರದರ್ಶನ ಏರ್ಪಡಿಸಿ ತಮಗೆ ಅವಶ್ಯವಿರುವ ಜಾನುವಾರುಗಳನ್ನು ಇದೇ ಜಾತ್ರೆಯಲ್ಲಿ ಖರೀದಿಸುತ್ತಾ ಸಂತೋಷ ಪಡುತ್ತಾರೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಜನತೆ.[ಚಾಮರಾಜನಗರದ ಕಾಡಂಚಿನಲ್ಲೊಂದು ರೊಟ್ಟಿ ಹಬ್ಬ!]

Mysuru comes alive with some Jatre's

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ಸಿಂಗನಲ್ಲೂರು ಗ್ರಾಮದಲ್ಲಿ ನಾಲ್ಕು ದಿನಗಳ ದನ ಜಾತ್ರೆ ಆರಂಭವಾಗಿದ್ದು, ಈ ಜಾತ್ರೆಯನ್ನು ಶಿವರಾತ್ರಿ ಹಬ್ಬದ ನಂತರ ಏರ್ಪಡಿಸಲಾಗುತ್ತದೆ.[ಹುಬ್ಬಳ್ಳಿ ಜನರ ಭಕ್ತಿಭಾವದ ಮಜ್ಜನದಲ್ಲಿ ಮಿಂದೆದ್ದ ಶಿವ]

ಇದೀಗ ಸಿಂಗನಲ್ಲೂರು ಜಾತ್ರೆಗೂ ಕಾಮಗೆರೆ ಮಂಗಲ ಕಣ್ಣೂರು ಗುಂಡಾಪುರ ಬೂದುಬಾಳು ದೊಡ್ಡಿ ಗುಂಡಾಲ್ ಜಲಾಶಯ ದೊಡ್ಡಿಂದುವಾಡಿ ಇಕ್ಕಡಹಳ್ಳಿ ಮೊದಲಾದ ಕಡೆಗಳಿಂದ ರೈತರು ದನಗಳನ್ನು ತಂದಿದ್ದು, ಇವು ಜಾತ್ರೆಗೆ ಆಗಮಿಸಿದ ರೈತರ ಗಮನ ಸೆಳೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru comes alive with some Jatre's from somedays. Cow jatre starts at Kollegal, Chamarajnagar, Mysuru. Masanikamma Jatre in Piriyapatna, Mysuru
Please Wait while comments are loading...