ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೀಡಾಪಟುಗಳಿಗೆ ಅಭಯ ನೀಡಿದ ಸಿಎಂ ಸಿದ್ದರಾಮಯ್ಯ

|
Google Oneindia Kannada News

ಮೈಸೂರು, ಮೇ. 10: ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರೂಪಿಸುವ ಹೊಸ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಮೈಸೂರಿನ ಸೆನೆಟ್ ಭವನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಏಕಲವ್ಯ, ಜೀವಮಾನ ಸಾಧನೆ ಮತ್ತು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ ಕ್ರೀಡಾ ಶ್ರೇಷ್ಠತೆ ಸಹಾಯಧನ ನೀಡಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.[ಘರ್ಜನೆ ನಿಲ್ಲಿಸಿದ ಮೈಸೂರು ಮೃಗಾಲಯದ ಸಿಂಹ 'ಶಂಕರ್']

karnataka

ಸಾಮರ್ಥ್ಯವಿರುವ ಹಾಗೂ ಈಗಾಗಲೇ ಉತ್ತಮ ಸಾಧನೆ ದಾಖಲಿಸಿ, ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಅವರ ಕ್ರೀಡೆಗೆ ಅನುಸಾರವಾಗಿ ಸಹಾಯಧನ ನೀಡಲಾಗುತ್ತಿದೆ. ನಮ್ಮ ದೇಶ, ರಾಜ್ಯದ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳಿಸಿದಾಗ ಆಗುವ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದು ಪ್ರತಿಯೊಬ್ಬರಿಗೂ ಹೆಮ್ಮೆ ತರುವ ವಿಷಯ ಎಂದು ಹೇಳಿದರು.

ಕ್ರೀಡೆಗಳು ಸ್ಪರ್ಧಾತ್ಮಕ ಮನೋಭಾವ , ಆರೋಗ್ಯ, ಶಿಸ್ತು, ನಾಯಕತ್ವ ಗುಣ, ದೇಶಪ್ರೇಮದಂತಹ ಗುಣಗಳನ್ನು ಬೆಳೆಸುತ್ತದೆ. ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.[ಬಕ್ಕ ಬರಿದಾದ ಕೆಆರ್‌ಎಸ್, ಕೊಡಗಿನಲ್ಲಿ ಮಳೆ ಸಿಂಚನ]

karnataka

ಕ್ರೀಡಾಪಟು ಅರವಿಂದ್ ಎಂ.,ಆಕಾಶ್ ಆರಾದ್ಯ, ಡಾ. ಖ್ಯಾತಿ ಎಸ್. ವಖಾರಿಯಾ , ಮಲಪ್ರಭಾ ವೈ. ಜಾದವ್, ಸುನ್ನುವಂಡ ಕುಶಾಲಪ್ಪ ಉತ್ತಪ್ಪ, ಟ್ವಿಶಾ ಕೆ., ಪುರುಷೋತ್ತಮ ಕೆ, ವಿನೀತ್ ಮ್ಯಾನ್ಯುಯಲ್, ಸುಷ್ಮಿತಾ ಪವಾರ್ ಓ, ಶರ್ಮದಾ ಬಾಲು, ಅರ್ಚನಾ ಗಿರೀಶ್ ಕಾಮತ್, ನಿಶಾ ಜೋಸೆಫ್, ಲೋಕೇಶ್ ಎನ್.,ಲಕ್ಷ್ಮಣ ಸಿ. ಕುರಣಿ,ನಿರಂಜನ್ ಎಂ. ಅವರುಗಳಿಗೆ ಏಕಲವ್ಯ ಪ್ರಶಸ್ತಿ ಪುರರಸ್ಕಾರ ಮಾಡಲಾಯಿತು.

karnataka

ಕರ್ನಾಟಕ ರಾಜ್ಯದ ದೇಸೀ ಮತ್ತು ಸ್ಥಳೀಯ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2014 ನೇ ಸಾಲಿನ 'ಕರ್ನಾಟಕ ಕ್ರೀಡಾ ರತ್ನ' ಪ್ರಶಸ್ತಿಯನ್ನು ಕಾವ್ಯ ಎಂ.ಆರ್.,ವಿನೋದ್ ರಾಠೋಡ, ದುಂಡಪ್ಪ ದಾಸನ್ನವರ, ರೂಪಶ್ರೀ ಬಿ.ಕೆ., ಕಾರ್ತಿಕ್ ಜಿ ಕಾಟಿ, ಯೋಗೇಶ್, ಅನಿಲ್ ಕುಮಾರ್ ಹೆಚ್. ಶೆಟ್ಟರ್, ಜಯಕರ ಯಾನೆ ನಕ್ರೆ ಜಯಕರ ಮಡಿವಾಳ, ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ, ಇಬ್ರಾಹಿಂ ಸಾಬ್ ಮ. ಅರಬ್ ಅವರಿಗೆ ನೀಡಲಾಯಿತು.

ಸದಚಿವರಾದ ವಿ.ಶ್ರೀನಿವಾಸಪ್ರಸಾದ್, ಕೆ.ಅಭಯಚಂದ್ರ, ಶಾಸಕ ಸೋಮಶೇಖರ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ.ಸೋಮಶೇಖರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ಹಾಜರಿದ್ದರು.

English summary
Chief minister Siddaramaiah presented Ekalavya lifetime achievement award, Karnataka Kreeda Rathna award and scholarship to outstanding sportspersons at the Senate Bhavan in the University of Mysuru on May 10. Among 15 Ekalavya awardees for the year 2014, four are from Mysuru. The Ekalavya awards are given to outstanding sports who have come out with consistent performance for five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X