ಮೈಸೂರು: ಆದಿವಾಸಿಗಳಿಗೆ ಆಹಾರದ ಕಿಟ್ ವಿತರಿಸಿದ ಸಿದ್ದರಾಮಯ್ಯ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 2: ಮೇಲ್ವರ್ಗ, ಕೆಳವರ್ಗ ಎಂದು ತಾರತಮ್ಯ ಮಾಡದೆ ಎಲ್ಲರನ್ನೂ ಏಕ ರೀತಿಯಲ್ಲಿ ಕಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ. ಎಲ್ಲರನ್ನೂ ಸರಿ ಸಮಾನವಾಗಿ ಕೊಂಡೊಯ್ದಾಗ ಸಮ ಸಮಾಜ ನಿರ್ಮಾಣವಾಗಲಿದ್ದು, ಸರ್ಕಾರ ಆ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.[ದೇವರು ಜಾತಿ ಮಾಡಿಲ್ಲ. ಸ್ವಾರ್ಥಿಗಳು ಮಾಡಿದ್ದು: ಸಿದ್ದರಾಮಯ್ಯ]

ಬುಧವಾರ ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಆದಿವಾಸಿಗಳಿಗೆ ಸವಲತ್ತು ವಿತರಣಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಮಾವೇಶದಲ್ಲಿ ಆದಿವಾಸಿಗಳಿಗೆ ಸಾಂಕೇತಿಕವಾಗಿ ಹಲವು ಸವಲತ್ತುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.[ಮೈಸೂರು ಬಿಇಓ ಕಚೇರಿಗೆ ಬಂತು ಹುಸಿಬಾಂಬ್ ಬೆದರಿಕೆ ಪತ್ರ]

ಶಿಕ್ಷಣದಿಂದಲೇ ಅಭಿವೃದ್ಧಿ

ಶಿಕ್ಷಣದಿಂದಲೇ ಅಭಿವೃದ್ಧಿ

ಬಳಿಕ ಮಾತನಾಡಿದ ಅವರು, "ಆದಿವಾಸಿಗಳು ಕಾಡನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿದ್ದರೂ, ಆದಿವಾಸಿಗಳು ಇನ್ನೂ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದಿವಾಸಿ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದಿರುವವರ ಸಂಖ್ಯೆ ತೀರಾ ಕಡಿಮೆಯಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ," ಎಂದು ಅವರು ಹೇಳಿದರು.

ಹಸಿವು ಮುಕ್ತ

ಹಸಿವು ಮುಕ್ತ

ಆದಿವಾಸಿಗಳು ಮಳೆಗಾಲದಲ್ಲಿ ಹೊರಗಡೆ ಹೋಗಿ ಕೆಲಸ ಮಾಡಲು ಸಾಧ್ಯವಾಗದಿರುವುದರಿಂದ ಅವರಿಗೆ ಆಹಾರದ ಕೊರತೆಯಾಗಬಾರದು. ಹಾಗೂ ಪೌಷ್ಠಿಕತೆ ಕಾಡಬಾರದು ಎಂಬ ಉದ್ದೇಶದಿಂದ ಮೊಟ್ಟೆ, ಅಕ್ಕಿ, ರಾಗಿ ಸೇರಿದಂತೆ ಪೌಷ್ಠಿಕ ಆಹಾರಗಳನ್ನು ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 41 ಸಾವಿರ ಮಂದಿ ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದು ಮೈಸೂರಿನಲ್ಲಿ 12 ಸಾವಿರ ಮಂದಿ ಪೌಷ್ಠಿಕ ಆಹಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ಅನ್ನಭಾಗ್ಯ ವಿಸ್ತರಣೆ

ಅನ್ನಭಾಗ್ಯ ವಿಸ್ತರಣೆ

ಈಗಾಗಲೇ ರಾಜ್ಯವನ್ನು ಹಸಿವು ಮುಕ್ತವನ್ನಾಗಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಇದೀಗ ಬಿಪಿಎಲ್ ರೇಷನ್ ಕಾರ್ಡ್‍ದಾರರಿಗೆ ನೀಡುತ್ತಿರುವ ಪಡಿತರವನ್ನು ಏಪ್ರಿಲ್ ತಿಂಗಳಿನಿಂದ ಏರಿಕೆ ಮಾಡಲಾಗುವುದು ಎಂದು ಸಿದ್ಧರಾಮಯ್ಯನವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಆದಿವಾಸಿಗಳಿಂದ ಸ್ವಾಗತ

ಆದಿವಾಸಿಗಳಿಂದ ಸ್ವಾಗತ

ಕಾರ್ಯಕ್ರಮ ಅರಂಭಕ್ಕೂ ಮೊದಲು ಆದಿವಾಸಿಗಳ ವಿವಿಧ ಜಾನಪದ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವು. ನಾಡಿನ ದೊರೆ ಮುಖ್ಯಮಂತ್ರಿಯನ್ನು ತಮ್ಮ ನೃತ್ಯದ ಮೂಲಕ ಆದಿವಾಸಿಗಳು ಸ್ವಾಗತಿಸಿದ್ದು ಜನಮನ ಸೂರೆಗೊಂಡಿತು.

ಗಣ್ಯರ ಉಪಸ್ಥಿತಿ

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಸಚಿವರುಗಳಾದ ಹೆಚ್.ಸಿ.ಮಹದೇವಪ್ಪ, ಆಂಜನೇಯ, ಹೆಚ್.ಎಂ.ರೇವಣ್ಣ, ರಮಾನಾಥ್ ರೈ, ಶಾಸಕ ಎಂ.ಕೆ.ಸೋಮಶೇಖರ್, ಮೈಲಾಕ್ ಅಧ್ಯಕ್ಷ ವೆಂಕಟೇಶ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister Siddaramaiah distributed nutritious food kits to beneficiaries in a conference organized by Department of Social Welfare, Welfare of SC & ST in the premises of Mysore exhibition Center.
Please Wait while comments are loading...