ಹೆಮ್ಮೆ ತಂದ ಮೈಸೂರಿಗೆ ಕ್ಲೀನ್‌ಸಿಟಿ ಪ್ರಶಸ್ತಿ ಪ್ರದಾನ

Written By:
Subscribe to Oneindia Kannada

ಮೈಸೂರು, ಜುಲೈ, 12: ಸ್ವಚ್ಛ ಮೈಸೂರಿಗೆ ಪ್ರಶಸ್ತಿ ಗರಿ ಸಂದಿದೆ. ಘನತ್ಯಾಜ್ಯ ನಿರ್ವಹಣೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕೆ ವಿಜ್ಞಾನ ಹಾಗೂ ಪರಿಸರ ಕೇಂದ್ರವು ಮೈಸೂರು ನಗರವನ್ನು ಸನ್ಮಾನಿಸಿದೆ.

ವಿಜ್ಞಾನ ಹಾಗೂ ಪರಿಸರ ಕೇಂದ್ರವು ಹೊಸತಾಗಿ ಪ್ರಕಟಿಸಿದ ರೇಟಿಂಗ್‌ನಲ್ಲಿ ಮೊದಲ ಮೂರು ಸ್ಥಾನ ಪಡೆದಿರುವ ಕರ್ನಾಟಕದ ಮೈಸೂರು, ಕೇರಳದ ಅಲಪುಜ್ಜಾ ಹಾಗೂ ಗೋವಾದ ಪಣಜಿ ನಗರಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸೋಮವಾರ 'ಕ್ಲೀನ್ ಸಿಟಿ' ಪ್ರಶಸ್ತಿ ಪ್ರದಾನ ಮಾಡಿದರು. ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹೊಸ ವರದಿಯನ್ನು ಇದೇ ವೇಳೆ ಸಚಿವ ನಾಯ್ಡು ಬಿಡುಗಡೆಗೊಳಿಸಿದರು.[ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1]

mysuru


ವರದಿ ಕುರಿತು ಮಾತನಾಡಿದ ಸಿಎಸ್‌ಎ ನಿರ್ದೇಶಕಿ ಸುನೀತಾ ನರೇನ್, ದೇಶದಲ್ಲಿ ಯಾವ ನಗರವು ಸ್ವಚ್ಛವಾಗಿದೆ ಎಂದು ಅರಿಯಲು ಘನತ್ಯಾಜ್ಯ ನಿರ್ವಹಣೆ ವಿಷಯವನ್ನು ಪ್ರಮುಖವಾಗಿ ಪರಿಗಣಿಸಿದ್ದೇವೆ, ಭವಿಷ್ಯದ ನೀತಿಗಳಿಗಾಗಿ ಇದೆಲ್ಲವೂ ಉತ್ತರ ನೀಡಲಿದೆ ಎಂದು ಹೇಳಿದರು.[ಅಂದದೂರು ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಿದ್ದು ಹೇಗೆ?]

ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು ಅವರು 73 ಸ್ವಚ್ಛ ನಗರಗಳ ಪಟ್ಟಿಯನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದ್ದರು. ಶೌಚಾಲಯ ನಿರ್ಮಾಣ, ಕಸ ವಿಲೇವಾರಿ, ಕುಡಿಯುವ ನೀರಿನ ಲಭ್ಯತೆ, ಅಂತರ್ಜಲದ ಲಭ್ಯತೆ ಮುಂತಾದ ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Small city of Kerala , Alappuzha along with Goa's Panaji and Karnataka's Mysuru on Monday emerged as the first three cleanest cities in India in a different survey - conducted by the Centre for Science and Environment (CSE).
Please Wait while comments are loading...