ಬ್ಲೂ ವೇಲ್ ಹುಡುಕಾಟದಲ್ಲಿ ಮೈಸೂರಿಗೆ ದೇಶದಲ್ಲಿ 9ನೇ ಸ್ಥಾನ!

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 9: ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಪಾಯಕಾರಿ ಬ್ಲೂ ವೇಲ್ ಆಟಕ್ಕಾಗಿ ಹುಡುಕಾಟ ನಡೆಸಿದವರಲ್ಲಿ ಮೈಸೂರು ನಗರ ದೇಶದಲ್ಲೇ 9 ನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ .

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

ಕಳೆದ ಮೂರು ತಿಂಗಳ ಅವಧಿಯಲ್ಲಿ ದೇಶದ 44 ನಗರಗಳಲ್ಲಿ ಅಪಾಯಕಾರಿ ಬ್ಲೂ ವೇಲ್ ಗೇಮ್ ಆಟಕ್ಕಾಗಿ ಹುಡುಕಾಟ ನಡೆಸಿದವರಲ್ಲಿ ಮೈಸೂರು 9ನೇಸ್ಥಾನ ಪಡೆದಿದ್ದರೆ , ಕೋಲ್ಕತ್ತಾ ಮೊದಲ ಸ್ಥಾನ ಪಡೆದಿದೆ! ಸಿಲಿಕಾನ್ ಸಿಟಿ ಬೆಂಗಳೂರು 23 ನೇಸ್ಥಾನದಲ್ಲಿದೆ . ಮೈಸೂರು ಹಾಗೂ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಯಾವುದೇ ನಗರಗಳು ಇದರಲ್ಲಿ ಸ್ಥಾನ ಪಡೆದಿಲ್ಲ ಎಂದು ಗೂಗಲ್ ಟ್ರೆಂಡ್ಸ್ ಅಂಕಿ ಅಂಶಗಳು ತಿಳಿಸುತ್ತವೆ .

Mysuru City has got 9th palce in searching deadly blue whale game in internet

ಇಂತಹ ವಿವಾದಾತ್ಮಕ ಆನ್ ಲೈನ್ ವಿಡಿಯೋ ಗೇಮ್ ಚಾಲೆಂಜ್ ಗೆ ಮಕ್ಕಳು ಬಲಿಯಾಗುತ್ತಿರುವುದು ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ , ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಆಲೋಚನೆ ಮಾಡಬೇಕು . ಆದರೆ ಅಪಾಯಕಾರಿ ವಿಡಿಯೋ ಗೇಮ್ ಮೂಲಕ ಆತ್ಮಹತ್ಯೆಗೆ ಮುಂದಾಗುತ್ತಿರುವುದು ದೇಶವೇ ಕಳವಳ ವ್ಯಕ್ತಪಡಿಸುವ ವಿಷಯವಾಗಿದೆ . ಈ ಸಂಬಂಧ ದೇಶದ ಎಲ್ಲ ಶಾಲೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಮಕ್ಕಳ ವರ್ತನೆ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ .

ಬ್ಲೂವ್ಹೇಲ್ ಗೇಮ್ ಆಡಿ ಸಿಕ್ಕಿಬಿದ್ದ ಬೆಂಗಳೂರು ಹುಡುಗರು!

ಈಗಾಗಲೇ ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿ ಸೇಂಟ್ ಆನ್ಸ್ ಪಬ್ಲಿಕ್ ಶಾಲೆಗೆ ಮೇನಕಾ ಗಾಂಧಿ, ಬರೆದಿರುವ ಪತ್ರ ತಲುಪಿದೆ. ಬ್ಲೂ ವೇಲ್ ಗೇಮ್ ದುಷ್ಪರಿಣಾಮದ ಬಗ್ಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಮೂಲಕ ಅದಕ್ಕೆ ಇನ್ನಷ್ಟು ಮಕ್ಕಳು ಬಲಿಯಾಗುವುದನ್ನು ತಡೆಯುವಂತೆ ಶಾಲೆಗಳ ಮುಖ್ಯಸ್ಥರನ್ನು ಕೋರಿದ್ದಾರೆ. ಅಗತ್ಯವಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆಮಾಡಿ ಅದರ ನೆರವು ಪಡೆಯುವುದಕ್ಕೆ ಸೂಚಿಸಿದೆ.

ಈ ಕುರಿತಾಗಿ ಮಾಹಿತಿ ನೀಡಿದ ಡಿಡಿಪಿಐ ಡಾ.ವರ್ಧನ್ , ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಒಟ್ಟು 3309 ಶಾಲೆಗಳಿವೆ . ಅಪಾಯಕಾರಿ ಬ್ಲೂ ವೇಲ್ ಗೇಮ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ನಮಗೆ ಪತ್ರ ಬಂದಿಲ್ಲ . ಆದರೆ ರಾಜ್ಯ ಸರ್ಕಾರದಿಂದ ಇದರ ಬಗ್ಗೆ ಜಾಗೃತಿ ಮೂಡಿಸುವಂತೆ ಪತ್ರದ ಮೂಲಕ ಸೂಚನೆ ಬಂದಿದೆ. ಶಾಲೆಯ ಮುಖ್ಯಸ್ಥರು ಮಕ್ಕಳು ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಈ ಅಪಾಯಕಾರಿ ಗೇಮ್ ಬಗ್ಗೆ ಜಾಗೃತಿ ಮೂಡಿಸುವಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಪಾಯಕಾರಿ ಆಟದ ಬಗ್ಗೆ ಮಕ್ಕಳು ಒಗ್ಗದ ರೀತಿಯಲ್ಲಿ ಅವರ ಮನಸ್ಸನ್ನು ಪರಿವರ್ತನೆ ಮಾಡಲು ಹಲವಾರು ಕಾರ್ಯಕ್ರಮ ಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗೂಗಲ್ ತಜ್ಞರು ಅಭಿಪ್ರಾಯಪಟ್ಟಿರುವಂತೆ ಬ್ಲೂ ವೇಲ್ ಗೇಮ್ ಗಾಗಿ ಆನ್ ಲೈನ್ ನಲ್ಲಿ ಶೋಧ ನಡೆಸಿದವರೆಲ್ಲರೂ ಗೇಮ್ ಗಾಗಿ ಶೋಧ ನಡೆಸಿದ್ದಾರೆ ಎಂದು ಹೇಳಲಾಗುವುದಿಲ್ಲ. ಈ ಡೆಡ್ಲಿ ಗೇಮ್ ಬಗ್ಗೆ ತಿಳಿದುಕೊಳ್ಳಲು ಹಾಗೂ ಈ ಗೇಮ್ ನಿಂದ ಹೊರಬರುವುದು ಹೇಗೆ ಎಂದು ತಿಳಿಯಲು ಕೂಡ ಸಾಕಷ್ಟು ಮಂದಿ ಅಂತರ್ಜಾಲ ಜಾಲಾಡಿದ್ದಾರೆ ಎಂಬುದು ಅಷ್ಟೇ ಸತ್ಯ. ಒಟ್ಟಾರೆ ಈ ಬ್ಲ್ಯೂ ಗೇಮ್ ಎಂಬ ಪೆಡಂಭೂತ ನಮ್ಮ ಮಕ್ಕಳ ಬಳಿ ಸುಳಿಯದಿದ್ದರೆ ಸಾಕು ಎಂಬುದೇ ನಮ್ಮ ಆಶಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru City has got 9th palce in searching deadly blue whale game in internet. The people of 44 cities in India are searching for Blue whale game. Kolkatta is in 1st place among them. As well as Karnataka capital Bengaluru has got 23rd place.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ