ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರ ಅಂದ ಕೆಡಿಸಿದ್ರೆ ಕ್ರಮ, ನಗರ ಪಾಲಿಕೆಯ ಎಚ್ಚರಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ.02 : ಮೈಸೂರು ನಗರದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್ ಹಾಕುವುದು, ಫೋಸ್ಟರ್ ಅಂಟಿಸುವುದು ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನಗರಪಾಲಿಕೆ ಮೈಸೂರು ಜನತೆಗೆ ಖಡಕ್ ಎಚ್ಚರಿಕೆ ನೀಡಿದೆ.

ಸಾಂಸ್ಕೃತಿಕ ನಗರಿ, ಅರಮನೆ ನಗರಿ, ನಿವೃತ್ತರ ಸ್ವರ್ಗ ಮೈಸೂರು ಪ್ರಥಮ ಸ್ವಚ್ಛ ನಗರ ಎಂಬ ಖ್ಯಾತಿಗೂ ಪಾತ್ರವಾಗಿದೆ. ಆದರೆ ಇದರ ಅಂದ ಕೆಡಿಸಲು ಅಲ್ಲಲ್ಲಿ ಫ್ಲೆಕ್ಸ್, ಹೋರ್ಡಿಂಗ್ ಕಾಣಿಸಿಕೊಳ್ಳುತ್ತಿದ್ದು ಅವುಗಳನ್ನು ತೆರವುಗೊಳಿಸಲು ಪಣತೊಟ್ಟಿರುವ ನಗರಪಾಲಿಕೆ ಅನಧಿಕೃತವಾಗಿ ಫ್ಲೆಕ್ಸ್, ಫೋಸ್ಟರ್ ಅಂಟಿಸುವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.[ನಮೋ ಸ್ವಾಗತಕ್ಕೆ ಸಿಂಗಾರಗೊಂಡ ಅರಮನೆ ನಗರಿ]

Mysuru

ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ದೇಶದ 476 ನಗರಗಳ ಪೈಕಿ ಮೈಸೂರು ಪ್ರಥಮ ಸ್ವಚ್ಛ ನಗರ ಎಂಬ ಖ್ಯಾತಿ ಪಡೆದಿದೆ. ಮುಂದಿನ ವರ್ಷದಲ್ಲೂ ಮೈಸೂರು ನಗರ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಉಳಿಸಿಕೊಳ್ಳಲು ನಗರಪಾಲಿಕೆ ಈಗಿನಿಂದಲೇ ಪಣತೊಟ್ಟು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸ್ವಚ್ಛತೆಯನ್ನು ಪರಿಣಾಮಕಾರಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಲು ನೂತನ ಕ್ರಮ ಅನುಸರಿಸುತ್ತಿದೆ.[ಪುಷ್ಪಲೋಕದಲ್ಲಿ ಮಿನುಗುತ್ತಿರುವ ಮೈಸೂರು ಅರಮನೆ]

ಫೋಸ್ಟರ್, ಹೋರ್ಡಿಂಗ್, ಫ್ಲೆಕ್ಸ್ ಅಳವಡಿಸುವುದನ್ನು ನಿಷೇಧಿಸಿದ್ದರೂ ನಗರದ ಪ್ರಮುಖ ಸ್ಥಳಗಳಲ್ಲಿ, ಗೋಡೆಗಳ ಮೇಲೆ, ಎಲೆಕ್ಟ್ರಿಕ್ ಕಂಬಗಳ ಮೇಲೆ, ಟೆಲಿಫೋನ್ ಬಾಕ್ಸ್ ಗಳ ಮೇಲೆ ಕೆಲವು ಸಂಘ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಹ್ಯಾಂಡ್ ಬಿಲ್, ಫೋಸ್ಟರ್ ಗಳನ್ನು ಅಂಟಿಸುವುದು ಮಾಮೂಲಿಯಾಗಿದೆ.

ಪಾಲಿಕೆಯಿಂದ ಸೂಚನೆಯಿದ್ದರೂ ಅದನ್ನು ಮೂಲೆಗೆ ತಳ್ಳಿ ಭಿತ್ತಿಪತ್ರ ಅಂಟಿಸಿದ VETA, LINUX Academy, UPS Battery Laptop Sales & Service, MIT Trust, Global Education, Mysore ಮುಂತಾದ ಸಂಸ್ಥೆಗಳ ವಿರುದ್ಧ The Karnataka Open Places (Prevention of Disfigurement) Act-1981ರ ಪ್ರಕಾರ ಪೊಲೀಸ್ ಇಲಾಖೆಯಿಂದ ಎಫ್‍ಐಆರ್ ದಾಖಲಿಸಿದೆ.

English summary
Mysuru city corporation will be bans stick bill on the wall and flex in Mysuru and officials warned to Mysuru people. Mysuru police department filed FIR against of VETA, LINUX Academy, UPS Battery Laptop Sales & Service, MIT Trust, Global Education, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X