ಪ್ರೇಮಕುಮಾರಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ

Posted By:
Subscribe to Oneindia Kannada

ಮೈಸೂರು, ಜನವರಿ 12 : ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಕುಮಾರಿ ಅವರ ವಿರುದ್ಧ ಸಿಐಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ರಾಮದಾಸ್‌ ಸಹೋದರನ ಬಳಿ ಪಡೆದ ಹಣದಲ್ಲಿ ಪ್ರೇಮಕುಮಾರಿ ಅವರು ನಿವೇಶನ, ಕಾರು ಖರೀದಿ ಮಾಡಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ.

ಸಿಐಡಿ ಪೊಲೀಸರು ಮೈಸೂರಿನ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಸೋಮವಾರ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 20014ರ ಫೆಬ್ರವರಿಯಲ್ಲಿ ಮೈಸೂರಿನ ಶ್ರೀರಾಂಪುರದಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ರಾಮದಾಸ್ ಯತ್ನಿಸಿದ್ದರು. [ರಾಮದಾಸ್ ಕೇಸ್: 'ಪ್ರೇಮಾ' ಪುರಾಣ ಬಯಲು]

premakumari

ತಾಲ್ಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕಿಯಾಗಿದ್ದ ಪ್ರೇಮಕುಮಾರಿ ಹಾಗೂ ಅವರ ಕುಟುಂಬದವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂದು ಕುವೆಂಪುನಗರ ಠಾಣೆಗೆ ರಾಮದಾಸ್ ದೂರು ನೀಡಿದ್ದರು. 1.10 ಕೋಟಿ ಹಣ ಪಡೆದು ಬ್ಲಾಕ್‌ ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. [ಆತ್ಮಹತ್ಯೆ ಪ್ರಕರಣ ಸಿಎಂ ಸಿದ್ದುಗೆ ರಾಮದಾಸ್ ಪತ್ರ]

ಪ್ರೇಮಕುಮಾರಿ ಅವರು ಇದಕ್ಕೂ ಮೊದಲು ರಾಮದಾಸ್‌ ಅವರು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಸರ್ಕಾರ ಎರಡೂ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ತನಿಖೆ ಪೂರ್ಣಗೊಳಿಸಿರುವ ಸಿಐಡಿ ಪೊಲೀಸರು ಸೋಮವಾರ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. [ರಾಮದಾಸ್ ಅವರೇ ನನ್ನ ಗಂಡ ಎಂದ ಪ್ರೇಮಕುಮಾರಿ!]

ಬ್ಲಾಕ್ ಮೇಲ್ ಮಾಡಿಲ್ಲ : ಚಾರ್ಜ್ ಶೀಟ್ ಬಗ್ಗೆ ಪತ್ರಿಕ್ರಿಯೆ ನೀಡಿರುವ ಪ್ರೇಮಕುಮಾರಿ ಅವರು, 'ನಾನು ಬ್ಲಾಕ್‍ ಮೇಲ್ ಮಾಡಿಲ್ಲ. ರಾಮದಾಸ್ ಮತ್ತು ನನ್ನ ನಡುವೆ ಬೇರೆಯದೇ ಸಂಬಂಧ ಇತ್ತು. ಅದಕ್ಕಾಗಿ ಅವರು ನನಗೆ ಮನೆ ನೀಡಿದ್ದಾರೆ ಹೊರತು ನಾನು ಮೋಸ ಮಾಡಿಲ್ಲ' ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Criminal Investigation Department (CID) filed a charge sheet against Premakumari who had accused former minister S.A.Ramdas of sexual harassment for extortion and criminal intimidation.
Please Wait while comments are loading...