ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಬೆಂಗಳೂರು 6 ಪಥದ ರಸ್ತೆ 24 ತಿಂಗಳಲ್ಲಿ ಪೂರ್ಣ

|
Google Oneindia Kannada News

ಮೈಸೂರು, ನವೆಂಬರ್ 29 : ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ಕಾಮಗಾರಿ 24 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

ಮೈಸೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ದನ್ನು ವಿಸ್ತರಣೆ ಮಾಡಿ, 10 ಪಥದ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುತ್ತದೆ. 6 ಪಥದ ಮುಖ್ಯ ರಸ್ತೆ, 2 ಕಡೆಯೂ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಬೆಂಗಳೂರು-ಮೈಸೂರು 6 ಪಥ ರಸ್ತೆ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭಬೆಂಗಳೂರು-ಮೈಸೂರು 6 ಪಥ ರಸ್ತೆ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭ

2014ರಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು. 2018ರ ಮಾರ್ಚ್‌ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ಮಾಡಿದ್ದರು. ವಿವಿಧ ಕಾರಣಗಳಿಂದಾಗಿ ಯೋಜನೆ ಆರಂಭವಾಗುವುದು ವಿಳಂಬವಾಗುತ್ತಿತ್ತು. ಡಿಸೆಂಬರ್‌ನಲ್ಲಿ ಈಗ ಕಾಮಗಾರಿ ಆರಂಭವಾಗುತ್ತಿದೆ.

ಬೆಂಗಳೂರು-ಮೈಸೂರು : 6 ಪಥ ರಸ್ತೆ ನಿರ್ಮಾಣಬೆಂಗಳೂರು-ಮೈಸೂರು : 6 ಪಥ ರಸ್ತೆ ನಿರ್ಮಾಣ

ಮೈಸೂರು-ಬೆಂಗಳೂರು ನಡುವಿನ 117 ಕಿ.ಮೀ. ಮಾರ್ಗವನ್ನು ವಿಸ್ತರಣೆ ಮಾಡಿ 6 ಪಥದ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಗೆ ಶೇ 40ರಷ್ಟು ಅನುದಾನ ನೀಡಲಿದೆ. ಉಳಿದ ಹಣವನ್ನು ಯೋಜನೆ ಗುತ್ತಿಗೆ ಪಡೆದ ಸಂಸ್ಥೆ ಹೂಡಿಕೆ ಮಾಡಲಿದ್ದು, ಟೋಲ್ ಸಂಗ್ರಹ ಮಾಡಲಿದೆ.

ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕೆ ಇಂಧನ, ಅರಣ್ಯ ಇಲಾಖೆ ಅಡ್ಡಿಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕೆ ಇಂಧನ, ಅರಣ್ಯ ಇಲಾಖೆ ಅಡ್ಡಿ

ಟೆಂಡರ್ ಪ್ರಕ್ರಿಯೆ ಪೂರ್ಣ

ಟೆಂಡರ್ ಪ್ರಕ್ರಿಯೆ ಪೂರ್ಣ

Dilip Buildcon Ltd. ಮೈಸೂರು-ಬೆಂಗಳೂರು 6 ಪಥದ ರಸ್ತೆ ನಿರ್ಮಾಣ ಕಾಮಗಾರಿಯ ಟೆಂಡರ್ ಪಡೆದಿದೆ. ಕಂಪನಿ ಕಾಮಗಾರಿಯನ್ನು ಪೂರ್ಣಗೊಳಿಸಲು 30 ತಿಂಗಳ ಡೆಡ್‌ಲೈನ್ ಪಡೆದಿದೆ. ಆದರೆ, 24 ತಿಂಗಳಿನಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.

ಡಿಸೆಂಬರ್ 15ಕ್ಕೆ ಹಸ್ತಾಂತರ

ಡಿಸೆಂಬರ್ 15ಕ್ಕೆ ಹಸ್ತಾಂತರ

6 ಪಥದ ರಸ್ತೆ ಯೋಜನೆಗೆ ಶೇ 82ರಷ್ಟು ಭೂ ಸ್ವಾಧೀನ ಪೂರ್ಣಗೊಂಡಿದೆ. ಡಿಸೆಂಬರ್ 15ರಂದು ಭೂಮಿಯನ್ನು ಕಂಪನಿಗೆ ಹಸ್ತಾಂತರ ಮಾಡಲಾಗುತ್ತದೆ. 6400 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 117 ಕಿ.ಮೀ. ರಸ್ತೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿ ಮಾಡಲಾಗುತ್ತದೆ.

ಕಾಮಗಾರಿಗೆ ಸಿದ್ಧತೆ

ಕಾಮಗಾರಿಗೆ ಸಿದ್ಧತೆ

ಒಟ್ಟು 2 ಹಂತದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. Dilip Buildcon Ltd. ಕಾಮಗಾರಿ ಆರಂಭಿಸಲು ಹೆದ್ದಾರಿ ಪಕ್ಕದಲ್ಲಿ 10 ಬೇಸ್ ಕ್ಯಾಂಪ್‌ಗಳನ್ನು ನಿರ್ಮಾಣ ಮಾಡಿದೆ. ಮೊದಲ ಹಂತದಲ್ಲಿ ಬೆಂಗಳೂರು-ನಿಢ್ಲಘಟ್ಟ (56 ಕಿ.ಮೀ) ಕಾಮಗಾರಿಯನ್ನು 1984 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ.

ಮೂಲ ಕೆಲಸ ಆರಂಭ

ಮೂಲ ಕೆಲಸ ಆರಂಭ

ಮೈಸೂರು-ಬೆಂಗಳೂರು ರಸ್ತೆಯ ಅಗಲೀಕರಣದ ಮೂಲ ಕೆಲಸಗಳನ್ನು ಆರಂಭಿಸಲಾಗಿದೆ. ಎಲ್ಲಿ ತನಕ ರಸ್ತೆ ಬರಲಿದೆ ಎಂದು ಮಾರ್ಕ್ ಮಾಡಲಾಗಿದ್ದು, ವಿದ್ಯುತ್ ಕಂಬ, ಮರ, ಅಂಗಡಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಪ್ರತಾಪ್‌ ಸಿಂಹ ಟ್ವೀಟ್

ಮೈಸೂರು-ಬೆಂಗಳೂರು ರಸ್ತೆ ಕಾಮಗಾರಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

English summary
Mysuru and Kodagu MP Pratap Simha said that, Bengaluru–Mysuru highway 6 lane project will be completed in 24 months. Highway will be widened into a 10-lane six lanes of the main way and two lanes each of the service road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X