ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋ ಮಧುಸೂದನ್ ಹೇಳಿಕೆ ವಿರೋಧಿಸಿ ಇಂದು ಮೈಸೂರು ಬಂದ್ ಗೆ ಕರೆ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ನವೆಂಬರ್ 22: ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರು ಭಾರತದ ಸಂವಿಧಾನವನ್ನು ಅವಮಾನಿಸಿದ್ದು, ಅವರನ್ನು ಬಂಧಿಸುವಂತೆ ಆಗ್ರಹಿಸಿ ಇಂದು (ನ.22) ಮೈಸೂರು ಬಂದ್ ಗೆ ಕರೆ ನೀಡಲಾಗಿದೆ ಎಂದು ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ಗೋ.ಮಧುಸೂದನ್ ಸಂದರ್ಶನ : ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿಗೋ.ಮಧುಸೂದನ್ ಸಂದರ್ಶನ : ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ

ನ.21 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ಅಪಮಾನ ಮಾಡಿರುವುದು ಭಾರತದ ಅಖಂಡತೆಗೆ ಮಾಡಿರುವ ಅಪಮಾನವಾಗಿದೆ. ಇದನ್ನು ಖಂಡಿಸಿ ಬೀದಿಗಿಳಿದು ನಮ್ಮ ಪ್ರತಿರೋಧವನ್ನು ಬಂದ್ ಮೂಲಕ ಹೊರ ಹಾಕುತ್ತಿದ್ದೇವೆ ಎಂದರು.

Mysuru bandh on 22nd Nov. to protest against MLC G Madhusudhan statement against indian constitution

ರಾಯಚೂರು ಜಿಲ್ಲೆಯ ಯರಮರಸ ಪೊಲೀಸ್ ಠಾಣೆಯಲ್ಲಿ ಗೋ.ಮಧುಸೂದನ್ ವಿರುದ್ಧ ಎಫ್‍ಐಆರ್ ದಾಖ ಲಾಗಿದೆ. ಗೋ.ಮಧುಸೂದನ್ ಅವರನ್ನು ಬಂಧಿಸುತ್ತೇವೆ ಎಂಬ ಆಶ್ವಾಸನೆ ನೀಡಿದರೂ ಸಾಕು ಎಂದು ಪೊಲೀಸರನ್ನು ಕೋರಿದ್ದೆವು. ಆದರೆ, ಪೊಲೀಸರಿಂದ ವಿದ್ಯಾರ್ಥಿಗಳು ಸಹ ಬಂದ್‍ನಲ್ಲಿ ಭಾಗ ವಹಿಸುವುದಾಗಿ ಹೇಳಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ನಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು.

ದಲಿತ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, ಪುರಭವನದಿಂದ ಬೃಹತ್ ಸಂಖ್ಯೆಯಲ್ಲಿ ನಾಗರಿಕರು ಸಮಾವೇಶ ಗೊಂಡು ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ನಡೆಯುವ ಬಂದ್‍ಗೆ ಈಗಾಗಲೇ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಆಟೋಚಾಲಕರು, ಲಾರಿ ಮಾಲೀಕರು, ಸಂಘಸಂಸ್ಥೆಗಳಿಗೆ ಬಂದ್ ಬೆಂಬಲಿಸುವಂತೆ ಮನವಿ ಮಾಡಲಾಗಿದೆ. ಕಾಲೇಜು ಮನವಿ ಸಲ್ಲಿಸಲಿದ್ದೇವೆ. ಗೋ.ಮಧುಸೂದನ್ ಅವರನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಗೋ ಮ ನೀಡಿದ ಹೇಳಿಕೆ :
ಗೋ.ಮಧುಸೂದನ್ ಖಾಸಗಿ ಸುದ್ದಿವಾಹಿನಿಯ ಚರ್ಚೆಯಲ್ಲಿ ಮಾತನಾಡುತ್ತಾ, ಅಂಬೇಡ್ಕರ್‌ ಬರೆದಿರುವ ಸಂವಿಧಾನ ನಾವು ಒಪ್ಪುವುದಿಲ್ಲ, ಅದೊಂದು ಸುಳ್ಳಿನ ಕಂತೆ ಎಂದು ಹೇಳಿ ರಾಷ್ಟ್ರೀಯ ಏಕತೆಗೆ ಧಕ್ಕೆ ತಂದಿದ್ದಾರೆ ಎಂಬುದು ಪ್ರತಿಭಟನಾಕಾರರ ವಾದ.

English summary
"Mysuru bandh will be observed on November 22 to condemn the statement of former MLC Go Madhusudan and against the inactive state government, district administration and police department,” said Jnanaprakasha seer of Urilinga Peddimutt at a press meet held at Mysuru Press Club
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X