ಮಳೆಯಿಂದ ಮೈಸೂರು- ಚಾಮರಾಜನಗರ ಹಾಲು ಒಕ್ಕೂಟಕ್ಕೆ ನಷ್ಟ

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 18 : ಕಳೆದೊಂದು ತಿಂಗಳಿಂದ ಸುರಿಯುತ್ತಿರುವ ಮಳೆ ಕೇವಲ ಜನಸಾಮಾನ್ಯರನ್ನು ಮಾತ್ರವಲ್ಲ, ಮೈಸೂರು-ಚಾಮರಾಜನಗರ ಹಾಲು ಒಕ್ಕೂಟಕ್ಕೂ ತಟ್ಟಿದೆ.

ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭ

ಹೌದು, ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಮೈಸೂರು-ಚಾಮರಾಜನಗರ ಹಾಲು ಒಕ್ಕೂಟಕ್ಕೆ 45 ಕೋಟಿ ರೂ.ನಷ್ಟವಾಗಿದೆ. ಇದರಿಂದ ಹಾಲಿನ ದರದಲ್ಲೂ 2.50. ಪೈಸೆ ಇಳಿಕೆಯಾಗಿದ್ದು, ರಾಜ್ಯದ ಹಾಲು ಹೊರ ರಾಜ್ಯಗಳಿಂದ ಖರೀದಿಯಾಗುತ್ತಿಲ್ಲ. ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ರಾಜ್ಯದ ಹಾಲಿಗೆ ಬೇಡಿಕೆ ಇಲ್ಲದಂತಾಗಿದೆ.

Mysuru and Chamarajanagara milk federation face big lose due to Heavy rains

ಮಳೆಯಿಂದ ಮೇವು ಹೆಚ್ಚಾದ ಹಿನ್ನೆಲೆ ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ 80 ಸಾವಿರ ಲೀ.ಹಾಲು ಹೆಚ್ಚಳವಾಗಿದೆ. ವಾರಕ್ಕೊಮ್ಮೆ ಹಾಲು ಒಕ್ಕೂಟದಿಂದ ರೈತರಿಗೆ 17 ಕೋಟಿ 40 ಲಕ್ಷ ಪೇಮೆಂಟ್ ನೀಡಲಾಗುತ್ತಿದ್ದು, ಖರೀದಿ ಇಲ್ಲದೆ 3 ಲಕ್ಷದ 80 ಸಾವಿರ ಲೀಟರ್ ಹಾಲಿನ ಪುಡಿಗೆ ರವಾನೆ ಮಾಡಲಾಗುತ್ತಿದೆ.

270 ರೂ. ಇದ್ದ ಹಾಲಿನ ಪೌಡರ್ ದರ 160 ರೂ.ಗೆ ಇಳಿಕೆಯಾಗಿದ್ದು, ಹಾಲಿನ ಪೌಡರ್ ನಿಂದಲೂ ಆದಾಯ ಬರುತ್ತಿಲ್ಲ. ಇದರಿಂದಾಗಿ ಮೈಸೂರು-ಚಾಮರಾಜನಗರ ಹಾಲು ಒಕ್ಕೂಟಕ್ಕೆ ಭಾರೀ ನಷ್ಟ ಉಂಟಾಗುತ್ತಿರುವುದರಲ್ಲಿ ಅನುಮಾನವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru and Chamarajanagara milk federation face big loss due to Heavy rains which took place for weeks in the districts.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ