ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಥ ಅಪರೂಪದ ಬಾಳೆ ಗಿಡ ನೋಡಿದ್ದೀರಾ? ಪ್ರಕೃತಿ ವಿಸ್ಮಯಕ್ಕೊಂದು ಸಾಕ್ಷಿ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 08: ಪ್ರಕೃತಿಯ ವೈಚಿತ್ರ್ಯಗಳು ಕೆಲವೊಮ್ಮೆ ಅಚ್ಚರಿ ಮೂಡಿಸುತ್ತವೆ. ಅದರಲ್ಲೂ ಬಾಳೆಗಿಡಗಳಂತು ಆಗಾಗ್ಗೆ ಏನಾದರೊಂದು ವಿಸ್ಮಯಗಳನ್ನು ನಮ್ಮ ಮುಂದೆ ತೆರೆದಿಡುತ್ತಲೇ ಇರುತ್ತವೆ.

ಇದೀಗ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿಯಲ್ಲಿ ರೈತರೊಬ್ಬರು ನೆಟ್ಟ ಬಾಳೆಗಿಡದಲ್ಲಿ ಒಮ್ಮೆಗೇ ಎರಡು ಗೊನೆಯನ್ನು ಬಿಟ್ಟು ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಒಂದು ಬಾಳೆ ಗಿಡದಲ್ಲಿ ಒಂದು ಗೊನೆ ಮಾತ್ರ ಬಿಡುತ್ತದೆ! ಈ ಗಿಡದಲ್ಲಿ ಎರಡು ಗೊನೆಗಳಾಗಿದ್ದು, ಒಂದು ಗೊನೆಯ ಕಾಯಿಗಳು ಬಲಿತಿದ್ದರೆ, ಮತ್ತೊಂದು ಗೊನೆಯ ಕಾಯಿಗಳು ಇನ್ನಷ್ಟೆ ಬಲಿಯಬೇಕಾಗಿದೆ. ಆದರೆ ಭಾರೀ ಗಾತ್ರದ ಈ ಬಾಳೆಗೊನೆಯನ್ನು ಜನ ಅಚ್ಚರಿಯಿಂದ ನೋಡುತ್ತಿದ್ದಾರೆ. ಗ್ರಾಮದ ರೈತ ಹೆಚ್.ಎಸ್.ಶಂಕರ್ ಎಂಬುವರು ಮನೆಯ ಪಕ್ಕದಲ್ಲಿ ನೆಟ್ಟ ಬಾಳೆಗಿಡದಲ್ಲಿ ಈ ವೈಚಿತ್ರ್ಯ ನಡೆದಿದ್ದು ಎಲ್ಲರನ್ನು ಬೆರಗುಗೊಳಿಸಿದೆ.

Mysuru: 2 banana bunches in a single plant creates curiosity among people

ಎಲ್ಲ ಬಾಳೆಗಿಡಗಳನ್ನು ನೆಡುವಂತೆಯೇ ಇದನ್ನೂ ನೆಟ್ಟಿದ್ದರು. ಅಷ್ಟೇ ಅಲ್ಲ ಗೊಬ್ಬರ ನೀರು ಹಾಕಿ ಜತನದಿಂದಲೇ ಪೋಷಿಸಿದ್ದರು. ಗಿಡ ಬೆಳೆದು ಫಸಲಿಗೆ ಬಂದಿತ್ತು. ಇದು ಗೊನೆ ಹಾಕಿದಾಗ ಮಾತ್ರ ಅಚ್ಚರಿ ಕಾದಿತ್ತು. ಅದೇನೆಂದರೆ ಒಂದರಲ್ಲೇ ಎರಡು ಗೊನೆಗಳು ಕಂಡು ಬಂದಿದ್ದವು. ಮೊದಲಗೊನೆಯಲ್ಲಿ ಒಂದಷ್ಟು ಕಾಯಿಗಳಿದ್ದು, ಸ್ವಲ್ಪ ಅಂತರ ಬಿಟ್ಟು ಮತ್ತೆ ಅದೇ ರೀತಿಯಲ್ಲಿ ಕಾಯಿಗಳು ಬಿಟ್ಟಿದ್ದವು. ಮೊದಲು ಬಿಟ್ಟ ಗೊನೆಯ ಕಾಯಿಗಳಿಗೂ ನಂತರದ ಗೊನೆಯ ಕಾಯಿಗಳಿಗೂ ಒಂದಷ್ಟು ವ್ಯತ್ಯಾಸಗಳಿದ್ದು, ಮೊದಲಗೊನೆಯ ಕಾಯಿಗಳು ಬಲಿತಿದ್ದರೆ, ನಂತರದ ಕಾಯಿಗಳು ಇನ್ನಷ್ಟೆ ಬಲಿಯಬೇಕಿವೆ. ಜತೆಗೆ ಗಿಡಕ್ಕೆ ಇವುಗಳ ಭಾರವನ್ನು ತಡೆಯಲು ಸಾಧ್ಯವಾಗದೆ ಮುರಿದು ಹೋಗಬಹುದೆಂದು ಆಸರೆಯನ್ನು ಕೊಡಲಾಗಿದೆ. ಈ ಬಾಳೆಗೊನೆಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಕಾಯಿಗಳಿವೆ!

ವಿಷಯ ತಿಳಿದ ಗ್ರಾಮದ ಜನ ಸ್ಥಳಕ್ಕೆ ಬಂದು ಈ ಬಾಳೆಗೊನೆಯನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ರೈತ ಹೆಚ್.ಎಸ್.ಶಂಕರ್ ಅವರ ಪ್ರಕಾರ ಇದು ಹೊಸತಲ್ಲವಂತೆ. ಈ ಹಿಂದೆಯೂ ಇದೇ ರೀತಿಯಲ್ಲಿ ಗೊನೆಬಿಟ್ಟಿತ್ತಂತೆ. ಸಾಮಾನ್ಯವಾಗಿ ಬಾಳೆಗಿಡಗಳಲ್ಲಿ ಇಂತಹ ವಿಸ್ಮಯಗಳು ನಡೆಯುತ್ತಿರುತ್ತವೆ. ಒಂದೇ ಬಾಳೆಗೊನೆಯಲ್ಲಿ ಸ್ವಲ್ಪ ಅಂತರ ಬಿಟ್ಟು ಚಿಕ್ಕ ಚಿಕ್ಕ ಕಾಯಿಗಳಾಗುತ್ತವೆ. ಆದರೆ ಇಷ್ಟೊಂದು ಬೃಹತ್ ಗೊನೆಬಿಡುವುದು ಅಪರೂಪದಲ್ಲಿ ಅಪರೂಪ ಎಂದರೆ ತಪ್ಪಾಗಲಾರದು.

English summary
2 banana bunches in a single plant creates curiosity among people of Hirekyatanahalli in Hunsuru taluk in Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X