ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯಕ್ಕೆ ಟ್ರಿಪ್‌ ಅಡ್ವೈಸರ್‌ ಪ್ರಶಸ್ತಿ

|
Google Oneindia Kannada News

ಮೈಸೂರು, ಆ.19 : ಮೈಸೂರು ಮೃಗಾಲಯ ಎಂದು ಪ್ರಸಿದ್ಧ ಪಡೆದಿರುವ ಶ್ರೀ ಜಯಚಾಮರಾಜೇಂದ್ರ ಮೃಗಾಲಯ ಏಷ್ಯಾದ 25 ಪ್ರಸಿದ್ಧ ಮೃಗಾಲಯದ ಪಟ್ಟಿ ಸೇರಿದೆ. ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಮೃಗಾಲಯ ಟ್ರಿಪ್‌ ಅಡ್ವೈಸರ್‌ ಟ್ರಾವೆಲರ್ಸ್‌ ಚಾಯ್ಸ್‌ ಪ್ರಶಸ್ತಿಗೆ ಆಯ್ಕೆಯಾಗಿದೆ.

ಟ್ರಿಪ್‌ ಅಡ್ವೈಸರ್‌ ಟ್ರಾವೆಲರ್ಸ್‌ ವೆಬ್ ಸೈಟ್ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು ದೇಶದ ಇತರ ಮೃಗಾಲಯಗಳಾದ, ಹೈದರಾಬಾದ್‌ನ ನೆಹರು ಜಿಯೋಲಾಜಿಕಲ್ ಪಾರ್ಕ್ (11), ಡಾರ್ಜಲಿಂಗ್‌ನ ಪದ್ಮಜ್ ನಾಯ್ಡು ಜಿಯೋಲಾಜಿಕಲ್ ಪಾರ್ಕ್ (12), ಭುವನೇಶ್ವರ ನಗರದ ನಂದಕಾನನ್ ಪಾರ್ಕ್ (14), ಚೆನ್ನೈನ ಅನ್ನಾ ಜಿಯೋಲಾಜಿಕಲ್ ಪಾರ್ಕ್ (20) ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Mysore

ಹಲವಾರು ಸಮೀಕ್ಷೆ ಮತ್ತು ಅಭಿಪ್ರಾಯ ಸಂಗ್ರಹಗಳ ನಂತರ ಟ್ರಿಪ್‌ ಅಡ್ವೈಸರ್‌ ಟ್ರಾವೆಲರ್ಸ್‌ ಈ ಫಲಿತಾಂಶವನ್ನು ಪ್ರಕಟಿಸಿದೆ. ಮೈಸೂರು ಮೃಗಾಲಯ ಕಳೆದ ವರ್ಷ ಭಾರತದ ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಉತ್ತಮ ಯೋಜನಾ ವಿನ್ಯಾಸಕ್ಕಾಗಿ ಮೆಚ್ಚುಗೆ ಗಳಿಸಿತ್ತು. [ಮೃಗಾಲಯದ ಟಿಕೆಟ್ ಸುಲಭವಾಗಿ ಪಡೆಯಿರಿ]

ಟ್ರಿಪ್‌ ಅಡ್ವೈಸರ್‌ ಟ್ರಾವೆಲರ್ಸ್‌ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಅವರು, ಪ್ರವಾಸಿಗರ ಸ್ನೇಹಿಯಾಗಿರುವ ಮೈಸೂರು ಮೃಗಾಲಯಕ್ಕೆ ಈ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. [ಮೃಗಾಲಯದ ವೆಬ್ ಸೈಟ್ ನೋಡಿ]

ಸ್ವಚ್ಛತೆ, ಹಸಿರು ವಾತಾವರಣ ನಿರ್ಮಿಸಲು ಮೃಗಾಲಯದಲ್ಲಿ ಆದ್ಯತೆ ನೀಡಲಾಗಿದೆ. ಮೃಗಾಲಯದಲ್ಲಿ ಪಾಸ್ಟಿಕ್ ಮತ್ತು ತಂಬಾಕು ನಿಷೇಧ ಮಾಡಲಾಗಿದೆ. ಮೃಗಾಲಯದ ಅಭಿವೃದ್ಧಿಗೆ ನಾವು ಕೈಗೊಂಡ ಕ್ರಮಗಳಿಂದಾಗಿ ಈ ಪ್ರಶಸ್ತಿ ದೊರಕಿದೆ ಎಂದು ರವಿ ತಿಳಿಸಿದ್ದಾರೆ.

English summary
Sri Chamarajendra Zoological Gardens, popularly known as Mysore zoo, has been listed as the country’s top zoo besides securing third place among the top 25 zoos in Asia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X