ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯ ಸೋಂಕು ಮುಕ್ತ: ಕೆಲವೇ ದಿನದಲ್ಲಿ ಪ್ರವೇಶ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜನವರಿ 31 : ಮೈಸೂರು ಚಾಮರಾಜೇಂದ್ರ ಮೃಗಾಲಯದ ಪ್ರವಾಸಿಗರಿಗೆ ಸಿಹಿಸುದ್ದಿ, ಝೂ ವೈರಸ್ ಮುಕ್ತವಾಗಿದ್ದು, ಇನ್ನೆರಡು ದಿನಗಳಲ್ಲಿ(ಫೆ.2ರಿಂದ) ಮೃಗಾಲಯ ಮತ್ತೆ ತೆರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ಪಕ್ಷಿಗಳ ರಕ್ತ ಹಾಗೂ ಹಿಕ್ಕೆ ಸ್ಯಾಂಪಲ್ ಗಳನ್ನು ಜ.13ರಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಎಂದು ಬಂದಿದೆ. ಎರಡನೇ ಹಂತದಲ್ಲಿ ಪಕ್ಷಿಗಳ ಮಾದರಿಯನ್ನು ಭೋಪಾಲ್ ನಲ್ಲಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೈಸೆಕ್ಯೂರಿಟಿ ಅನಿಮಲ್ ಡಿಸೀಸ್ ಘಟಕಕ್ಕೆ ಜ.25ರಂದು ಕಳುಹಿಸಲಾಗಿದೆ. ಲ್ಯಾಬ್ ನಿಂದ ಎರಡನೆ ಪರೀಕ್ಷಾ ವರದಿಯಲ್ಲಿ ಸಂಪೂರ್ಣ ವೈರಸ್ ಮುಕ್ತ ಎಂದು ನೆಗೆಟಿವ್ ರಿಪೋರ್ಟ್ ಬಂದಿದ್ದು, ಇನ್ನೆರಡು ದಿನದಲ್ಲಿ ಮೃಗಾಲಯ ಪುನರಾರಂಭಗೊಳ್ಳಲಿದೆ ಎನ್ನಲಾಗಿದೆ.[ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ]

Mysore Zoo is virus-free: within two days are available to the public

ಬೋಪಾಲ್ ಲ್ಯಾಬ್ ನ ಅಂತಿಮ ವರದಿಯು ಮೃಗಾಲಯ ಅಧಿಕಾರಿಗಳ ಕೈ ಸೇರಿದೆ. ವರದಿಯ ಪ್ರತಿಯನ್ನು ಮೃಗಾಲಯ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳಿಗೆ ರವಾನೆ ಮಾಡಿದ್ದಾರೆ. ವೈರಸ್‌ ಮುಕ್ತ ಹಿನ್ನೆಲೆಯಲ್ಲಿ ಇನ್ನೆರಡು ದಿನದಲ್ಲಿ ಮೃಗಾಲಯಕ್ಕೆ ಪ್ರವೇಶ ಅವಕಾಶ ನೀಡಲಾಗುವುದು ಎಂದು ತಿಳಿದು ಬಂದಿದೆ.[125 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಝೂ ಕ್ಲೋಸ್..!]

Mysore Zoo is virus-free: within two days are available to the public

ಮೈಸೂರಿನ ಮೃಗಾಲಯದಲ್ಲಿ ಹಕ್ಕಿಜ್ವರ ಹರಡಿದೆ ಎಂಬ ಶಂಕೆ ಹಿನ್ನಲೆಯಲ್ಲಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಒನ್ ಇಂಡಿಯಾ ಕನ್ನಡಕ್ಕೆ ಕಮಲಾ ಕರಿಳನ್ ತಿಳಿಸಿದ್ದಾರೆ.

Mysore Zoo is virus-free: within two days are available to the public

ಮೃಗಾಲಯದಲ್ಲಿ ಪಕ್ಷಿಗಳು H5N8 ವೈರಸ್‌ನಿಂದಾಗಿ ಸಾವನ್ನಪ್ಪಿವೆ ಎಂಬ ಕಾರಣದಿಂದ ಒಂದು ತಿಂಗಳು ಚಾಮರಾಜೇಂದ್ರ ಮೃಗಾಲಯವನ್ನು ಮುಚ್ಚಲಾಗಿತ್ತು. ಅಲ್ಲದೆ ಸೋಂಕು ಸಂಬಂಧಿತ ಅನೇಕ ಪರೀಕ್ಷೆಗಳು ಜರುಗಿದ್ದವು. ಫೆ.2ಕ್ಕೆ ಒಂದು ತಿಂಗಳು ತುಂಬಲಿದ್ದು ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

English summary
Mysore Zoo is virus-free: within two days are available to the public ..? General public entry to Mysuru zoo restricted between January 4th to February 2nd, 2017. but in two days re-open.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X