ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸೆಂಬರ್ 17ರ ಬಳಿಕ ನಡೆಯಲಿದೆ ಮೈಸೂರು ಯುವರಾಜನ ನಾಮಕರಣ

By Yashaswini
|
Google Oneindia Kannada News

ಮೈಸೂರು, ಡಿಸೆಂಬರ್ 11 : ಮೈಸೂರು ಯುವರಾಜನ ಆಗಮನ ಕೇವಲ ಮೈಸೂರಿಗರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸಂತಸಕರ ವಿಷಯ. ಅಲಮೇಲಮ್ಮನ ಶಾಪ ವಿಮೋಚನೆಯಾಗಿದ್ದು . ಇದೇ ಡಿ. 5ರ ರಾತ್ರಿ 9.32ಕ್ಕೆ ಯದುವೀರ್ ದಂಪತಿಗೆ ಗಂಡು ಮಗು ಜನನವಾಗಿದೆ. ಇಲ್ಲಿದೆ ಯದುವಂಶದ ಪುಟ್ಟ ಕಂದನ ಮಾಹಿತಿ

ಮೈಸೂರಿಗೆ ಬಂದ ಮುದ್ದು ರಾಜಕುಮಾರ: ಒಂದಷ್ಟು ಚಿತ್ರಗಳು
ಮಗುವಿನ ಸದ್ಯದ ಸ್ಥಿತಿ ಹೀಗಿದೆ :
ತ್ರಿಷಿಕಾಗೆ ನಾರ್ಮಲ್ ಡೆಲಿವರಿಯಾಗಿದ್ದು, ಪುನರ್ವಸು ನಕ್ಷತ್ರದಲ್ಲಿ ಜನಿಸಿರುವ ಮಗು 3 ಕೆಜಿ ಇದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅಷ್ಟೇ ಅಲ್ಲದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿದೆ. ಮಗುವಿನ ನಾಮಕರಣ ಸೇರಿದಂತೆ ಮುಂದಿನ ಕಾರ್ಯಕ್ರಮದ ಕುರಿತಂತೆ ಮೈಸೂರಿಗೆ ಹೋದ ನಂತರ ನಿರ್ಧಾರ ಮಾಡುವ ಕುರಿತಾಗಿ ರಾಜಮಾತೆ ಪ್ರಮೋದಾದೇವಿ ತಿಳಿಸಿದ್ದಾರೆ.

Mysore prince naming ceremony held after December 17th.

ಡಿ. 17ರ ಬಳಿಕ ನಡೆಯಲಿದೆ ನಾಮಕರಣ ಶಾಸ್ತ್ರ :
62 ವರ್ಷಗಳ ನಂತರ ಯದುವಂಶದಲ್ಲಿ ಗಂಡು ಸಂತಾನವಾಗಿರುವ ಕುರಿತಾಗಿ ಹರ್ಷ ವ್ಯಕ್ತಪಡಿಸಿರುವ ರಾಜ ಮನೆತನ, ಮಗುವಿನ ಹೆಸರು ಹುಟ್ಟಿದ ನಕ್ಷತ್ರದಲ್ಲಿ ಬರುವಂತೆಯೇ ಇಡಲಾಗುವ ಕುರಿತಾಗಿ ಈಗಾಗಲೇ ಚಿಂತನೆ ನಡೆಸಿದೆ. ಹೆಸರಿನ ಜೊತೆಗೆ ನರಸಿಂಹರಾಜ ಒಡೆಯರ್ ಅವರ ಹೆಸರು ಇದ್ದೇ ಇರಲಿದೆ. ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಮಾಡಿರುವ ಯದುವೀರ್ ಸಂತಸಗೊಂಡಿದ್ದಾರೆ. ಇನ್ನು ಡಿ. 17ರ ಬಳಿಕ ನಾಮಕರಣದ ವಿಚಾರದ ಬಗ್ಗೆ ಚಿಂತಿಸಲಿದ್ದೇವೆ ಎಂದಿದ್ದಾರೆ ರಾಣಿ ಪ್ರಮೋದಾವೇವಿ.

ಪುತ್ತೂರಿನ ಪಂಚಮುಖಿ ಆಂಜನೇಯನ ಕೃಪೆಯಿಂದ ಯದುವೀರ್ ಗೆ ಗಂಡು ಮಗು?
ಬೆಂಗಳೂರಿನಲ್ಲೇ ಉಳಿಯಲಿದ್ದಾರೆ ರಾಣಿ ತ್ರಿಷಿಕಾ
ಇನ್ನು ಯದುವಂಶದ ಕುಡಿ ಜನ್ಮತಾಳುವುದಕ್ಕಿಂತ ಮುಂಚಿತವಾಗಿಯೇ ಯದುವೀರ್ ದಂಪತಿ ಬೆಂಗಳೂರಿನ ಅರಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದಾರೆ. ಕಾರ್ಯನಿಮಿತ್ತಮಾತ್ರವೇ ಮೈಸೂರಿಗೆ ಬರುತ್ತಿದ್ದರು. ಈಗ ಮಗುವಾದ ಬಳಿಕವು ಇದೇ ರೀತಿ ಮಾಡುವ ಕುರಿತಾಗಿ ಚಿಂತನೆ ನಡೆಸುತ್ತಿದ್ದಾರೆ. ಮಗುವಿನ ಆರೋಗ್ಯದ ಕುರಿತಾಗಿಯೂ ಯೋಚಿಸಿರುವ ಯದುವೀರ್ ದಂಪತಿ ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ ಈ ಕುರಿತಾಗಿ ಚಿಂತನೆ ನಡೆಸಿದ್ದಾರೆ.

ಮಗುವಿನ ಜಾತಕ ಬರೆಯಲು 18ಕ್ಕೂ ಬಲ್ಲ ಜ್ಯೋತಿಷಿಗಳಿಗೆ ಆಹ್ವಾನ
ಪುನರ್ವಸು ನಕ್ಷತ್ರದಲ್ಲಿ ಜನಿಸಿರುವ ಯದುವಂಶದ ಯುವ ರಾಜನ ಜನ್ಮ ನಕ್ಷತ್ರ, ರಾಶಿ ಫಲದ ಕುರಿತಾಗಿ ಸಾಮಾನ್ಯವಾಗಿ ಕುತೂಹಲ ಮೂಡಿಸಿದೆ. ಹೇಗಿರಲಿದೆ ಮಗುವಿನ ಮುಂದಿನ ಭವಿಷ್ಯ ಎಂಬುದರ ಕುರಿತಾಗಿ ಸಮಗ್ರ ಜಾತಕವನ್ನು ಬರೆಯಲು ಪ್ರಖಾಂಡ ಪಂಡಿತೋತ್ತಮರ 18 ಕ್ಕೂ ಹೆಚ್ಚು ಜ್ಯೋತಿಷಿಗಳ ತಂಡಕ್ಕೆ ರಾಜ ಮಾತೆ ಪ್ರಮೋದಾದೇವಿ ತಿಳಿಸಿದ್ದಾರಂತೆ.

English summary
Trishika and yaduveer wadiyar couple son Naming ceremony likely held on after December 17th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X