ನಂಜನಗೂಡು ಮಾರ್ಗದ ರಸ್ತೆ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ

Posted By:
Subscribe to Oneindia Kannada

ಬೆಂಗಳೂರು, ಜನವರಿ 24: ಸಚ್ಚಿದಾನಂದ ಆಶ್ರಮ ಬಳಿಯ ನವೀಕರಣಗೊಂಡಿರುವ ನಂಜನಗೂಡು ಮಾರ್ಗದ ರಸ್ತೆಯ ಕಾಮಗಾರಿಯನ್ನು ಮಂಗಳವಾರ ಮೈಸೂರಿನ ಸಂಸದ ಪ್ರತಾಪ್ ಸಿಂಹ ಪರಿಶೀಲಿಸಿದರು.

ಈ ವೇಳೆ ಮಾಧ್ಯಮಗಳ ಬಳಿ ಮಾತನಾಡಿದ ಸಂಸದರು, ''ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಿಗೆ ಕೋಟಿ ಕೋಟಿ ಹಣ ಬಿಡುಗಡೆ ಮಾಡಿದೆ. ಆದರೂ ಈ ರಸ್ತೆ ಕಾಮಗಾರಿಯನ್ನು ಟೆಂಡರ್ ದಾರರು ಸರಿಯಾಗಿ ಮಾಡಿಲ್ಲ. ಹಲವಾರು ಕೆಲಸಗಳು ಬಾಕಿ ಉಳಿದಿವೆ. ಹಾಗಾಗಿ, ಟೆಂಡರ್ ದಾರರಿಗೆ ಖಡಕ್ ಸೂಚನೆ ನೀಡಲಾಗಿದೆ. ಜೊತೆಯಲ್ಲಿ‌ ಮಹದೇವಪ್ಪ ಅವರ ಜೊತೆಯಲ್ಲಿ ಮಾತನಾಡಿ, ಅಧಿಕಾರಿಗಳಿಗೂ ಕೂಡ ಈ ಬಗ್ಗೆ ಕೆಲಸ ಶೀಘ್ರವಾಗಿ ಆಗಬೇಕೆಂದು ಸೂಚಿಸಿದ್ದೇನೆ'' ಎಂದರು.

Mysore MP Pratap Simha inspected Nanjanagudu highway work

''ಮೂರು ದಿನದಲ್ಲಿ ಸ್ಪೀಡ್ ಬ್ರೇಕರ್ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಾತ್ಕಾಲಿಕ ವಾಗಿ ಬೀದಿ ದೀಪಗಳನ್ನು ಅಳವಡಿಸಿ, ನಂತರ ಶಾಶ್ವತವಾಗಿ ದೀಪ ಅಳವಡಿಕೆಗೆ ಸೂಚನೆ ನೀಡಲಾಗಿದೆ'' ಎಂದು ತಿಳಿಸಿದರು.

ಅಧಿಕಾರಿಗಳು, ಬಿಜೆಪಿ ಮುಖಂಡ ರಾಜೇಂದ್ರ ಸೇರಿದಂತೆ ಇತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysore MP Pratap Simha, inspected Nanjanagudu highway work on Tuesday. During this inspection, he expressed displesure regarding the way of the work carried.
Please Wait while comments are loading...