ಮೈಸೂರು: ಹೆಚ್ಚು ಹಾಲು ಕರೆದವರಿಗೆ ಪ್ರಶಸ್ತಿ ವಿತರಿಸಿದ ದರ್ಶನ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 6 : ಮೈಸೂರಿನ ಜೆ.ಕೆ.ಮೈದಾನದಲ್ಲಿ ಮೈಸೂರು ಗೋಪಾಲಕರ ಸಂಘದಿಂದ ಆಯೋಜಿಸಲಾದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಗೋಪಾಲಕರು ಅತಿ ಹೆಚ್ಚು ಹಾಲು ಕರೆಯುವ ಮೂಲಕ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಬೆಂಗಳೂರಿನ ಪಾದರಾಯಪುರದ ಚೌಡೇಶ್ವರಿ ಡೇರಿ ಫಾರಂನ ಸಿ.ಸತೀಶ್ ಕುಮಾರ್ ಚೌಡಯ್ಯ ದಿನಕ್ಕೆ 42.2ಕೆ.ಜಿ ಹಾಲು ಕರೆಯುವ ಮೂಲಕ ಪ್ರಥಮ ಬಹುಮಾನ ಪಡೆದರು. ಈ ಮೂಲಕ 1 ಲಕ್ಷ ರೂಪಾಯಿ ನಗದು ಹಾಗೂ 2ಕೆ.ಜಿ ಬೆಳ್ಳಿದೀಪ ತಮ್ಮದಾಗಿಸಿಕೊಂಡರು. ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದ ಎಂ.ಜಿ.ಸೋಮಣ್ಣ 40.6 ಕೆ.ಜಿ ಹಾಲು ಕರೆದು ದ್ವಿತೀಯ ಬಹಮಾನ ಜತೆಗೆ ರೂ. 75 ಸಾವಿರ ನಗದು ಹಾಗೂ 1.1/2 ಕೆಜಿ ಬೆಳ್ಳಿ ದೀಪವನ್ನು ಪಡೆದುಕೊಂಡರು. ಈ ಮೂಲಕ ಮೊದಲ ಎರಡೂ ಬಹುಮಾನಗಳು ಬೆಂಗಳೂರು ನಗರದವರ ಪಾಲಾಯಿತು.[ಮೈಸೂರಿನ ಶ್ವಾನಪ್ರದರ್ಶನ ಸಕತ್ ಆಗಿತ್ತು ಕಣ್ರೀ...]

Mysore Milking contest: T Sathis got first prize

ಇನ್ನು ಮಂಡ್ಯದ ಹೊಸಹಳ್ಳಿಯ ಡಿ.ದ್ರುವಕುಮಾರ್ ಹೊನ್ನೇಗೌಡ 39.9 ಕೆ.ಜಿ ಹಾಲು ಕರೆಯುವ ಮೂಲಕ 50ಸಾವಿರ ರೂಪಾಯಿ ನಗದು ಹಾಗೂ 1ಕೆಜಿ ಬೆಳ್ಳಿ ದೀಪ ಜೇಬಿಗಿಳಿಸಿದರು. ಬೆಂಗಳೂರಿನ ಬೇಗೂರಿನ ಲಕ್ಷ್ಮಣ ಹೊಗೆಬಂಡಿ 39.7 ಕೆ.ಜಿ.ಹಾಲು ಕರೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದು 30 ಸಾವಿರ ರೂಪಾಯಿ ಮತ್ತು ಅರ್ಧ ಕೆ.ಜಿ ಬೆಳ್ಳಿ ದೀಪ ಪಡೆದುಕೊಂಡರು.[ನಂಜನಗೂಡು ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಕದನ ಕುತೂಹಲ]

Mysore Milking contest: T Sathis got first prize

ವಿಜೇತರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ ಸೃಜನ್ ಲೋಕೇಶ್ ಪ್ರಶಸ್ತಿ ವಿತರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru farmers won most of the prizes in highest milking contest organized by ‘Gopalakara Sangha’-a union of cow husbandry farmers at Mysuru.
Please Wait while comments are loading...